ಅಜೇಯ್ ರಾವ್ ನಟನೆಯ “ಧೈರ್ಯಂ” ಜುಲೈ 21ಕ್ಕೆ ರಿಲೀಸ್
Team Udayavani, Jul 13, 2017, 12:58 PM IST
ಅಜೇಯ್ ರಾವ್ ನಾಯಕರಾಗಿರುವ “ಧೈರ್ಯಂ’ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಜುಲೈ 21ರಂದು ಚಿತ್ರ ರಾಜ್ಯಾದ್ಯಂತ ತೆರೆಕಾಣುತ್ತಿದೆ. ಅಜೇಯ್ ರಾವ್ ತುಂಬಾ ನಿರೀಕ್ಷೆ ಇಟ್ಟಿರುವ ಸಿನಿಮಾವಿದು. ಅದಕ್ಕೆ ಕಾರಣ ಮೊದಲ ಬಾರಿಗೆ ಅಜೇಯ್ ಆ್ಯಕ್ಷನ್ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿರೋದು. “ನನಗೆ ಇದು ಹೊಸ ಅನುಭವ. ಈ ತರಹದ ಒಂದು ಕಥೆಗೆ ನಾನು ಎದುರು ನೋಡುತ್ತಿದ್ದೆ. ಈಗ ಸಿಕ್ಕಿದೆ. ನಿರ್ದೇಶಕ ಶಿವತೇಜಸ್ ಅಂದುಕೊಂಡಂತೆ
ಸಿನಿಮಾ ಮಾಡಿದ್ದಾರೆ. ಮಧ್ಯಮ ವರ್ಗದ ಹುಡುಗನೊಬ್ಬನ ಕಥೆಯನ್ನು ಈ ಸಿನಿಮಾ ಆಧರಿಸಿದೆ’ ಎನ್ನುವುದು ಅಜೇಯ್ ಮಾತು.
ಚಿತ್ರದಲ್ಲಿ ಅಜೇಯ್ ಎದುರು ವಿಲನ್ ಆಗಿ ರವಿಶಂಕರ್ ನಟಿಸಿದ್ದಾರೆ. ರವಿಶಂಕರ್ ಎದುರು ಡೈಲಾಗ್ ಹೇಳುವಾಗ ಅಜೇಯ್ “ಧೈರ್ಯ, ಧೈರ್ಯಂ’ ಎಂದು ಮನಸಿನಲ್ಲಿ ಅಂದುಕೊಂಡೇ ಡೈಲಾಗ್ ಹೇಳಿದರಂತೆ. ಚಿತ್ರದಲ್ಲಿ ಅದಿತಿ
ನಾಯಕಿಯಾಗಿ ನಟಿಸಿದ್ದಾರೆ. ಅವರ ಪಾತ್ರ ಪಕ್ಕದ್ಮನೆ ಹುಡುಗಿಯಂತೆ ಇದ್ದು, ಜನರಿಗೆ ಇಷ್ಟವಾಗುವ ವಿಶ್ವಾಸವಿದೆಯಂತೆ.
ಚಿತ್ರದಲ್ಲಿ ರವಿಶಂಕರ್ ದುಷ್ಟ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. “ಸಿನಿಮಾದುದ್ದಕ್ಕೂ ಸಾಗಿಬರುವ ಗಟ್ಟಿಪಾತ್ರ ಸಿಕ್ಕಿದೆ. ಒಂದು ಕಡೆ ಕುಟುಂಬದ ಸಮಸ್ಯೆ, ಇನ್ನೊಂದು ಕಡೆ ಕೆಲಸ … ಎರಡನ್ನು ಹೇಗೆ
ನಿಭಾಯಿಸುತ್ತಾನೆ ಎಂಬುದು ಇಲ್ಲಿ ಹೈಲೈಟ್. ಚಿತ್ರದ ಪ್ರತಿ ಸನ್ನಿವೇಶ ತುಂಬಾ ಚೆನ್ನಾಗಿ ಮೂಡಿಬಂದಿದೆ’ ಎನ್ನುವುದು
ರವಿಶಂಕರ್ ಮಾತು. ಚಿತ್ರವನ್ನು ಡಾ.ರಾಜು ನಿರ್ಮಿಸಿದ್ದಾರೆ.
“ಧೈರ್ಯವೊಂದಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುದಕ್ಕೆ ನಾನೇ ಕಾರಣ. ವೃತ್ತಿಯಲ್ಲಿ ವೈದ್ಯನಾಗಿರುವ ನಾನು ಈಗ ಧೈರ್ಯ ಮಾಡಿ ಸಿನಿಮಾ ಮಾಡಿದ್ದೇನೆ’ ಎಂಬುದು ಅವರ ಮಾತು. ನಿರ್ದೇಶಕ ಶಿವ ತೇಜಸ್ ಅವರಿಗೆ
ಸಿನಿಮಾಕ್ಕೆ ಎಲ್ಲೆಡೆಯಿಂದ ಬೇಡಿಕೆ ಬರುತ್ತಿರುವ ಖುಷಿ ಇದೆಯಂತೆ. ಹೊಸ ಬಗೆಯ ಮೈಂಡ್‌ಗೆಮ್
ಸಿನಿಮಾವಾಗಿ ಎಲ್ಲರಿಗೂ ಇಷ್ಟವಾಗುತ್ತದೆ ಎಂಬುದು ಶಿವತೇಜಸ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.