ಕ್ಯಾಡ್ಬರಿ ಅಲ್ಲ ಮಾಸ್ ಹೀರೋ; ಧರ್ಮನ ಚಾಣಾಕ್ಷ ಮಾತುಗಳು
Team Udayavani, Mar 21, 2019, 8:37 AM IST
ಧರ್ಮ ಕೀರ್ತಿರಾಜ್‌ಗೆ “ಚಾಣಾಕ್ಷ’ ಮೇಲೆ ಇನ್ನಿಲ್ಲದ ಭರವಸೆ ಇದೆ. ಯಾಕೆಂದರೆ, ಇದುವರೆಗೆ ಅವರನ್ನು ಲವ್ವರ್ ಬಾಯ್ ಪಾತ್ರದಲ್ಲೇ ನೋಡಿದ್ದವರಿಗೆ ಇಲ್ಲಿ ಪಕ್ಕಾ ಮಾಸ್ ಹೀರೋ ಆಗಿ ಕಾಣುತ್ತಾರೆ. ಆ ಕುರಿತು ಸ್ವತಃ ಅವರೇ “ಚಾಣಾಕ್ಷ’ ಕುರಿತು ಹೇಳಿಕೊಂಡಿದ್ದಾರೆ.
* “ಚಾಣಾಕ್ಷ’ ನಿಮ್ಮ ಇಮೇಜ್ ಬದಲಿಸುತ್ತಾ?
– ಖಂಡಿತವಾಗಿಯೂ ಚಿತ್ರ ಹೊಸ ಇಮೇಜ್ ಕಲ್ಪಿಸಿಕೊಡುತ್ತೆ ಎಂಬ ಭರವಸೆ ಇದೆ. ನನಗೊಂದು ಚೇಂಜ್ ಓವರ್ ಸಿನಿಮಾ ಇದು. ಇದುವರೆಗೆ
ಲವ್ವರ್‌ಬಾಯ್ ಆಗಿ ಕಾಣಿಸಿಕೊಂಡಿದ್ದ ನಾನು, ಇಲ್ಲಿ ಸಂಪೂರ್ಣವಾಗಿ ಆ್ಯಕ್ಷನ್‌ನಲ್ಲಿ ಕಾಣಸಿಕೊಂಡಿದ್ದೇನೆ. ಅದು ನನಗೆ ಪ್ಲಸ್ ಆಗಲಿದೆ. ಈಗಾಗಲೇ ಟ್ರೇಲರ್ ನಲ್ಲಿರುವ ಆ್ಯಕ್ಷನ್, ಚೇಸಿಂಗ್ ನೋಡಿರುವ ದರ್ಶನ್ ಅವರು, ನೀನಿನ್ನು ಕ್ಯಾಡ್‌ಬರೀಸ್ ಅಲ್ಲ, ಇನ್ಮುಂದೆ ಮಾಸ್ ಹೀರೋ ಎಂದು ಹರಸಿದ್ದಾರೆ. ನನ್ನ ಪ್ರಕಾರ “ಚಾಣಾಕ್ಷ’ ಮೂಲಕ ನನ್ನ ಇಮೇಜ್ ಖಂಡಿತ ಬದಲಾಗುತ್ತೆ.
*ಹಾಗಾದರೆ ಈ “ಚಾಣಾಕ್ಷ’ಣನ ಕಥೆ?
