![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 14, 2022, 2:47 PM IST
ನವ ನಟ ಧೀರೇನ್ ರಾಮ್‌ಕುಮಾರ್ ಅಭಿನಯದ “ಶಿವ 143 ’ ಚಿತ್ರದ ಹೀರೋ ಇಂಟ್ರೋಡಕ್ಷನ್ ಟೀಸರ್ ರಿಲೀಸ್ ಆಗಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಚಿತ್ರದ ಹೀರೋ ಇಂಟ್ರೋಡಕ್ಷನ್ ಟೀಸರ್ ಬಿಡುಗಡೆಗೊಳಿಸಿ ಶುಭ ಹಾರೈಸಿದ್ದಾರೆ.
“ಶಿವ 143′ ಚಿತ್ರದ ಹೀರೋ ಇಂಟ್ರೋಡಕ್ಷನ್ ಟೀಸರ್ ಸಖತ್ ಮಾಸ್ ಶೈಲಿಯಲ್ಲಿ ಮೂಡಿಬಂದಿದ್ದು, ಧೀರೇನ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೊಂದು ಪಕ್ಕಾ ಆ್ಯಕ್ಷನ್ ಚಿತ್ರ ಎನ್ನುವುದು ಟೀಸರ್‌ನಲ್ಲೇ ಕಾಣುತ್ತದೆ. “ಸಖತ್ ಸೈಕ್ ಇವನು ‘ ಎಂಬ ಡೈಲಾಗ್ ಚಿತ್ರದಲ್ಲಿ ಧೀರೇನ್ ಪಾತ್ರ ಭಿನ್ನ ಶೇಡ್‌ಗಳಲ್ಲಿ ಮೂಡಿಬರಲಿದೆ ಎಂಬ ಸುಳಿವು ನೀಡುತ್ತಿದೆ.
ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, “ಶಿವ 143 ನೈಜ ಘಟನೆ ಆಧಾರಿತ ಚಿತ್ರ. ನಿಜವಾದ ಶಿವ ಎನ್ನುವ ವ್ಯಕ್ತಿತ್ವದ ಕಥೆಯಾದ್ದರಿಂದ ಚಿತ್ರ ಸುಂದರವಾಗಿ ಮೂಡಿಬಂದಿದೆ. ಇನ್ನು ಚಿತ್ರದಲ್ಲಿ ನಾಯಕ- ನಾಯಕಿ ನಂತರ ಹೆಚ್ಚು ಕಾಣಿಸಿಕೊಳ್ಳುವ ಪಾತ್ರ ಚರಣರಾಜ್ ಅವರದ್ದು. ಸಾಧು ಕೋಕಿಲ, ಚಿಕ್ಕಣ್ಣ , ನಾಯಕಿ ಮಾನ್ವಿತಾ ಅವರ ಅಭಿನಯದ ಬಗ್ಗೆ ಎರಡು ಮಾತಿಲ್ಲ. ಮಾನ್ವಿತಾ ಹಾಗೂ ಧೀರೇನ್ ಡ್ಯುಯಲ್ ಕ್ಯಾರೆಕ್ಟರ್‌ನಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ನಾಯಕನಿಂದ ಛಾಯಾಗ್ರಾಹಕರವರೆಗೂ ಹೊಸ ಮುಖಗಳಿವೆ. ಆದರೆ, ಅವರು ಯಾರೂ ಚೊಚ್ಚಲ ಚಿತ್ರದಲ್ಲಿ ಮಾಡುತ್ತಿದ್ದಾರೆ ಎಂದು ಅನಿಸುವುದಿಲ್ಲ . ಅನುಭವಿ ಕಲಾವಿದ, ತಂತ್ರಜ್ಞರಂತೆ ಕೆಲಸ ನಿರ್ವಹಿಸಿದ್ದಾರೆ. ಚಿತ್ರ ಯುವಕರನ್ನು ತುಂಬಾ ಕಾಡಲಿದೆ’ ಎಂದರು.
