ಭರ್ಜರಿ ಶತದಿನ ಸಂಭ್ರಮ
Team Udayavani, Dec 24, 2017, 11:35 AM IST
ಬಹುಶಃ ಇತ್ತೀಚಿನ ದಿನಗಳಲ್ಲಿ ಯಾವ ಚಿತ್ರವೂ ಈ ಮಟ್ಟಕ್ಕೆ ಸಂಭ್ರಮಿಸಿದ್ದಂತಿಲ್ಲ. ಆ ಮಟ್ಟಿಗೆ “ಭರ್ಜರಿ’ ಚಿತ್ರ ಸಂಭ್ರಮಿಸುತ್ತಿದೆ. “ಭರ್ಜರಿ’ ಚಿತ್ರವನ್ನು ಜನ ಇಷ್ಟಪಟ್ಟು, ಇದು 100 ದಿನ ಓಡುತ್ತದೆ ಎಂಬ ಮುನ್ಸೂಚನೆ ಸಿಕ್ಕ ದಿನದಿಂದಲೇ “ಭರ್ಜರಿ’ ತಂಡ ಹಾಗೂ ಧ್ರುವ ಸರ್ಜಾ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. 25 ದಿನ, 50 ದಿನ, 75 ದಿನಗಳನ್ನು ಚಿತ್ರಮಂದಿರದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದ ತಂಡ ಈಗ ಶತದಿನ ಸಂಭ್ರಮದತ್ತ ಬಂದು ನಿಂತಿದೆ. ಹೌದು, ಧ್ರುವ ಸರ್ಜಾ ಅಭಿನಯದ “ಭರ್ಜರಿ’ ಚಿತ್ರ ಶತದಿನ ಪೂರೈಸಿದೆ. ಆ ಖುಷಿಯನ್ನು ಧ್ರುವ ಅಭಿಮಾನಿಗಳು ಇಂದು ಕೆ.ಜಿ.ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರದಲ್ಲಿ ಅದ್ಧೂರಿಯಾಗಿ ಆಚರಿಸಲು ಮುಂದಾಗಿದ್ದಾರೆ.ಬೆಳಗ್ಗೆ 11 ಗಂಟೆಗೆ “ಭರ್ಜರಿ’ ಶತದಿನ ಸಂಭ್ರಮಾಚರಣೆ ನಡೆಯಲಿದ್ದು, ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ನರ್ತಕಿ ಚಿತ್ರಮಂದಿರದವರೆಗೆ ನಟ ಧ್ರುವ ಅವರನ್ನು ಮೆರವಣಿಗೆ ಮೂಲಕ ಅಭಿಮಾನಿಗಳು ಕರೆತರಲಿದ್ದಾರೆ.
ಕಾರ್ಯಕ್ರಮವನ್ನು ಕಲರ್‌ಫುಲ್ ಗೊಳಿಸಬೇಕೆಂಬ ಉದ್ದೇಶದಿಂದ ಡೊಳ್ಳು ಕುಣಿತ. ವೀರಗಾಸೆ, ಮೈಸೂರು ನಗಾರಿ, ಪೂಜಾ ಕುಣಿತ, ಕೇರಳ ಚೆಂಡೆ, ಕೀಲುಗೊಂವೆ, ತಮಟೆ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೆರವಣಿಗೆ ಮಾಡಲಿದ್ದಾರೆ. ಇನ್ನು ಇಡೀ ದಿನ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಕೂಡಾ ನಡೆಯಲಿದೆ. ಎಂದಿನಂತೆ ಹೂವಿನ ರಾಶಿ, ಪಟಾಕಿ ಸದ್ದು ಜೋರಾಗಿರಲಿದೆ. ಧ್ರುವ ಸರ್ಜಾ ಅವರ 75 ಅಡಿ ಕಟೌಟ್‌ಗೆ ಹೂವಿನ ಹಾರ, ಅಭಿಷೇಕ ಮೂಲಕ ಅಭಿಮಾನಿಗಳು ಖುಷಿಪಡಲಿದ್ದಾರೆ. ಚಿತ್ರ ಶತದಿನ ಆಚರಿಸಿದ ಸಂಭ್ರಮವನ್ನು ಚಿತ್ರತಂಡ 101 ಕೆಜಿಯ ಕೇಕ್ ಕತ್ತರಿಸುವ ಮೂಲಕ ಆಚರಿಸಲಿದೆ.
ಧ್ರುವ ಸರ್ಜಾ ನಾಯಕರಾಗಿರುವ “ಭರ್ಜರಿ’ ಚಿತ್ರದಲ್ಲಿ ರಚಿತಾ ರಾಮ್, ಹರಿಪ್ರಿಯಾ ನಾಯಕಿಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
Upendra: ʼಯುಐʼಗೆ ಸ್ಯಾಂಡಲ್ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.