– ಇದೊಂದು ಕಾಮನ್ ಮ್ಯಾನ್ ಹುಡುಗನೊಬ್ಬನ ಕಥೆ. ಕಪ್ಪು ಹಣ ಹಾಗು ರೈತರ ಸಮಸ್ಯೆ ಚಿತ್ರದ ಪ್ರಮುಖ ಅಂಶ. ಈ ಸಮಸ್ಯೆಯಿಂದ ಒದ್ದಾಡುತ್ತಿರುವ ಜನರ ಬೆಂಬಲಕ್ಕೆ ಹೇಗೆ ನಿಲ್ಲುತ್ತಾನೆ. ಅವರ ಸಮಸ್ಯೆ ನಿವಾರಿಸಲು ಏನೆಲ್ಲಾ ರಿಸ್ಕ್ ತಗೋತ್ತಾನೆ ಎಂಬುದು ಕಥೆ. ಇಲ್ಲಿ ಸಾಕಷ್ಟು ಚಾಣಾಕ್ಷತನದಿಂದಲೇ ಅವನು ಕೆಲಸ ಮಾಡುತ್ತಾನೆ. ಅದು ಹೇಗೆಲ್ಲಾ ಇರುತ್ತೆ ಎಂಬುದಕ್ಕೆ ಚಿತ್ರ ನೋಡಬೇಕು. ಹೀರೋ ಸಿಟಿಯಿಂದ ಹಳ್ಳಿಗೆ ಹೋಗಿ, ಅಲ್ಲಿರುವ ಸಮಸ್ಯೆಗೆ ಪರಿಹಾರ ಕೊಡುತ್ತಾನಾ, ಇಲ್ಲವಾ ಅನ್ನೋದೇ ಇಂಟ್ರೆಸ್ಟಿಂಗ್ ಸ್ಟೋರಿ.
* “ಚಾಣಾಕ್ಷ’ಣ ವಿಶೇಷತೆ ಹೇಳುವುದಾದರೆ?
– ಇದು ಮುಖ್ಯವಾಗಿ ಆ್ಯಕ್ಷನ್ ಹೆಚ್ಚಾಗಿರುವ ಚಿತ್ರ. ಅದರಲ್ಲೂ ಚೇಸ್ ಅದ್ಭುತವಾಗಿದೆ. ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರು 8 ದಿನಗಳ ಕಾಲ ಚೇಸ್ ದೃಶ್ಯವನ್ನೇ ಸೆರೆಹಿಡಿದಿದ್ದಾರೆ. ಆ ಸನ್ನಿವೇಶ ದೊಡ್ಡ ಬಜೆಟ್‌ನಲ್ಲೇ ಆಗಿರುವುದು ವಿಶೇಷ. ಇನ್ನು, ಹೀರೋ ಇಂಟ್ರಡಕ್ಷನ್ ಫೈಟ್‌ಗೆ ಡಿಫರೆಂಟ್ ಡ್ಯಾನಿ ಅವರು ವಿಶೇಷವಾದ ಸಾಹಸ ಸಂಯೋಜಿಸಿದ್ದಾರೆ. ವಿನೋದ್ ಮಾಸ್ಟರ್ ಕೂಡ ನನ್ನನ್ನು ಬೇರೆ ರೀತಿ ತೋರಿಸಬೇಕು ಅಂತ ಸಾಕಷ್ಟು ಹೋಮ್ ವರ್ಕ್ ಮಾಡಿ ಡಿಫರೆಂಟ್ ಲುಕ್‌ನಲ್ಲಿ ತೋರಿಸಿದ್ದಾರೆ.ಹಾಗೆಯೇ ಡ್ಯಾನ್ಸ್ ಮಾಸ್ಟರ್ ಫೈವ್‌ಸ್ಟಾರ್ ಗಣೇಶ್ ಮತ್ತು
ತ್ರಿಭುವನ್ ಕೂಡ ಹೊಸ ರೀತಿಯ ಸ್ಟೆಪ್ಸ್ ಹೇಳಿಕೊಡುವ ಮೂಲಕ ಕಲರ್‌ಫುಲ್ “ಚಾಣಾಕ್ಷ’ ಅನಿಸುವಂತೆ ಮಾಡಿದ್ದಾರೆ.
*ಹಾಗಾದರೆ ಇದು ಯಾವ ಜಾನರ್‌ನ ಕಥೆ?
