3 ವರ್ಷಗಳ ಬಳಿಕ ಧ್ರುವ ಅಭಿಮಾನಿಗಳ ಸಂಭ್ರಮ
Team Udayavani, Sep 16, 2017, 10:37 AM IST
ಧ್ರುವ ಸರ್ಜಾ ಅವರ ಸಿನಿಮಾ ಬಾರದೇ ಮೂರು ವರ್ಷ ಆಗುತ್ತಾ ಬಂದಿದೆ. ಅಕ್ಟೋಬರ್ ಬಂದರೆ ಧ್ರುವ ನಟಿಸಿರುವ “ಬಹದ್ದೂರ್’ ಬಂದು ಬರೋಬ್ಬರಿ ಮೂರು ವರ್ಷ. ಆ ನಂತರ ಅವರ ಯಾವ ಸಿನಿಮಾನೂ ಬಂದಿಲ್ಲ. ಸಹಜವಾಗಿಯೇ ಅವರ ಅಭಿಮಾನಿಗಳು ಕಾಯುತ್ತಿದ್ದರು. ತಮ್ಮ ನೆಚ್ಚಿನ ನಟನ ಮೂರನೇ ಸಿನಿಮಾವನ್ನು ಯಾವಾಗ ಕಣ್ತುಂಬಿಕೊಳ್ಳುತ್ತೇವೋ ಎಂದು ಕಾಯುತ್ತಿದ್ದ ಧ್ರುವ ಸರ್ಜಾ ಅಭಿಮಾನಿಗಳು ಶುಕ್ರವಾರ (ನಿನ್ನೆ) “ಭರ್ಜರಿ’ ಸಿನಿಮಾಕ್ಕೆ ನುಗ್ಗಿ ಬಂದಿದ್ದಂತೂ ಸುಳ್ಳಲ್ಲ.
ಹಾಡು, ಟ್ರೇಲರ್ ಮೂಲಕ ನಿರೀಕ್ಷೆ ಹೆಚ್ಚಿಸಿದ್ದ ಸಿನಿಮಾವನ್ನು ಥಿಯೇಟರ್‌ನಲ್ಲೇ ಕಣ್ತುಂಬಿಕೊಳ್ಳಬೇಕೆಂಬ ಕಾರಣಕ್ಕೆ ಅಭಿಮಾನಿಗಳು ಥಿಯೇಟರ್‌ಗೆ ಬಂದಿದ್ದರು. ನರ್ತಕಿ ಹಾಗೂ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಆ ತರಹದ ಒಂದು ಜನದಟ್ಟಣೆ ನೋಡದೇ ತುಂಬಾ ದಿನಗಳೇ ಆಗಿತ್ತು. ಆ ಮಟ್ಟಿಗೆ ಅಭಿಮಾನಿಗಳು “ಭರ್ಜರಿ’ಯತ್ತ ಹೆಜ್ಜೆ ಹಾಕಿದ್ದರು. ಕೇವಲ ಬಂದಿದ್ದಷ್ಟೇ ಅಲ್ಲ, ಅಭಿಮಾನಿಗಳು “ಭರ್ಜರಿ’ ಬಿಡುಗಡೆಯನ್ನು ತಮ್ಮದೇ ರೀತಿಯಲ್ಲಿ ಸಂಭ್ರಮಿಸಿದರು ಕೂಡಾ.
ಸುಮಾರು 300 ಲೀಟರ್‌ಗೂ ಅಧಿಕ ಹಾಲಿನಾಭಿಷೇಕ, 1 ಲಕ್ಷಕ್ಕೂ ಹೆಚ್ಚಿನ ಪಟಾಕಿ, ಹೀರೋ ಕಟೌಟ್‌ಗೆ 3 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹಾರ, 100ಕ್ಕೂ ಹೆಚ್ಚು ಸ್ಟಾರ್ ಕಟ್ಟುವ ಮೂಲಕ ಅಭಿಮಾನ ಪ್ರದರ್ಶಿಸಿದರು. ಇಷ್ಟೇ ಅಲ್ಲದೇ, ಸಾಕಷ್ಟು ಮಂದಿಯಿಂದ ಥಿಯೇಟರ್ ಮುಂದೆ ಡೊಳ್ಳು ಕುಣಿತ ಕೂಡಾ ಆಯೋಜಿಸಲಾಗಿತ್ತು. ಈ ಮೂಲಕ ಮೂರು ವರ್ಷ ಬಳಿಕ ಅಭಿಮಾನಿಗಳ ಮುಂದೆ ಬಂದ ಧ್ರುವಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ.
ಇನ್ನು, ದಾವಣಗೆರೆ ಸೇರಿದಂತೆ ಅನೇಕ ಕಡೆ “ಭರ್ಜರಿ’ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ 6 ಗಂಟೆಗೆ ಪ್ರದರ್ಶನ ಕಂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaajal Kunder: ಕಾಜಲ್ ತೆಕ್ಕೆಗೆ ಮತ್ತೊಂದು ಸಿನಿಮಾ; ಸಂಚಿತ್‌ಗೆ ಕರಾವಳಿ ಬೆಡಗಿ ನಾಯಕಿ
Vijay: ‘ಲ್ಯಾಂಡ್ ಲಾರ್ಡ್’ನಲ್ಲಿ ವಿಜಯ್ ವೈಭವ…: ಬಡವರ ಪ್ರತಿನಿಧಿಯಾದ ಸಲಗ
Sandalwood: ʼರಾಯಲ್ʼ ಎಂಟ್ರಿಯಲ್ಲಿ ʼವಿರಾಟʼ ದರ್ಶನ್; ತೆರೆಗೆ ಬಂತು ರಾಯಲ್
Sandalwood: ಚಿಕ್ಕಣ್ಣ ನಟನೆಯ ʼಫಾರೆಸ್ಟ್ʼ ಇಂದು ತೆರೆಗೆ
Sandalwood: ತೆರೆಗೆ ಬಂತು ರಿಷಿ ನಟನೆಯ ʼರುದ್ರ ಗರುಡ ಪುರಾಣ’ ಚಿತ್ರ
MUST WATCH
ಹೊಸ ಸೇರ್ಪಡೆ
ಭಾರತಾಂಬೆಗೆ ಅವಮಾನ; ಕರ್ನಾಟಕ ವಿಶ್ವವಿದ್ಯಾಲಯದಿಂದ ಪಠ್ಯ ಹಿಂದಕ್ಕೆ
ಮೀಟರ್ ಬಡ್ಡಿ: ಯಾದಗಿರಿಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಬಲಿ
BBK11: ಈ ಇಬ್ಬರ ಪೈಕಿ ಒಬ್ಬರು ಬಿಗ್ ಬಾಸ್ ಟ್ರೋಫಿ ಗೆಲ್ಲೋದು ಪಕ್ಕಾ?: ಹೇಗಿದೆ ಟ್ರೆಂಡ್
ಪೆರ್ಡೂರು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ರಾಮಚಂದ್ರ ಐತಾಳ ವಿಧಿವಶ
ಮೈಕ್ರೋ ಫೈನಾನ್ಸ್ ಕಿರುಕುಳ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಜಾರಕಿಹೊಳಿ