ಡಿ 29ಕ್ಕೆ ಚಮಕ್ ಜೊತೆಗೆ ಹಂಬಲ್ ಪೊಲಿಟೀಶಿಯನ್ ಬಿಡುಗಡೆ
Team Udayavani, Dec 21, 2017, 6:04 PM IST
ಹಂಬಲ್ ಪೊಲಿಟೀಶಿಯನ್ ನೋಗ್‌ರಾಜ್- ಕಳೆದ ಒಂದು ವರ್ಷದಿಂದ ಈ ಹೆಸರು ಓಡಾಡುತ್ತಲೇ ಇದೆ. ಅದಕ್ಕೆ ಕಾರಣ ದಾನಿಶ್ ಸೇಠ್. ದಾನಿಶ್ ಸೇಠ್ ಮೊದಲ ಬಾರಿಗೆ ನಾಯಕರಾಗಿ ನಟಿಸಿದ ಚಿತ್ರವಿದು. ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಡಿಸೆಂಬರ್ 29 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನು ಸಾದ್ ಖಾನ್ ನಿರ್ದೇಶಿಸಿದ್ದು, ಪುಷ್ಕರ್, ರಕ್ಷಿತ್ ಶೆಟ್ಟಿ ಹಾಗೂ ಹೇಮಂತ್ ರಾವ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ ನಟಿಸಿದ್ದಾರೆ.
ನಿರ್ಮಾಪಕ ಪುಷ್ಕರ್ ಈ ಬಾರಿಯೂ “ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್’ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟಿದ್ದಾರೆ. ಅದಕ್ಕೆ ಕಾರಣ, ಕಳೆದ ವರ್ಷದ ಕೊನೆಯಲ್ಲಿ ಬಿಡುಗಡೆ ಮಾಡಿದ ಚಿತ್ರ ಕೊಟ್ಟ ಯಶಸ್ಸು. ಹೌದು, ಕಳೆದ ವರ್ಷದ ಡಿಸೆಂಬರ್ ಕೊನೆಯಲ್ಲಿ ರಕ್ಷಿತ್ ಶೆಟ್ಟಿ ನಾಯಕರಾಗಿದ್ದ “ಕಿರಿಕ್ ಪಾರ್ಟಿ’ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು.
ಆ ಚಿತ್ರದಲ್ಲಿ ಪುಷ್ಕರ್ ಕೂಡಾ ಕೈ ಜೋಡಿಸಿದ್ದರು. ಈಗ ಆದೇ ವಿಶ್ವಾಸದೊಂದಿಗೆ ಡಿಸೆಂಬರ್ ಕೊನೆಯಲ್ಲಿ “ಹಂಬಲ್ ಪೊಲಿಟಿಶಿಯನ್ ನೋಗ್‌ರಾಜ್’ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ. “ಕಳೆದ ವರ್ಷದ ಕೊನೆಯಲ್ಲಿ ತೆರೆಕಂಡ “ಕಿರಿಕ್ ಪಾರ್ಟಿ’ ದೊಡ್ಡ ಯಶಸ್ಸು ಕೊಟ್ಟಿತು. ಈಗ ಈ ಚಿತ್ರವೂ ಆದೇ ರೀತಿ ಗೆಲುವು ಕೊಡುತ್ತದೆ ಎಂಬ ವಿಶ್ವಾಸ ನಮಗಿದೆ. “ಕಿರಿಕ್ ಪಾರ್ಟಿ’ ಚಿತ್ರ ವಿದೇಶದಲ್ಲೂ ಒಳ್ಳೆಯ ಗಳಿಕೆ ಮಾಡಿತ್ತು. ನೋಗ್‌ರಾಜ್ ಆದನ್ನು ಮೀರಿಸುವ ನಿರೀಕ್ಷೆ ಇದೆ. ಏಕೆಂದರೆ ದಾನಿಶ್‌ಗೆ ವಿದೇಶದಲ್ಲೂ ಸಾಕಷ್ಟು ಮಂದಿ ಅಭಿಮಾನಿಗಳಿದ್ದಾರೆ’ ಎನ್ನುವುದು ಪುಷ್ಕರ್ ಮಾತು.
ವರ್ಷದ ಕೊನೆಯಲ್ಲಿ, ಹೊಸ ವರ್ಷದ ಆರಂಭದಲ್ಲಿ ಚಿತ್ರ ಬಿಡುಗಡೆ ಮಾಡಲು ಕೂಡಾ ಒಂದು ಕಾರಣವಿದೆಯಂತೆ. ಅದು ಸಿನಿಮಾ ಪ್ರೀತಿಸುವವರಿಗಾಗಿ. ಹೌದು, ಕೆಲವರು ಹೊಸ ವರ್ಷವನ್ನು ಪಾರ್ಟಿ ಮಾಡಿ ಅಥವಾ ಇನ್ಯಾವುದೋ ರೂಪದಲ್ಲಿ ಸೆಲೆಬ್ರೆಟ್ ಮಾಡಿದರೆ, ಅನೇಕರು ಒಳ್ಳೆಯ ಸಿನಿಮಾವನ್ನು ಕುಟುಂಬ ಸಮೇತ ನೋಡುವ ಮೂಲಕ ಖುಷಿಯಿಂದ ಹೊಸ ವರ್ಷವನ್ನು ಆರಂಭಿಸುತ್ತಾರಂತೆ. ಆ ಉದ್ದೇಶದಿಂದಲೂ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ಹೇಳುತ್ತಾರೆ. ಚಿತ್ರದ ಸಿಂಗಲ್ ಸ್ಕ್ರೀನ್‌ಗಳ ವಿತರಣೆಯನ್ನು ಜಯಣ್ಣ ಮಾಡುತ್ತಿದ್ದು, ಮಲ್ಟಿಪ್ಲೆಕ್ಸ್ ಅನ್ನು ಪುಷ್ಕರ್ ಅಂಡ್ ಟೀಂ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.