– ಇದು ಪಕ್ಕಾ ಕಮರ್ಷಿಯಲ್ ಸಿನಿಮಾ. ಇಲ್ಲಿ ಆ್ಯಕ್ಷನ್ ಹೆಚ್ಚಾಗಿದೆ. ಜೊತೆಗೆ ಲವ್‌ಸ್ಟೋರಿಯೂ ಇದೆ. ಸೆಂಟಿಮೆಂಟ್, ಎಮೋಷನಲ್ ಗೂ ಜಾಗವಿದೆ. ಆರಂಭದಿಂದ ಅಂತ್ಯದವರೆಗೂ ಭರ್ಜರಿ ಆ್ಯಕ್ಷನ್ ನೋಡಬಹುದು.ಬರೀ ಆ್ಯಕ್ಷನ್ ಇಲ್ಲಿಲ್ಲ. ಆ್ಯಕ್ಷನ್ ಜೊತೆಗೆ ಸಮಾಜಕ್ಕೊಂದು ಸಂದೇಶವೂ ಇದೆ. ಆ್ಯಕ್ಷನ್ ಸನ್ನಿವೇಶಕ್ಕೆ ಪೂರಕವಾಗಿಯೇ ಇದೆ. ಹೀರೋ ಒಂದು ವಿಷಯವನ್ನು ಚಾಲೆಂಜಿಂಗ್ ಆಗಿ ತೆಗೆದುಕೊಂಡು ಏನನ್ನೂ ಸಾಬೀತುಪಡಿಸಲು ಹೊರಡುತ್ತಾನೆ. ಆಗ ನಡೆಯುವ ಕಥೆಯೇ ಚಿತ್ರದ ಹೈಲೈಟ್.
* ನಿಮಗಿದು ಬಿಗ್ ಬಜೆಟ್ ಚಿತ್ರವಂತೆ?
– ಹೌದು ನಿರ್ಮಾಪಕರಾದ ನಳಿನ ವೆಂಕಟೇಶ್‌ಮೂರ್ತಿ ಅವರ ಬಿಗ್‌ಬಜೆಟ್‌ನಲ್ಲೇ ಚಿತ್ರ ಮಾಡಿದ್ದಾರೆ. ಚಿತ್ರಕ್ಕೆ ಏನೆಲ್ಲಾ ಬೇಕೋ ಅದನ್ನು ಕೊಡುವ ಮೂಲಕ ಯಾವುದಕ್ಕೂ ಕಮ್ಮಿ ಮಾಡಿಲ್ಲ. ನನಗಿದು ಬಿಗ್ ಬಜೆಟ್ ಚಿತ್ರ ಎಂದು ಮುಲಾಜಿಲ್ಲದೆ ಹೇಳುತ್ತೇನೆ. ಬರೀ ಚೇಸ್, ಫೈಟ್ಸ್‌ಗಾಗಿಯೇ 45 ಲಕ್ಷ ಖರ್ಚುಮಾಡಿದ್ದಾರೆ. ಈಗಾಗಲೇ ಹಿಂದಿ ಡಬ್ಬಿಂಗ್ ರೈಟ್ಸ್ ಕೂಡ ಒಳ್ಳೆಯ ಮೊತ್ತಕ್ಕೆ ಮಾರಾಟವಾಗಿದೆ. ಅದು ಚಿತ್ರಕ್ಕೂ ಪ್ಲಸ್ ಆಗಿದೆ. ಬಿಗ್‌ಬಜೆಟ್ ಎನ್ನುವುದಕ್ಕಿಂತ ಒಳ್ಳೆಯ ಚಿತ್ರಕ್ಕೆ ಏನು ಬೇಕೋ ಅದನ್ನು ನಿರ್ಮಾಪಕರು ಕೊಟ್ಟಿದ್ದಾರಷ್ಟೇ.
ಇದು ಯಾವ ವರ್ಗಕ್ಕೆ ಸೀಮಿತ?
