ಟಾಲಿವುಡ್ ನಲ್ಲಿ ಶ್ರೀಲೀಲಾಗೆ ಬೇಡಿಕೆ
Team Udayavani, Oct 26, 2021, 9:03 AM IST
“ಕಿಸ್’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಅಂಗಳಕ್ಕೆ ಪರಿಚಯವಾಗಿದ್ದ ಶ್ರೀಲೀಲಾ ಬಳಿಕ “ಭರಾಟೆ’ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆಕಂಡುಕೊಂಡ ನಟಿ.
ಕನ್ನಡದಲ್ಲಿ ಎರಡು ಚಿತ್ರವಾದ ಬಳಿಕ ತೆಲುಗಿನತ್ತ ಮುಖ ಮಾಡಿದ್ದ ಶ್ರೀಲೀಲಾ, ಇತ್ತೀಚೆಗಷ್ಟೇ “ಪೆಲ್ಲಸಂದಡಿ’ ಚಿತ್ರದ ಮೂಲಕ ಟಾಲಿವುಡ್‌ಗೂ ಎಂಟ್ರಿಯಾಗಿದ್ದರು.
ಇನ್ನು “ಪೆಲ್ಲಸಂದಡಿ’ ಚಿತ್ರಕ್ಕೆ ಬಾಕ್ಸಾಫೀಸ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದರೂ, ಚಿತ್ರದ ನಾಯಕ ನಟಿ ಶ್ರೀಲೀಲಾ ಮೊದಲ ಚಿತ್ರದಲ್ಲೇ ತೆಲುಗು ಸಿನಿಪ್ರಿಯರು ಮತ್ತು ತೆಲುಗು ಸಿನಿಮಾ ಮಂದಿ ಗಮನ ಸೆಳೆಯಲು ಯಶಸ್ವಿಯಾಗಿದ್ದಾರೆ.
“ಪೆಲ್ಲಸಂದಡಿ’ ಚಿತ್ರದಲ್ಲಿ ಶ್ರೀಲೀಲಾ ಅಭಿನಯದ ಬಗ್ಗೆ ಟಾಲಿವುಡ್ ಮಂದಿ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. “ಪೆಲ್ಲಸಂದಡಿ’ ಬಿಡುಗಡೆಯಾಗಿ ಎರಡು ವಾರವಾಗುವುದರೊಳಗೆ, ಟಾಲಿವುಡ್‌ನಲ್ಲಿ ಅಲ್ಲು ಕುಟುಂಬ ಒಡೆತನದ “ಗೀತಾ ಆರ್ಟ್ಸ್’ ನಿರ್ಮಾಣ ಸಂಸ್ಥೆಯ ನಿರ್ಮಾಣದ ಮೂರು ಸಿನಿಮಾಗಳಲ್ಲಿ ಅಭಿನಯಿಸುವ ಆಫರ್ ಶ್ರೀಲೀಲಾ ಅವರನ್ನು ಹುಡುಕಿಕೊಂಡು ಬಂದಿದೆ. ಇದಲ್ಲದೆ ತೆಲುಗಿನಲ್ಲಿ ಹಲವು ಚಿತ್ರಗಳ ಆಫರ್ ಶ್ರೀಲೀಲಾ ಅವರನ್ನು ಹುಡುಕಿಕೊಂಡು ಬರುತ್ತಿವೆ.
ತೆಲುಗು ನಟ ರವಿತೇಜ ಅಭಿನಯದ ಮುಂಬರುವ ಹೊಸ ಸಿನಿಮಾದಲ್ಲೂ ಶ್ರೀಲೀಲಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನು ಶ್ರೀಲೀಲಾ ಕನ್ನಡದಲ್ಲಿ ಸದ್ಯ “ಬೈ ಟು ಲವ್’ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದು, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿದ್ದು, ಹೊಸ ವರ್ಷದ ಆರಂಭದಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ:ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್
ಒಟ್ಟಾರೆ ರಶ್ಮಿಕಾ ಮಂದಣ್ಣ ನಂತರ ಮತ್ತೂಬ್ಬ ನಟಿ ತೆಲುಗು ಚಿತ್ರರಂಗದಲ್ಲಿ ಮೊದಲ ಚಿತ್ರದಲ್ಲೇ ಅಲ್ಲಿನ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗಿದ್ದು, ರಶ್ಮಿಕಾ ಮಂದಣ್ಣ ಅವರಂತೆ ಶ್ರೀಲೀಲಾ ಕೂಡ ಮುಂದಿನ ದಿನಗಳಲ್ಲಿ ಟಾಲಿವುಡ್ ಅಂಗಳಲ್ಲಿ ಕಮಾಲ್ ಮಾಡಿ ಸ್ಟಾರ್ ನಟಿಯ ಪಟ್ಟವನ್ನು ಗಿಟ್ಟಿಸಿಕೊಳ್ಳುತ್ತಾರಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಹೊಸ ಸೇರ್ಪಡೆ
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.