ವಿಜಯರಾಘವೇಂದ್ರ ಮೇಲೆ ದಯಾಳ್‌ಗೆ ಬೇಸರ
Team Udayavani, Jul 11, 2017, 10:30 AM IST
ದಯಾಳ್ ಪದ್ಮನಾಭ್ ನಿರ್ದೇಶನದ “ಟಾಸ್’ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಆದರೆ, ಚಿತ್ರದ ಪ್ರಚಾರ ಕಾರ್ಯಕ್ಕೆ ನಾಯಕ ವಿಜಯರಾಘವೇಂದ್ರ ಬಾರದೆ, ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ನಿರ್ದೇಶಕ ದಯಾಳ್ ಬೇಸರ ವ್ಯಕ್ತಪಡಿಸಿದ್ದಾರೆ. “ಟಾಸ್’ ಚಿತ್ರ ಮುಗಿದು ಬಹಳ ದಿನಗಳೇ ಆಗಿದೆ.
ಆದರೆ, ಕಾರಣಾಂತರದಿಂದ ಬಿಡುಗಡೆ ತಡವಾಗಿದೆ. ಈಗ ಚಿತ್ರ ಬಿಡುಗಡೆಗೆ ತಯಾರಿ ಮಾಡಿಕೊಂಡಿದ್ದರೂ, ವಿಜಯರಾಘವೇಂದ್ರ ಮಾತ್ರ, ಪ್ರಚಾರ ಕಾರ್ಯಕ್ಕೆ ಬರುತ್ತಿಲ್ಲ. ಅಷ್ಟೇ ಅಲ್ಲ, ಅವರಿಗೆ ಅನೇಕ ಸಲ ಫೋನ್ ಮಾಡಿದರೂ ಸರಿಯಾಗಿ ಸ್ಪಂದಿಸುತ್ತಿಲ್ಲ. ಸಂದೇಶ ಕಳುಹಿಸಿದರೂ, ಮರು ಉತ್ತರವನ್ನೂ ಕೊಡುತ್ತಿಲ್ಲ.
ಅವರು ಯಾಕೆ ಹೀಗೆ ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಚಿತ್ರ ಲೇಟ್ ಆಗಿದ್ದಕ್ಕೆ ಅವರಿಗೆ ಬೇಸರವಿರಬಹುದೇನೋ, ಆದರೆ, ನಮಗೆ ಯಾವುದಕ್ಕೂ ಉತ್ತರ ಕೊಡದೆ, ಮೌನವಾದರೆ ಗೊತ್ತಾಗುವುದಾದರೂ ಹೇಗೆ. ಅವರು, ಪ್ರಚಾರಕ್ಕೆ ಬರಲಿ, ಬಿಡಲಿ ಚಿತ್ರವನ್ನು ನಾನು ರಿಲೀಸ್ ಮಾಡ್ತೀನಿ.
ನಾವಿಬ್ಬರು ಚೆನ್ನಾಗಿಯೇ ಇದ್ದೇವೆ. ಆದರೆ, ಯಾಕೆ ಅವರು ಸಿನಿಮಾ ಪ್ರಚಾರಕ್ಕೆ ಬರುತ್ತಿಲ್ಲವೋ ಗೊತ್ತಿಲ್ಲ. ಅವರು ರೆಸ್ಪಾನ್ಸ್ ಮಾಡದಿದ್ದರೂ ಪರವಾಗಿಲ್ಲ. ನಮ್ಮ ಚಿತ್ರ ರಿಲೀಸ್ ಆಗುವುದಂತೂ ಗ್ಯಾರಂಟಿ’ ಎಂದು ಹೇಳುತ್ತಾರೆ ದಯಾಳ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.