![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 14, 2022, 3:08 PM IST
ಧನಂಜಯ್ ನಟನೆಯ “ಹೆಡ್‌ಬುಷ್’ ಚಿತ್ರ ಅಕ್ಟೋಬರ್‌ನಲ್ಲಿ ತೆರೆಕಂಡಿತ್ತು. ಈಗ ವರ್ಷಾಂತ್ಯಕ್ಕೆ ಅವರ ಮತ್ತೂಂದು ಚಿತ್ರ ತೆರೆಕಾಣುತ್ತಿದೆ. ಅದು “ಜಮಾಲಿಗುಡ್ಡ’. ಹೀಗೊಂದು ಸಿನಿಮಾದಲ್ಲಿ ಧನಂಜಯ್ ನಟಿಸಿರುವ ವಿಚಾರ ನಿಮಗೆ ಗೊತ್ತೇ ಇದೆ. ಈಗ ಚಿತ್ರತಂಡ ಡಿಸೆಂಬರ್ 30ಕ್ಕೆ ಚಿತ್ರ ಬಿಡುಗಡೆ ಮಾಡಲು ಮುಂದಾಗಿದೆ.
ಇದು ಈ ವರ್ಷ ಬಿಡುಗಡೆಯಾಗುತ್ತಿರುವ ಧನಂಜಯ್ ಅವರ 6ನೇ ಸಿನಿಮಾ. ಈಗಾಗಲೇ “ಟ್ವೆಂಟಿ ಒನ್ ಅವರ್’, “ಮಾನ್ಸೂನ್ ರಾಗ’, “ಹೆಡ್‌ಬುಷ್’, “ತೋತಾಪುರಿ’, “ಬೈರಾಗಿ’ ಚಿತ್ರಗಳು ಬಿಡುಗಡೆಯಾಗಿವೆ.
ಈ ಹಿಂದೆ “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ಕುಶಾಲ್ ಗೌಡ “ಜಮಾಲಿಗುಡ್ಡ’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ನಿಹಾರಿಕಾ ಮೂವೀಸ್ ಮೂಲಕ ಶ್ರೀಹರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಟೈಟಲ್ ಹೇಳುವಂತೆ, “ಜಮಾಲಿ ಗುಡ್ಡ’ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಒಂದಷ್ಟು ಘಟನೆಗಳು, ಪಾತ್ರಗಳ ಸುತ್ತ ಇಡೀ ಸಿನಿಮಾ ನಡೆಯುತ್ತದೆ. ಕೋವಿಡ್ ಮೊದಲನೇ ಲಾಕ್‌ಡೌನ್‌ನಲ್ಲಿ ನಿರ್ದೇಶಕ ಕುಶಾಲ್ ಗೌಡ ಮಾಡಿಕೊಂಡಿದ್ದ ಕಥೆ ಸುಮಾರು ಎರಡು ವರ್ಷಗಳ ಬಳಿಕ ಸಿನಿಮಾ ರೂಪ ಪಡೆದುಕೊಂಡಿದೆ.
“ಜಮಾಲಿ ಗುಡ್ಡ’ ಚಿತ್ರದ ಟೈಟಲ್‌ಗೆ “ಒನ್ಸ್ ಅಪಾನ್ ಎ ಟೈಮ್’ ಎಂಬ ಟ್ಯಾಗ್ ಲೈನ್ ಇದ್ದು, 1990ರ ದಶಕದ ಹಿನ್ನೆಲೆಯಲ್ಲಿ ಇಡೀ ಚಿತ್ರದ ಕಥೆ ನಡೆಯುತ್ತದೆ. “”ಜಮಾಲಿ ಗುಡ್ಡ’ ಚಿತ್ರದ ಕಥೆಯಲ್ಲಿ ಇರುವಂಥ ಕಾಲ್ಪನಿಕ ಊರಾದರೂ, ಇಲ್ಲಿ ಒಂದು ವಿಭಿನ್ನ ಸಂಸ್ಕೃತಿ, ವಿಭಿನ್ನ ವ್ಯಕ್ತಿತ್ವಗಳ ಅನಾವರಣವಾಗಲಿದೆ. ಇದರಲ್ಲಿ ಒಂದು ಜರ್ನಿ ಇದೆ. ಎಮೋಶನ್ಸ್ ಇದೆ. ಅದೆಲ್ಲವನ್ನೂ ದೃಶ್ಯದಲ್ಲಿ ಕಟ್ಟಿ ಕೊಡುತ್ತಿದ್ದೇವೆ. ಅದು ಹೇಗಿರಲಿದೆ ಅನ್ನೋದನ್ನ ತೆರೆಮೇಲೆ ನೋಡಬೇಕು’ ಎನ್ನುತ್ತದೆ ಚಿತ್ರತಂಡ.
ನಟ ಡಾಲಿ ಧನಂಜಯ್, ಅದಿತಿ ಪ್ರಭುದೇವ, ಪ್ರಕಾಶ್ ಬೆಳವಾಡಿ, ಭಾವನಾ ರಾಮಣ್ಣ, ಪ್ರಾಣ್ಯಾ ಪಿ. ರಾವ್, ನಂದಗೋಪಾಲ್, ಯಶ್ ಶೆಟ್ಟಿ, ಸತ್ಯಣ್ಣ, ತ್ರಿವೇಣಿ ರಾವ್ ಮೊದಲಾದ ಕಲಾವಿದರು “ಜಮಾಲಿ ಗುಡ್ಡ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮೂರು ಹಾಡುಗಳಿಗೆ ಅರ್ಜುನ್ ಜನ್ಯಾ ಸಂಗೀತ ಸಂಯೋಜಿಸಿದ್ದು, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಕುಶಾಲ್ ಗೌಡ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸೋನು ನಿಗಮ್, ಶ್ರೇಯಾ ಘೋಷಾಲ್, ವಿಜಯ್ ಯೇಸುದಾಸ್ ಮೊದಲಾದವರು ಚಿತ್ರದ ಹಾಡುಗಳಿಗೆ ಧ್ವನಿಯಾಗಿದ್ದಾರೆ.
“ಜಮಾಲಿ ಗುಡ್ಡ’ದ ದೃಶ್ಯಗಳಿಗೆ ಮಾಸ್ತಿ ಮತ್ತು ಕುಶಾಲ್ ಗೌಡ ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಕಾರ್ತಿಕ್ ಎಸ್. ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.