ಸುಪಾರಿ ಕೊಲೆ ಹಿಂದೆ ದಯಾಳ್
Team Udayavani, Sep 6, 2018, 1:02 PM IST
ನಿರ್ದೇಶಕ ದಯಾಳ್ ಪದ್ಮನಾಭ್ “ಕರಾಳ ರಾತ್ರಿ’ ಚಿತ್ರದ ನಂತರ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಉತ್ತರ ಅವರೀಗ ಮತ್ತೂಂದು ನಾಟಕವನ್ನು ಚಿತ್ರವಾಗಿಸಲು ಅಣಿಯಾಗಿದ್ದಾರೆ. ಹೌದು, “ಸುಪಾರಿ ಕೊಲೆ’ ಎಂಬ ನಾಟಕವನ್ನು ಚಿತ್ರ ಮಾಡಲು ದಯಾಳ್ ತಯಾರಿ ನಡೆಸುತ್ತಿದ್ದಾರೆ. ಇದು ಶಿವಕುಮಾರ್ ಮಾವಲಿ ಅವರ ನಾಟಕ. ಈಗಾಗಲೇ “ಸುಪಾರಿ ಕೊಲೆ’ ನಾಟಕ ಪ್ರದರ್ಶನ ಕೂಡ ಕಂಡಿದೆ. ಅದನ್ನೇ ಇಟ್ಟುಕೊಂಡು ಚಿತ್ರ ಮಾಡಲು ನಿರ್ಧರಿಸಿದ್ದಾರೆ ದಯಾಳ್ ಪದ್ಮನಾಭ್. ಈಗಾಗಲೇ ಆ ಕುರಿತು ಒಂದು ಸುತ್ತಿನ ಮಾತುಕತೆ ನಡೆದಿದೆ. ಮುಂದಿನ ದಿನಗಳಲ್ಲಿ ಅದಕ್ಕೆ ಇನ್ನಷ್ಟೇ ಸಿದ್ಧತೆಗಳು ನಡೆಯಬೇಕಿದೆ.
ಒಂದು ಗಂಟೆ ಹದಿನೇಳು ನಿಮಿಷದ “ಸುಪಾರಿ ಕೊಲೆ’ ನಾಟಕ ಸುಪಾರಿ ಕೊಟ್ಟವರು ಮತ್ತು ಕೊಲೆ ಮಾಡೋಕೆ ಹೋದಂತವರಿಗೆ ಒಂದು ಸತ್ಯ ಗೋಚರವಾಗುತ್ತೆ ಅದೇ ಕಥೆ. ಶಿವಕುಮಾರ್ ಮಾವಲಿ ಅವರು ಮೊದಲು ಕಥೆ ಬರೆಯಲು ಹೊರಟಿದ್ದರು. ಆ ಬಳಿಕ ನಾಟಕ ಮಾಡಿದ್ದಾರೆ. ಈಗ ಸಿನಿಮಾ ಆಗಲಿದೆ. ಶಿವಮೊಗ್ಗದ ಹೊಂಗಿರಣ ತಂಡ ನಾಟಕ ಪ್ರದರ್ಶನ ಮಾಡಿತ್ತು. ಮೊದಲ ಪ್ರದರ್ಶನಕ್ಕೆ ಮೆಚ್ಚುಗೆ ಸಿಕ್ಕಿತ್ತು. ಈಗ ಮಾವಲಿ ಕಥೆ ಪುಸ್ತಕವಾಗುತ್ತಿದ್ದು, ಅದನ್ನು ನಿರ್ದೇಶಕ ದಯಾಳ್ ಅವರೇ ಪ್ರಕಟಿಸಲಿದ್ದಾರೆ.
ದಯಾಳ್ ಪದ್ಮನಾಭ್ ನಿರ್ದೇಶಿಸಿ, ನಿರ್ಮಿಸಿರುವ “ಪುಟ 109′ ಚಿತ್ರ ಕೂಡ ತೆರೆಗೆ ಬರಲು ಸಿದ್ಧವಾಗಿದೆ. ಅಕ್ಟೋಬರ್ 5 ರಂದು ಚಿತ್ರ ಬಿಡುಗಡೆ ಮಾಡಲು ಯೋಚಿಸಿದ್ದಾರೆ ದಯಾಳ್. ಜೆಕೆ ಮತ್ತು ನವೀನ್ ಕೃಷ್ಣ ಅವರು ನಟಿಸಿರುವ ಈ ಚಿತ್ರ ಒಂದು ಕ್ರೈಮ್ ಥ್ರಿಲ್ಲರ್ ಕಥೆ ಹೊಂದಿದೆ. ಅರವಿಂದ್ ಅವರು ಕಥೆ ಬರೆದಿದ್ದು, ದಯಾಳ್ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಿರ್ಮಾಣವೂ ಇವರದೇ. ಇವರ ಜೊತೆಗೆ ಅವಿನಾಶ್ ಯು ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. “ಪುಟ 109′ ಚಿತ್ರದಲ್ಲಿ ವೈಷ್ಣವಿ, ಶ್ರೀ, ವಿಕ್ಟರಿ ವಾಸು ಇತರರು ನಟಿಸಿದ್ದಾರೆ. ಪಿಕೆಎಚ್ ದಾಸ್ ಛಾಯಾಗ್ರಹಣವಿದೆ. ಗಣೇಶ್ ನಾರಾಯಣ್ ಸಂಗೀತವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.