“ಕವಚ’ ಎದುರು “ದಶರಥ’
Team Udayavani, Mar 13, 2019, 6:04 AM IST
ಸುಮಾರು ಹದಿನೆಳು ವರ್ಷಗಳ ಹಿಂದೆ (2002ರಲ್ಲಿ) ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅಭಿನಯದ “ಕೋದಂಡ ರಾಮ’ ಚಿತ್ರದ ಮೂಲಕ ಒಟ್ಟಾಗಿ ಏಕಕಾಲಕ್ಕೆ ತೆರೆಮೇಲೆ ಬಂದಿದ್ದು ನಿಮಗೆ ನೆನಪಿರಬಹುದು. ಆದರೆ ಅದಾದ ಬಳಿಕ ರವಿಚಂದ್ರನ್ ಮತ್ತು ಶಿವಣ್ಣ ಅವರು ಮತ್ತೆ ಒಟ್ಟಾಗಿ ಅಭಿನಯಿಸಿರಲಿಲ್ಲ, ಇಬ್ಬರನ್ನೂ ಒಂದೇ ದಿನ ಥಿಯೇಟರ್‌ನಲ್ಲಿ ನೋಡೋದಕ್ಕೂ ಅಭಿಮಾನಿಗಳಿಗೆ ಆಗಿರಲಿಲ್ಲ.
ಆದ್ರೆ ಮುಂಬರುವ ಏಪ್ರಿಲ್ 5ರಂದು ಇಬ್ಬರನ್ನೂ ಒಂದೇ ದಿನ ಥಿಯೇಟರ್‌ನಲ್ಲಿ ನೋಡುವ ಅಪರೂಪದ ಅವಕಾಶ ಇಬ್ಬರ ಅಭಿಮಾನಿಗಳಿಗೂ ಒದಗಿ ಬಂದಿದೆ. ಹಾಗಂತ ಒಂದೇ ಚಿತ್ರದಲ್ಲಿ ಅಲ್ಲ, ಬೇರೆ ಬೇರೆ ಚಿತ್ರಗಳಲ್ಲಿ! ಹೌದು, ಏಪ್ರಿಲ್ 5ರಂದು ಶಿವರಾಜಕುಮಾರ್ ಅಭಿನಯದ “ಕವಚ’ ಮತ್ತು ರವಿಚಂದ್ರನ್ ಅಭಿನಯದ “ದಶರಥ’ ಚಿತ್ರಗಳು ಒಂದೇ ದಿನ ತೆರೆ ಕಾಣುತ್ತಿವೆ.
ಇನ್ನು “ಕವಚ’ ಚಿತ್ರದಲ್ಲಿ ಶಿವಣ್ಣ ಅಂಧನಾಗಿ ಕಾಣಿಸಿಕೊಂಡರೆ, “ದಶರಥ’ ಚಿತ್ರದಲ್ಲಿ ರವಿಚಂದ್ರನ್ ಲಾಯರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ಕವಚ’ ಸಸ್ಪೆನ್ಸ್, ಥ್ರಿಲ್ಲರ್ ಶೈಲಿಯ ಚಿತ್ರವಾದರೆ, “ದಶರಥ’ ಪಕ್ಕಾ ಫ್ಯಾಮಿಲಿ ಸಬ್ಜೆಕ್ಟ್ ಚಿತ್ರ. ಶಿವಣ್ಣ ಅಭಿನಯದ “ಕವಚ’ ಚಿತ್ರಕ್ಕೆ ಜಿವಿಆರ್ ವಾಸು ನಿರ್ದೇಶನವಿದ್ದು, ಕೃತಿಕಾ ಜಯಕುಮಾರ್, ಇಶಾ ಕೊಪ್ಪಿಕರ್, ಬೇಬಿ ಮೀನಾಕ್ಷಿ, ವಸಿಷ್ಠ ಸಿಂಹ ಮೊದಲಾದ ಕಲಾವಿದರ ತಾರಾಗಣವಿದೆ.
“ದಶರಥ’ ಚಿತ್ರಕ್ಕೆ ಎಂ.ಎಸ್ ರಮೇಶ್ ನಿರ್ದೇಶನವಿದ್ದು, ಸೋನಿಯಾ ಅಗರ್ವಾಲ್, ಮೇಘಶ್ರೀ, ರಂಗಾಯಣ, ಪ್ರಿಯಾಮಣಿ ಮೊದಲಾದ ಕಲಾವಿದರ ತಾರಾಗಣವಿದೆ. ಇನ್ನೊಂದು ವಿಶೇಷವೆಂದರೆ, ಈ ಎರಡೂ ಚಿತ್ರಗಳು ಸುಮಾರು ಎರಡೂವರೆ ವರ್ಷಗಳ ಹಿಂದೆಯೇ ಸೆಟ್ಟೇರಿದ್ದವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೋತ್ತಿಗಾಗಲೇ ಈ ಎರಡೂ ಚಿತ್ರಗಳು ತೆರೆ ಕಾಣಬೇಕಿತ್ತು.
ಆದರೆ ಬೇರೆ ಬೇರೆ ಕಾರಣಾಂತರಗಳಿಂದ ಎರಡೂ ಚಿತ್ರಗಳು ತೆರೆಗೆ ಬರೋದಕ್ಕೆ ತಡವಾಗಿದೆ. ಒಟ್ಟಾರೆ ಈಗ ಎರಡೂ ಚಿತ್ರಗಳಿಗೂ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಯಾವ ಚಿತ್ರ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಅನ್ನೋದು ಚಿತ್ರಗಳು ಬಿಡುಗಡೆಯಾದ ಮೇಲಷ್ಟೇ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.