ಬ್ಯಾಕ್ ಟು ಬ್ಯಾಕ್ ಧನಂಜಯ್ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ
Team Udayavani, Jul 29, 2021, 10:27 AM IST
ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬಿಝಿಯಾಗಿರುವ ನಟ ಯಾರು ಎಂಬ ಪ್ರಶ್ನೆಗೆ ಚಿತ್ರರಂಗದ ಮಂದಿಯಿಂದ ಬರುವ ಉತ್ತರ ನಟ ಡಾಲಿ ಧನಂಜಯ್. ಹೌದು, ಕನ್ನಡ ಚಿತ್ರರಂಗದಲ್ಲಿ ನಾಯಕನಾಗಿ ಮತ್ತು ಖಳನಾಯಕನಾಗಿ ಎರಡೂ ಥರದ ಪಾತ್ರಗಳಲ್ಲೂ ಗುರುತಿಸಿ ಕೊಂಡಿರುವ ನಟ ಧನಂಜಯ್ ಸದ್ಯದ ಮಟ್ಟಿಗೆ ಫುಲ್ ಬಿಝಿ.
ಈ ವರ್ಷದ ಆರಂಭದಲ್ಲಿಯೇ ಧನಂಜಯ್ ಅಭಿನಯಿಸಿದ್ದ “ಪೊಗರು’ ಮತ್ತು “ಯುವರತ್ನ’ ಚಿತ್ರಗಳು ಬಿಡುಗಡೆಯಾಗಿದ್ದು, ಎರಡೂ ಚಿತ್ರಗಳಲ್ಲೂ ಪ್ರೇಕ್ಷಕರು ಧನಂಜಯ್ ಪಾತ್ರವನ್ನು ಮತ್ತು ಅಭಿನಯವನ್ನು ಮೆಚ್ಚಿಕೊಂಡಿದ್ದರು. ಇದು ವರ್ಷದ ಮೊದಲರ್ಧದಷ್ಟೇ ಭರ್ಜರಿಯಾಗಿ ಸಿನಿ ಅಕೌಂಟ್ ಓಪನ್ ಮಾಡಿರುವ ಧನಂಜಯ್, ವರ್ಷದ ದ್ವಿತೀಯರ್ಧದಲ್ಲಿ ಇನ್ನಷ್ಟು ಸಿನಿಮಾಗಳ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.
ಹೌದು, ಕೋವಿಡ್ ಎರಡನೇ ಲಾಕ್‌ಡೌನ್ ಬಳಿಕ ಧನಂಜಯ್ ಅಭಿನಯಿಸಿರುವ ಮತ್ತೂಂದು ಬಿಗ್ ಬಜೆಟ್ ಚಿತ್ರ “ಸಲಗ’ ತೆರೆಗೆ ಬರಲು ರೆಡಿಯಾಗುತ್ತಿದೆ. ದುನಿಯಾ ವಿಜಯ್ ನಟಿಸಿ, ನಿರ್ದೇಶಿಸಿರುವ “ಸಲಗ’ ಚಿತ್ರದಲ್ಲಿ ಧನಂಜಯ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರ ಇದೇ ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗುತ್ತಿದೆ. ಇದರ ಬೆನ್ನಲ್ಲೇ ಧನಂಜಯ್ ನಾಯಕನಾಗಿ ಅಭಿನಯಿಸಿರುವ “ಬಡವ ರಾಸ್ಕಲ್’ ಚಿತ್ರದ ಬಹುತೇಕ ಕೆಲಸಗಳು ಕೂಡ ಪೂರ್ಣಗೊಂಡಿದ್ದು, ಚಿತ್ರತಂಡ ನಿಧಾನವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.
ಇದನ್ನೂ ಓದಿ:ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್ ಇಯರ್ (1) ಬಿಡುಗಡೆ: ಇದರ ವಿಶೇಷವೇನು?
