‘ದಿ ಜಡ್ಜ್ ಮೆಂಟ್‌’ ಹಾಡಿಗೆ ಧನ್ಯಾ-ದಿಗಂತ್‌ ಹೆಜ್ಜೆ


Team Udayavani, Aug 11, 2023, 5:50 PM IST

dhanya ramkumar and digant in the judgement

ನಟ ರವಿಚಂದ್ರನ್‌ ಅಭಿನಯದ “ದಿ ಜಡ್ಜ್ ಮೆಂಟ್‌’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ “ದಿ ಜಡ್ಜ್ಮೆಂಟ್‌’ ಸಿನಿಮಾದಲ್ಲಿ ಬರುವ ಪಬ್‌ ಸಾಂಗ್‌ ಒಂದನ್ನು ಚಿತ್ರತಂಡ ಅದ್ಧೂರಿಯಾಗಿ ಚಿತ್ರೀಕರಿಸಿತು.

ಬೆಂಗಳೂರಿನ ಪ್ರತಿಷ್ಠಿತ ಕ್ಲಬ್‌ ಒಂದರಲ್ಲಿ ನಡೆದ ಈ ಹಾಡಿನ ಚಿತ್ರೀಕರಣದಲ್ಲಿ ನಟ ದಿಗಂತ್‌ ಮಂಚಾಲೆ ಮತ್ತು ನಟಿ ಧನ್ಯಾ ರಾಮಕುಮಾರ್‌ ಜೋಡಿಯಾಗಿ ಹೆಜ್ಜೆ ಹಾಕಿದ್ದು, ಉಳಿದಂತೆ ಕಲಾವಿದರಾದ ಅಶ್ವಿ‌ನ್‌, ಸುಶೀಲ್‌ ನಾಗ್‌, ಸುವೀಷ್‌ ಜೊತೆಗೆ ಸುಮಾರು 75 ಜನ ನೃತ್ಯ ಕಲಾವಿದರು ಮತ್ತು 50 ಜನ ಸಹ ಕಲಾವಿದರು ಈ ಹಾಡಿನಲ್ಲಿ ಭಾಗಿಯಾಗಿದ್ದರು. ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ) ನಿರ್ದೇಶನದಲ್ಲಿ ಛಾಯಾಗ್ರಹಕ ಪಿ.ಕೆ.ಹೆಚ್‌ ದಾಸ್‌ ಈ ಹಾಡನ್ನು ಚಿತ್ರೀಕರಿಸಿಕೊಂಡರು.

ಪ್ರಮೋದ್‌ ಮರವಂತೆ ಸಾಹಿತ್ಯದಲ್ಲಿ ಮತ್ತು ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಲ್ಲಿ ಈ ಗೀತೆ ಮೂಡಿಬಂದಿದೆ. ಹೊಸತನದ ಬೀಟ್ಸ್‌ ಇರುವ ಈ ಹಾಡಿಗಾಗಿ, ಬಾಲಿವುಡ್‌ ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾರವರನ್ನು ಚಿತ್ರತಂಡ ವಿಶೇಷವಾಗಿ ಆಹ್ವಾನಿಸಿತ್ತು. ರಾಮ್‌ ಕಿರಣ್‌ ಮತ್ತು ತಂಡ ಹಾಡಿನ ನೃತ್ಯ ಸಂಯೋಜನೆಯಲ್ಲಿ ಈ ಗೀತೆ ಚಿತ್ರೀಕರಿಸಲಾಗಿದೆ.

ಇಂದಿನ ಯುವಜನತೆಯ ಮಧ್ಯೆ ಟ್ರೆಂಡ್‌ ಆಗುವ ಪಬ್‌ ಸಾಂಗ್‌ ಇದಾಗಲಿದೆ. ಅದ್ಧೂರಿಯಾಗಿ ಈ ಹಾಡಿನ ಚಿತ್ರೀಕರಣ ನಡೆಸಲಾಗಿದ್ದು, ಈ ಹಾಡು ವರ್ಷದ ಸೂಪರ್‌ ಹಿಟ್‌ ಹಾಡುಗಳಲ್ಲಿ ಒಂದಾಗಲಿದೆ. “ದಿ ಜಡ್ಜ್ಮೆಂಟ್‌’ ಲೀಗಲ್‌ ಥ್ರಿಲ್ಲರ್‌ ಶೈಲಿಯ ಸಿನಿಮಾವಾಗಿದ್ದು, ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು, ಈ ಕಥೆ ಹೆಣೆಯಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದು ಗ್ಯಾರೆಂಟಿ’ ಎಂಬುದು ನಿರ್ದೇಶಕ ಗುರುರಾಜ ಕುಲಕರ್ಣಿ ವಿಶ್ವಾಸದ ಮಾತು.

ಇನ್ನು “ದಿ ಜಡ್ಜ್ಮೆಂಟ್‌’ ಸಿನಿಮಾದಲ್ಲಿ ರವಿಚಂದ್ರನ್‌, ದಿಗಂತ್‌ ಮಂಚಾಲೆ, ಧನ್ಯಾ ರಾಮಕುಮಾರ್‌ ಅವರೊಂದಿಗೆ ಮೇಘನಾ ಗಾಂವ್ಕರ್‌, ಲಕ್ಷ್ಮೀ ಗೋಪಾಲಸ್ವಾಮಿ, ಟಿ. ಎಸ್‌.ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಟಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್‌, ಸುಜಯ್‌ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ

ಟಾಪ್ ನ್ಯೂಸ್

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ

stalin

Tamil Nadu University; ಕುಲಪತಿ ನೇಮಕ: ಸಿಎಂ, ಗೌರ್ನರ್‌ ನಡುವೆ ಮತ್ತ ಸಂಘರ್ಷ

ISRO 2

ISRO; ಬಾಹ್ಯಾಕಾಶದಲ್ಲಿ ಅಲಸಂಡೆ, ಪಾಲಕ್‌ ಬೆಳೆಯಲು ಪ್ಲಾನ್‌!

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

ಬಳ್ಳಾರಿಯಲ್ಲೇ ಏಕೆ 88ನೇ ಕನ್ನಡ ಸಾಹಿತ್ಯ ಸಮ್ಮೇಳನ?

1-ru

PF fraud; ಆರೋಪಿ ಕಂಪೆನಿಗಳಿಗೆ ನಾನು ನಿರ್ದೇಶಕನಲ್ಲ: ರಾಬಿನ್‌ ಉತ್ತಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.