Dhruva Sarja: ಮಾರ್ಟಿನ್ ನನ್ನ ಕೆರಿಯರ್‌ನ ಬೆಸ್ಟ್ ಆ್ಯಕ್ಷನ್
Team Udayavani, Oct 8, 2024, 9:35 AM IST
ಭರ್ಜರಿ ಆ್ಯಕ್ಷನ್ ಇರುವ “ಮಾರ್ಟಿನ್’ ರಿಲೀಸ್‌ಗೆ ರೆಡಿಯಾಗಿದೆ. ನಿಮ್ಮ ಎಕ್ಸೈಟ್‌ಮೆಂಟ್ ಹೇಗಿದೆ?
– ನಿಜ ಹೇಳಬೇಕೆಂದರೆ ನಾನಂತೂ ಈ ಸಿನಿಮಾ ಬಗ್ಗೆ ಭರ್ಜರಿ ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇನೆ. ಅದಕ್ಕೆ ಕಾರಣ ಸಿನಿಮಾ ಕಥೆ ಹಾಗೂ ಮೇಕಿಂಗ್. ಇದು ರೆಗ್ಯುಲರ್ ಶೈಲಿ ಸಿನಿಮಾವಲ್ಲ. ಕಥೆ, ಮೇಕಿಂಗ್, ಆ್ಯಕ್ಷನ್, ಸಾಂಗ್, ಪರ್‌ಫಾರ್ಮೆನ್ಸ್ ಎಲ್ಲವೂ ನೆಕ್ಸ್ಟ್ ಲೆವೆಲ್‌ಗಿದೆ.
ಮಾರ್ಟಿನ್ ಆ್ಯಕ್ಷನ್ ಬಗ್ಗೆ ಹೇಳಿ?
– ನನ್ನ ಕೆರಿಯರ್‌ನ ಒನ್ ಆಫ್ ದಿ ಬೆಸ್ಟ್ ಆ್ಯಕ್ಷನ್ ಸಿನಿಮಾ “ಮಾರ್ಟಿನ್’ ಎಂದರೆ ತಪ್ಪಲ್ಲ. ಭರ್ಜರಿಯಾದ 4 ಫೈಟ್ ಮಾಡಿದ್ದೇನೆ. ಒಂದಕ್ಕಿಂತ ಒಂದು ಡಿಫರೆಂಟ್ ಆಗಿದೆ. ಮುಖ್ಯವಾಗಿ ನಾನು ತಂಡಕ್ಕೆ ನೆನಪು ಮಾಡಿಕೊಳ್ಳಲೇಬೇಕು. ಅವರೆಲ್ಲರೂ ಕಷ್ಟಪಟ್ಟಿದ್ದಾರೆ. ಬೆಂಗಳೂರು, ಮುಂಬೈ, ವೈಜಾಗ್‌ಗಳಲ್ಲಿ ಸಿನಿಮಾದ ಆ್ಯಕ್ಷನ್, ಚೇಸ್ ಮಾಡಿದ್ದೇವೆ. ಚಿತ್ರದಲ್ಲಿ ಕ್ಲೈಮ್ಯಾಕ್ಸ್ ವೇಳೆ ಬರುವ ಫೈಟ್ ಸಾಹಸ ಪ್ರಿಯರಿಗೆ ಖುಷಿ ಕೊಡಲಿದೆ.
ಸಾಹಸ ದೃಶ್ಯಗಳ ಬಜೆಟ್ ದುಬಾರಿಯಾಗಿದೆಯಂತೆ?
– ದುಬಾರಿ ಅನ್ನೋದಕ್ಕಿಂತ ನಿರ್ಮಾಪಕರು ಯಾವುದಕ್ಕೂ ಕಡಿಮೆ ಮಾಡಿಲ್ಲ. ಏನು ಕೇಳಿದರೂ ಅದನ್ನು ಕೊಟ್ಟಿದ್ದಾರೆ. ಈ ತರಹದ ಸಿನಿಮಾ ಮಾಡೋಕೂ ಒಂದು ಗಟ್ಸ್ ಬೇಕು. ಅಂತಿಮವಾಗಿ ಸಿನಿಮಾ ಚೆನ್ನಾಗಿ ಬರಬೇಕು ಎಂಬ ಕಾರಣಕ್ಕೆ ರಾಜಿಯಾಗಿಲ್ಲ. ಅವರ ಈ
ಸಿನಿಮಾ ಪ್ರೀತಿಗಾಗಿ ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲಬೇಕು.
ಧ್ರುವ ಬಗ್ಗೆ ಏನಂತೀರಿ?
– ಮೊದಲ ಸಿನಿಮಾದಿಂದಲೇ ಅವರ ಜೊತೆ ಕೆಲಸ ಮಾಡಿದ್ದೇನೆ. ಅಂತಹ ಒಬ್ಬ ಕಲಾವಿದ ಸಿಕ್ಕಿಬಿಟ್ಟರೆ ನಾವೇನು ಕಲ್ಪನೆ ಮಾಡಿಕೊಂಡಿರುತ್ತೇವೋ ಅದನ್ನು ಸುಲಭವಾಗಿ ಸಾಧಿಸಬಹುದು. ಅಂತಹ ಸಪೋರ್ಟ್ ಧ್ರುವ ಅವರಿಂದ ಸಿಗುತ್ತದೆ. ಏನು ಬೇಕು ಅದನ್ನು ನೀಡುವ ಜೊತೆಗೆ ನಿರ್ಮಾಪಕರನ್ನು ಕನ್ವಿನ್ಸ್ ಮಾಡಿ, ಚಿತ್ರ ಚೆನ್ನಾಗಿ ಬರುವಂತೆ ನೋಡಿಕೊಳ್ಳುತ್ತಾರೆ.
ಹೊರಗಡೆ ಮಾರ್ಟಿನ್ ಹವಾ ಹೇಗಿದೆ?
– ಕರ್ನಾಟಕದ ಜೊತೆಗೆ ಹೊರಗಡೆಯೂ ಮಾರ್ಟಿನ್‌ಗಾಗಿ ಕಾಯುತ್ತಿದ್ದಾರೆ. ಅದರಲ್ಲೂಟ್ರೇಲರ್ ಝಲಕ್ ನೋಡಿದ ಮೇಲಂತೂ ಸಿನಿಮಾದ ಕ್ರೇಜ್ ಹೆಚ್ಚಾಗಿದೆ. ಮುಂಬೈನಲ್ಲಿ “ಮಾರ್ಟಿನ್’ಗೆ ಸ್ವಲ್ಪ ಹೆಚ್ಚೇ ಡಿಮ್ಯಾಂಡ್ ಇದೆ.
ಧ್ರುವ ಅಭಿಮಾನಿಗಳಿಗೆ ಏನು ಹೇಳುತ್ತೀರಿ?
– ದಸರಾ ಹಬ್ಬದ ಸ್ಪೆಷಲ್ ಗಿಫ್ಟ್ ಇದು. ನಾವು ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ಇನ್ನು ಅಭಿಮಾನಿಗಳು ಕೈ ಹಿಡಿದು ನಡೆಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ZEBRA Movie: ಜೀಬ್ರಾ ಮೇಲೆ ಡಾಲಿ ಕಣ್ಣು
Drone Prathap: ಸಿನಿಮಾರಂಗಕ್ಕೆ ಡ್ರೋನ್ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.