ಇದಲ್ಲದೆ “ರತ್ನನ್ ಪ್ರಪಂಚ’, “ತೋತಾಪುರಿ’, “ಭೈರಾಗಿ’, ತೆಲುಗಿನ “ಪುಷ್ಪಾ’ ಚಿತ್ರದ ಚಿತ್ರೀಕರಣ ಕೂಡ ಪೂರ್ಣಗೊಂಡಿದ್ದು, ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಅಂದು ಕೊಂಡಂತೆ ನಡೆದರೆ ಈ ಚಿತ್ರಗಳು ಕೂಡ ಈ ವರ್ಷದ ಕೊನೆಯಲ್ಲಿ ತೆರೆಗೆ ಬರುವ ಯೋಚನೆಯಲ್ಲಿವೆ.
ಇದರೊಂದಿಗೆ ಧನಂಜಯ್ ನಾಯಕನಾಗಿ ಅಭಿನಯಿಸುತ್ತಿರುವ “ಹೆಡ್ ಆ್ಯಂಡ್ ಬುಷ್’ ಮತ್ತು “ಮಾನ್ಸೂನ್ ರಾಗ’, “ಡಾಲಿ’ ಚಿತ್ರದ ಕೆಲಸಗಳು ಕೂಡ ಜೋರಾಗಿ ನಡೆಯುತ್ತಿದ್ದು, ಈ ಚಿತ್ರಗಳು ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಬಹುದು ಎನ್ನಲಾಗುತ್ತಿದೆ.
ಚಿತ್ರರಂಗದ ಮೂಲಗಳ ಪ್ರಕಾರ, ಸದ್ಯದ ಮಟ್ಟಿಗೆ ಧನಂಜಯ್ ಅಭಿನಯದ ಎರಡು ಚಿತ್ರಗಳು ಬಿಡುಗಡೆಯಾಗಿದ್ದು,ಈ ವರ್ಷದ ಕೊನೆಯೊಳಗೆ ಏನಿಲ್ಲವೆಂದರೂ ಇನ್ನೂ ಐದಾರು ಚಿತ್ರಗಳು ತೆರೆ ಕಾಣಬಹುದು ಎಂಬ ನಿರೀಕ್ಷೆಯಿದೆ
ತೆಲುಗಿನ “ಪುಷ್ಪಾ’ದ ಮೇಲೂ ನಿರೀಕ್ಷೆ: ಈ ಹಿಂದೆ ತೆಲುಗಿನ “ಭೈರವಗೀತ’ ಚಿತ್ರದ ಮೂಲಕ ಟಾಲಿವುಡ್ ಅಂಗಳಕ್ಕೆ ಪರಿಚಯವಾಗಿದ್ದ ಧನಂಜಯ್ ಈಗ ತೆಲುಗಿನ ಮತ್ತೂಂದು ಬಿಗ್ ಬಜೆಟ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ ತೆಲುಗಿನಲ್ಲಿ ಅಲ್ಲು ಅರ್ಜುನ್ ನಾಯಕನಾಗಿರುವ, ಸುಕುಮಾರ್ ನಿರ್ದೇಶನದ “ಪುಷ್ಪಾ’ ಚಿತ್ರದಲ್ಲೂ ಧನಂಜಯ್ ಪ್ರಮುಖಪಾತ್ರದಲ್ಲಿಕಾಣಿಸಿಕೊಂಡಿದ್ದಾರೆ.
ಈಗಾಗಲೇ”ಪುಷ್ಪಾ’ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರತಂಡ ಸದ್ಯ ಪ್ರಮೋಶನ್ ಕೆಲಸದಲ್ಲಿ ಬಿಝಿಯಾಗಿದೆ. ಆಗಸ್ಟ್ ವೇಳೆಗೆ “ಪುಷ್ಪಾ’ ತೆರೆಗೆ ಬರುವ ಯೋಚನೆಯಲ್ಲಿದ್ದು, ತೆಲುಗಿನ ಜೊತೆಗೆ ಕನ್ನಡ, ತಮಿಳು, ಹಿಂದಿ ಮತ್ತು ಮಲೆಯಾಳಂ ಭಾಷೆಗಳಲ್ಲೂ ಚಿತ್ರ ಏಕಕಾಲಕ್ಕೆ ತೆರೆ ಕಾಣುತ್ತಿದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.