ನಾಯಕ ಧೀರೇನ್ ರಾಮ್ ಕುಮಾರ್ ಮಾತನಾಡಿ, “ಲಾಕ್‌ಡೌನ್ ಗೂ ಮುಂಚೆ ಪ್ರಾರಂಭವಾದ ಚಿತ್ರ ಇದು. ಎಲ್ಲಾ ಅಡೆತಡೆಗಳನ್ನು ಮೀರಿ, ನಿಯಮಗಳನ್ನು ಪಾಲಿಸಿ, ನೋಡಿಕೊಂಡು ಅಂತಿಮವಾಗಿ ಇಂದು ರಿಲೀಸ್‌ಗೆ ರೆಡಿಯಾಗಿದ್ದೇವೆ. ಈ ಚಿತ್ರದಲ್ಲಿ ಫಿಸಿಕಲ್ ನನ್ನ ಲುಕ್ ಬೇರೆ ತರಹ ಇದೆ. ಕೂದಲಿಂದ ಹಿಡಿದು ದೇಹ ಬೆಳೆಸುವುದು, ಕರಗಿಸುವುದರವರೆಗೂ ತುಂಬಾ ತಯಾರಿ ನಡೆಸಿದ್ದೇವೆ. ಆ್ಯಕ್ಷನ್, ಡಾನ್ಸ್ ಗಾಗಿ ನನ್ನ ದೇಹವನ್ನು ಫಿಟ್ ಆಗಿ ಇಡಬೇಕಿತ್ತು, ಆ ಕೆಲಸ ಮಾಡಿದ್ದೇನೆ. ಇನ್ನು ಮೊದಲ ಚಿತ್ರ ಅಂದಾಗ ವಿಭಿನ್ನವಾಗಿ ಮಾಡುವ ಆಸೆ ನನಗಿತ್ತು. ಅದೇ ಸಮಯಕ್ಕೆ ಚಿತ್ರದ ಆಫರ್ ಬಂದಾಗ ತಂದೆ-ತಾಯಿ, ಶಿವು ಮಾಮ, ಅಪ್ಪು ಮಾಮ, ರಾಘು ಮಾಮ ಎಲ್ಲರ ಬಳಿ ಅಭಿಪ್ರಾಯಗಳನ್ನು ಪಡೆದೆ. ಎಲ್ಲರೂ “ನಿನಗೆ ಇಷ್ಟವಾದರೆ, ನಿನಗೆ ಪಾತ್ರ ಕಾಡಿದರೆ ಮಾತ್ರ ಮಾಡು’ ಅಂದರು. ನನಗೆ ಈ ಪಾತ್ರ ತುಂಬಾ ಸವಾಲಿನ ಹಾಗೂ ಕಾಡುವ ಪಾತ್ರ ಪಾತ್ರ ಅನಿಸಿತು. ಆದ್ದರಿಂದ ಈ ಚಿತ್ರ ಮಾಡಲೇಬೇಕು ಎಂದು ನಿರ್ಧರಿಸಿದೆ. ಹಾಗೇ ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಹಾಗೂ ಜವಾಬ್ದಾರಿ ಎರಡು ಇದೆ. ಅದನ್ನು ನಿಭಾಯಿಸುವಲ್ಲಿ ಸಾಕಷ್ಟು ಶ್ರಮ ವಹಿಸಿದ್ದೇನೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರಿಗೆ ನಾನು ಆಭಾರಿ’ ಎಂದರು.
ಚಿತ್ರಕ್ಕೆ “ಜಯಣ್ಣ ಕಂಬೈನ್ಸ್’ ಬಂಡವಾಳ ಹೂಡಿದ್ದು, ಅನಿಲ್ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯಾ ಸಂಗೀತ, ಶಿವ ಬಿ.ಕೆ ಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.