“ಡಿಯರ್ ಕಾಮ್ರೆಡ್’: ವೈರಲ್ ಆಯ್ತು ಲಿಪ್‍ಲಾಕ್ ಸೀನ್!
Team Udayavani, Mar 17, 2019, 11:44 AM IST
ತೆಲುಗಿನ “ಗೀತಾ ಗೋವಿಂದಂ’ ಖ್ಯಾತಿಯ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮತ್ತೆ “ಡಿಯರ್ ಕಾಮ್ರೆಡ್’ ಮೂಲಕ ಒಂದಾಗಿದ್ದು, ಇದೀಗ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೌದು, ಟಾಲಿವುಡ್ನ ಬಹುನಿರೀಕ್ಷಿತ ಈ ಸಿನಿಮಾದ ಟೀಸರ್, ತೆಲುಗು, ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ರಿಲೀಸ್ ಆಗಿದೆ.
ಟೀಸರ್ 1 ನಿಮಿಷ 7 ಸೆಕೆಂಡ್ ಅವಧಿಯ ಟೀಸರ್ ಇದಾಗಿದ್ದು, “ಕಡಲಂತೆ ಕಾದ ಕಣ್ಣು, ನದಿಯಂತೆ ಓಡುವ ಮನಸು” ಎಂಬ ಹಾಡಿನ ಸಾಲಿನೊಡನೆ ಟೀಸರ್ ಪ್ರಾರಂಭವಾಗುತ್ತದೆ. ಅಲ್ಲದೇ ನಟ ವಿಜಯ್ ಆ್ಯಂಗ್ರಿ ಯಂಗ್ಮ್ಯಾನ್ ಹಾಗೂ ರೊಮ್ಯಾಂಟಿಕ್ ಲುಕ್‍ನಲ್ಲಿ ಕಾಣಿಸಿಕೊಂಡರೆ, ನಟಿ ರಶ್ಮಿಕಾ ಸಖತ್ ಬೋಲ್ಡ್ ಆಗಿ ಮಿಂಚಿದ್ದಾರೆ. ಈ ಹಿಂದಿನ ಚಿತ್ರ “ಗೀತಾ ಗೋವಿಂದಂ’ನಂತೆಯೇ ಇಲ್ಲಿಯೂ ರಶ್ಮಿಕಾ ಹಾಗೂ ವಿಜಯ್ ಲಿಪ್‍ಲಾಕ್ ಸೀನ್ ಇದ್ದು ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
Teasers of #DearComrade want more? coming soon!
తెలుగు : https://t.co/4zCUKBsNkY
ಕನ್ನಡ : https://t.co/dQJhUGAf5W
தமிழ் :https://t.co/2sjQubzSlr
മലയാളം : https://t.co/KNbuhsjfll— Rashmika Mandanna (@iamRashmika) March 17, 2019
ಇನ್ನು ಭರತ್ ಕಮ್ಮ ಕಥೆ ಬರೆದು ನಿದೇಶಿಸಿರುವ ಈ ಚಿತ್ರದ ಟೀಸರ್ ಲಿಂಕ್‍ಗಳನ್ನು ನಟಿ ರಶ್ಮಿಕಾ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದು “ಡಿಯರ್ ಕಾಮ್ರೆಡ್ ಟೀಸರ್ ಇದು, ಹೆಚ್ಚು ಬಯಸುವಿರಾ? ಶೀಘ್ರದಲ್ಲೇ ಬರಲಿದೆ!” ಎಂದು ಟ್ವೀಟ್ ಮಾಡಿದ್ದಾರೆ. ನವೀನ್ ಯೆರನೆನಿ, ವೈ.ರವಿಶಂಕರ್, ಮೋಹನ್ ಮತ್ತು ಯಶ್ ರಂಗಿನೇನಿ ಜಂಟಿ ನಿರ್ಮಾಣದ ಈ ಚಿತ್ರಕ್ಕೆ ಜಸ್ಟಿನ್ ಪ್ರಭಾಕರನ್ ಸಂಗೀತವಿದ್ದು, ಮೇ 31ರಂದು ಚಿತ್ರ ತೆರೆಗೆ ಬರಲು ಸಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Havyaka ಭಾಷೆಗೆ ಅಕಾಡೆಮಿ ಅಥವಾ ಅಧ್ಯಯನ ಪೀಠ ಅಗತ್ಯ: ರವಿಶಂಕರ್ ಭಟ್
Ramnagar; 30ಕ್ಕೂ ಅಧಿಕ ಊರುಗಳಲ್ಲಿ ಆತಂಕ ಹುಟ್ಟಿಸಿದ್ದ ಕಾಡಾನೆ ಸೆರೆ
Yakshagana;ಅಧ್ಯಯನ, ಪಾತ್ರ ಜ್ಞಾನದಿಂದಷ್ಟೇ ಕಲಾವಿದ ರಂಗಸ್ಥಳದಲ್ಲಿ ಮೆರೆಯಲು ಸಾಧ್ಯ
Drugs; ಮಾರಾಟ, ಸೇವನೆ : ಮಂಗಳೂರು 1,090, ಉಡುಪಿ 116 ಪ್ರಕರಣ ದಾಖಲು
Udupi; ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೋಗಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.