ಧ್ರುವ ಹೇಳ್ತಿದ್ದಾರೆ “ಅಮ್ಮಾ ಐ ಲವ್ ಯೂ’
Team Udayavani, May 15, 2018, 5:43 PM IST
ಚಿರಂಜೀವಿ ಸರ್ಜಾ ನಟಿಸಿರುವ ದ್ವಾರಕೀಶ್ ಚಿತ್ರದಡಿ ನಿರ್ಮಾಣವಾಗುತ್ತಿರುವ 51ನೇ ಚಿತ್ರವಾದ “ಅಮ್ಮಾ ಐ ಲವ್ ಯೂ’ ಚಿತ್ರದ ಟೀಸರ್ ವಿಶ್ವ ಅಮ್ಮಂದಿರ ದಿನದಂದು ಬಿಡುಗಡೆಯಾಗಿದೆ.
ಟೀಸರ್’ಗೆ ಧ್ರುವ ಸರ್ಜಾ ಹಿನ್ನಲೆ ಧ್ವನಿ ನೀಡಿದ್ದು, ತಾಯಿಯ ಮಹತ್ವ, ಆಕೆಯ ಮೇಲೆ ಎಲ್ಲರೂ ಎಷ್ಟು ಅವಲಂಬಿತವಾಗಿದ್ದೇವೆ ಎಂಬುದನ್ನು ಬಹಳ ಅಚ್ಚುಕಟ್ಟಾಗಿ ಟೀಸರ್’ನಲ್ಲಿ ಹೇಳಿದ್ದಾರೆ. ಹಾಗೂ ತಾಯಿಯಿಂದ ನಾವು ಏನು ಬಯಸುತ್ತೇವೆ? ಮತ್ತು ಆಕೆಗೆ ಪ್ರತಿಫಲವಾಗಿ ನಾವು ಏನನ್ನು ನೀಡುತ್ತೇವೆ ಎಂಬ ಅಂಶ ಇದ್ದು, ತಂದೆಯಾಗಲು ಒಂದು ಕ್ಷಣ ಸಾಕು, ತಾಯಿಯಾಗಲು ಒಂದು ಜೀವನ ಬೇಕು ಎಂಬ ಸಂದೇಶ ಈ ಟೀಸರ್’ನಲ್ಲಿದೆ.
ಇನ್ನು ಚಿತ್ರದಲ್ಲಿ ಚಿರು ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಸಿತಾರಾ ಅಭಿನಯಿಸಿದ್ದು, ಚಿರುಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ನಟಿಸಿದ್ದಾರೆ. ಅಲ್ಲದೇ ರವಿಕಾಳೆ ಸೇರಿದಂತೆ ಬಹಳಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಚಿತ್ರವು ತಮಿಳಿನ “ಪಿಚ್ಚೈಕಾರನ್’ ರಿಮೇಕ್. ತಾಯಂದಿರ ಅಂಗವಾಗಿ ಈ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಎಲ್ಲಾ ತಾಯಂದಿರಿಗೂ ಇದನ್ನು ಅರ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.