Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Team Udayavani, Nov 26, 2024, 3:52 PM IST
ನಟ ಧರ್ಮಕೀರ್ತಿರಾಜ್ ನಟನೆಯ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ದಾಸರಹಳ್ಳಿ’. ಎಂ.ಆರ್.ಶ್ರೀನಿವಾಸ್ ಈ ಚಿತ್ರದ ನಿರ್ದೇಶಕರು. ಅಂದಹಾಗೆ, ಈ ಶ್ರೀನಿವಾಸ್ ಬೇರಾರು ಅಲ್ಲ, ಕಪಿಲ್. ನೃತ್ಯ ನಿರ್ದೇಶನದಿಂದ ನಿರ್ದೇಶಕರಾದ ಕಪಿಲ್ ಈಗ ಅದೃಷ್ಟದ ಹಿಂದೆ ಬಿದ್ದು ತಮ್ಮ ಹೆಸರನ್ನು ಶ್ರೀನಿವಾಸ್ ಎಂದು ಬದಲಿಸಿಕೊಂಡಿದ್ದಾರೆ.
ದಾಸರಹಳ್ಳಿ ಸಿನಿಮಾ ಕುಡಿತದ ವಿರುದ್ಧ ಹೋರಾಡುವ ಕಥೆಯನ್ನು ಹೊಂದಿದೆ. ಕುಡಿತದಿಂದ ಅದೆಷ್ಟೋ ಸಂಸಾರಗಳು ಬೀದಿಗೆ ಬಿದ್ದಿವೆ. ಇದು ಗಂಭೀರವಾದಂತ ವಿಚಾರ. ಯುವಕರಿಗೆ ಮನದಟ್ಟಾಗಬೇಕು, ಕುಡಿತವೇ ಜೀವನ ಎಂದು ನಂಬಿರುವವರಿಗೆ ಇದರ ಅರಿವಾಗಬೇಕು. ಆಗ ಮಾತ್ರ ಒಂದಷ್ಟು ಬದಲಾವಣೆ ಸಾಧ್ಯ. ಬದುಕು ಸುಂದರವಾಗಲು ಸಾಧ್ಯ ಎಂಬ ಸಂದೇಶವನ್ನು ಸಿನಿಮಾ ಹೊಂದಿದೆ. ಪಿ. ಉಮೇಶ ಅವರು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸೆನ್ಸಾರ್‌ನಿಂದ ಯು/ಎ ಪ್ರಮಾಣ ಪತ್ರ ಸಿಕ್ಕಿದೆ.
ಚಿತ್ರ ಬೆಂಗಳೂರು ಸುತ್ತಮುತ್ತ ಮತ್ತು ಶಿವಮೊಗ್ಗದ ಸುಂದರ ತಾಣದಲ್ಲಿ ಚಿತ್ರೀಕರಣಗೊಂಡಿದೆ. ತಾರಾಬಳಗದಲ್ಲಿ ಹಿರಿಯ ಕಲಾವಿದರ ದಂಡೇ ಇದೆ. ಧರ್ಮ ಕೀರ್ತಿರಾಜ್, ನೇಹಾ, ಉಮೇಶ್ ರಾಜ್, ಥ್ರಿಲ್ಲರ್ ಮಂಜು, ಕೌರವ ವೆಂಕಟೇಶ್, ಎಂ.ಎಸ್ ಉಮೇಶ್, ಹೊನ್ನವಳ್ಳಿ ಕೃಷ್ಣ, ಬಿರಾದರ್ ಸೇರಿದಂತೆ 150ಕ್ಕೆ ಹೆಚ್ಚು ಹಿರಿಯ ಕಲಾವಿದರು ಇದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.