![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Feb 16, 2023, 3:17 PM IST
ಧ್ರುವ ಸರ್ಜಾ ನಾಯಕರಾಗಿರುವ “ಮಾರ್ಟಿನ್’ ಚಿತ್ರ ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಸಿನಿಮಾದ ಅಪ್‌ಡೇಟ್ಸ್ ಏನು ಎಂದು ಕೇಳುತ್ತಿದ್ದ ಧ್ರುವ ಅಭಿಮಾನಿಗಳಿಗೆ ಚಿತ್ರತಂಡವೊಂದು ಹೊಸ ಅಪ್‌ಡೇಟ್ ನೀಡಿದೆ. ಅದು ಟೀಸರ್ ಕುರಿತಾಗಿ.
ಹೌದು, ಚಿತ್ರದ ಟೀಸರ್ ಫೆ.23ರಂದು ಬಿಡುಗಡೆಯಾಗಲಿದೆ. ಈ ಮೂಲಕ ಧ್ರುವ ಅಭಿಮಾನಿಗಳಿಗೆ ಸಿನಿಮಾದ ಸಣ್ಣ ಝಲಕ್ ನೀಡಲು ಚಿತ್ರತಂಡ ಮುಂದಾಗಿದೆ.
ಇನ್ನು ಔಟ್ ಆ್ಯಂಡ್ ಔಟ್ ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರ ಹೊಂದಿರುವ “ಮಾರ್ಟಿನ್’ ಸಿನಿಮಾದಲ್ಲಿ ನಾಯಕ ಧ್ರುವ ಸರ್ಜಾ ಅವರಿಗೆ ವೈಭವಿ ಶಾಂಡಿಲ್ಯ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉದಯ್ ಕೆ. ಮೆಹ್ತಾ ನಿರ್ಮಾಣದಲ್ಲಿ “ಮಾರ್ಟಿನ್’ ಸಿನಿಮಾ ಮೂಡಿಬರುತ್ತಿದೆ. “ಅದ್ಧೂರಿ’ ಸಿನಿಮಾದ ಬಳಿಕ ಎರಡನೇ ಬಾರಿಗೆ ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ. ಪಿ ಅರ್ಜುನ್ ಕಾಂಬಿನೇಶನ್‌ನಲ್ಲಿ “ಮಾರ್ಟಿನ್’ ಸಿನಿಮಾ ಮೂಡಿಬರುತ್ತಿದೆ.
ಕನ್ನಡದ ಜೊತೆಗೆ ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂನಲ್ಲೂ “ಮಾರ್ಟಿನ್’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಟೀಸರ್ ಪೇಯ್ಡ ಪ್ರೀಮಿಯರ್: ವಿಶೇಷವೆಂದರೆ ಪೇಯ್ಡ ಪ್ರೀಮಿಯರ್ ಮೂಲಕ “ಮಾರ್ಟಿನ್’ ಟೀಸರ್ ಪ್ರದರ್ಶನವಾಗಲಿದೆ. ಫೆ.23ಕ್ಕೆ ವೀರೇಶ್ ಚಿತ್ರಮಂದಿರದಲ್ಲಿ ಒಂದು ಸಾವಿರ ಮಂದಿಗೆ ಈ ಶೋನಲ್ಲಿ ಭಾಗವಹಿಸುವ ಅವಕಾಶವಿದೆ. ಇದರಿಂದ ಬಂದ ಹಣವನ್ನು ಗೋ ಶಾಲೆಗೆ ನೀಡಲು ಚಿತ್ರತಂಡ ನಿರ್ಧರಿಸಿದೆ. ಟೀಸರ್ ಅನ್ನು ಅಭಿಮಾನಿಗಳ ಸಮ್ಮುಖದಲ್ಲಿ ಅದ್ಧೂರಿ ಕಾರ್ಯಕ್ರಮ ಮೂಲಕ ರಿಲೀಸ್ ಮಾಡಲಿದೆ ಚಿತ್ರತಂಡ.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್‌ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
You seem to have an Ad Blocker on.
To continue reading, please turn it off or whitelist Udayavani.