– ಹಾಗೇನೂ ಇಲ್ಲ. ಇದು ಎಲ್ಲಾ ವರ್ಗದವರಿಗೂ ಇಷ್ಟವಾಗುವ ಚಿತ್ರ. ಯೂಥ್‌ಗೆ ಬೇಕಾದ ಆ್ಯಕ್ಷನ್ ಇದೆ. ಕಾಲೇಜ್ ಹುಡುಗ ಹುಡುಗಿಯರಿಗೆ ಬೇಕಾದ ಲವ್ ಎಲಿಮೆಂಟ್ಸ್ ಇದೆ. ಫ್ಯಾಮಿಲಿ ಆಡಿಯನ್ಸ್‌ಗೆ ಬೇಕಾಗುವ ವಿಷಯವೂ ಇದೆ. ರೈತರ ಸಮಸ್ಯೆ ಕುರಿತೂ ಇಲ್ಲಿರುವುದರಿಂದ ಅವರಿಗೂ ಇದು ಇಷ್ಟವಾಗಲಿದೆ. ಇಷ್ಟು ದಿನ ಮಂಡ್ಯ, ಮೈಸೂರು, ಹುಬ್ಬಳ್ಳಿ ಭಾಗದಲ್ಲಿ ನನ್ನನ್ನು ಲವ್ವರ್‌ಬಾಯ್ ಅಂತಾನೇ ಗುರುತಿಸಿದ್ದವರೆಲ್ಲರೂ ಈ ಚಿತ್ರದ ಮೂಲಕ ಪಕ್ಕಾ ಆ್ಯಕ್ಷನ್ ಹೀರೋ ಎಂದು ಗುರುತಿಸುತ್ತಾರೆ. ಅಷ್ಟರ ಮಟ್ಟಿಗೆ ಆ್ಯಕ್ಷನ್ ಭರ್ಜರಿಯಾಗಿರಲಿದೆ.
*ಚಾಣಾಕ್ಷನಲ್ಲಿ ನಿಮಗೆ ಇಷ್ಟವಾಗಿದ್ದೇನು?
– ಮೊದಲು ನಿರ್ದೇಶಕ ಮಹೇಶ್ ಹೇಳಿದ ಕಥೆ ಮತ್ತು ಹೆಣೆದ ಪಾತ್ರ. ಅದಕ್ಕಿಂತ ಹೆಚ್ಚಾಗಿ ಇಲ್ಲಿರುವ ಆ್ಯಕ್ಷನ್ ಇಷ್ಟವಾಯ್ತು. ಒಂದು ಕಮರ್ಷಿಯಲ್ ಚಿತ್ರ ಹೇಗಿರಬೇಕೋ ಅದೆಲ್ಲವೂ ಇಲ್ಲಿದೆ. ಅಂತಹ ಅನೇಕ ಪ್ಲಸ್ ಅಂಶಗಳು ಇಲ್ಲಿರುವುದರಿಂದ ಇಡೀ ಸಿನಿಮಾ ಇಷ್ಟವಾಗಿದೆ.
ಸ್ಟಂಟ್ಸ್‌ಗಾಗಿ ನಾನು ಸಾಕಷ್ಟು ರಿಸ್ಕ್ ತಗೊಂಡಿದ್ದೇನೆ. ಎಲ್ಲಾ ಸಮಯದಲ್ಲೂ ಇಂತಹ ಚಿತ್ರ ಸಿಗಲ್ಲ. ಸಿಕ್ಕಾಗ, ಸ್ವಲ್ಪ ಸಮಸ್ಯೆ ಎದುರಾದರೂ, ಕೆಲಸ ಮಾಡಬೇಕು. ರಿಸ್ಕ ಆ್ಯಕ್ಷನ್ ಮಾಡುವಾಗ ಏನೂ ಅನಿಸಲಿಲ್ಲ. ಈಗ ಚಿತ್ರ ನೋಡಿದಾಗ ಖುಷಿಯಾಗುತ್ತಿದೆ. ನಾಲ್ಕು ಫೈಟು, ಒಂದು ಹೆವಿ ಚೇಸಿಂಗ್ ಇದೆ. ಅದೇ ಎಲ್ಲರಿಗೂ ಇಷ್ಟ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
Rajendra Babu: ನಟರಿಗೆ ಪ್ಯಾನ್ ಇಂಡಿಯಾ ಭೂತ ಹಿಡಿದಿದೆ: ಬಾಬು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
England; ಬೆನ್ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್ ಟ್ರೋಫಿಗೆ ಅಲಭ್ಯ
Bailhongal: ಅನೈತಿಕ ಸಂಬಂಧದ ಹಿನ್ನೆಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ; ಆರೋಪಿ ಪರಾರಿ
CT Ravi Case ನ್ಯಾಯಾಂಗ ತನಿಖೆಗೆ ಒಪ್ಪಿಸಲು ಗೌರ್ನರ್‌ಗೆ ಬಿಜೆಪಿ ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.