Sandalwood; ಹಾಡಲ್ಲಿ ʼಧ್ರುವತಾರೆ’; ಇದು ಗಂಡ ಹೆಂಡ್ತಿ ಸಿನಿಮಾ
Team Udayavani, Aug 22, 2024, 3:26 PM IST
ಹಳೆಯ ಸಿನಿಮಾ ಟೈಟಲ್‌ಗಳು ಮತ್ತೆ ಮತ್ತೆ ಬಳಕೆಯಾಗುತ್ತಲೇ ಇರುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆ “ಧ್ರುವತಾರೆ’. ಡಾ.ರಾಜ್‌ಕುಮಾರ್ ನಟನೆಯ “ಧ್ರುವತಾರೆ’ ಟೈಟಲ್ ಅನ್ನೇ ಹೊಸಬರ ತಂಡ ಬಳಕೆ ಮಾಡಿಕೊಳ್ಳುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದೆ.
ಜಿ.ಪಿ. ಫಿಲಂಸ್ ಸ್ಟುಡಿಯೋಸ್ ಬ್ಯಾನರ್ ನಡಿ, ಗಣೇಶ್ ಕುಮಾರ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
ಪ್ರತೀಕ್ ನಿರ್ದೇಶನದ ಜೊತೆಗೆ ನಟನೆಯನ್ನು ಮಾಡಿದ್ದು, ಇದು ಫ್ಯಾಮಿಲಿ ಡ್ರಾಮಾದ ಕಥೆ ಇದಾಗಿದೆ. ಇತ್ತೀಚೆಗೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ಪ್ರತೀಕ್ ಮಾತನಾಡಿ, “ಧ್ರುವತಾರೆ ನನ್ನ ಐದು ವರ್ಷದ ಕನಸು. ಮೂರು ವರ್ಷದ ಶ್ರಮ. ನಾನು ಮೂಲತಃ ಮೈಸೂರಿನ ಹುಡುಗ. ಓದುತ್ತಿದ್ದಾಗಲೇ ಸಿನಿಮಾ ಮೇಲೆ ಆಸಕ್ತಿ ಇತ್ತು. ಆಮೇಲೆ ಕಿರುಚಿತ್ರ ಮಾಡುತ್ತಾ ಬಂದೆ. ಈಗ ನನ್ನ ಆಸೆ ಈಡೇರಿದೆ. ನಿರ್ದೇಶದ ಜೊತೆಗೆ ನಟನೆ ಕೂಡ ಮಾಡಿದ್ದೇನೆ. ಸಿನಿಮಾ ಮಾಡುವುದು ಸುಲಭ. ಈ ಸಿನಿಮಾದಲ್ಲಿ ನನ್ನ ಹೆಂಡತಿ ಮೌಲ್ಯ ಹೀರೋಯಿನ್. ಖಂಡಿತ ಈ ಸಿನಿಮಾದಲ್ಲಿ ಮೌಲ್ಯ ಅವರ ನಟನೆ ತುಂಬಾ ಚೆನ್ನಾಗಿ ಮಾಡಿದ್ದಾರೆ. ಎಲ್ಲರೂ ಕೂಡ ತುಂಬಾ ಚೆನ್ನಾಗಿ ನಟಿಸಿದ್ದಾರೆ’ ಎಂದರು.
ನಟಿ ಮೌಲ್ಯ ಮಾತನಾಡಿ, “ಧ್ರುವತಾರೆ ಸಿನಿಮಾ ನನ್ನ ಜೀವನದ ಒಂದು ಭಾಗವಾಗಿದೆ. ಸಿನಿಮಾದಲ್ಲಿ ಅಪೂರ್ವ ಎಂಬ ಪಾತ್ರ ನನ್ನದು. ಮುಗ್ದೆ ಕುತೂಹಲ ಜಾಸ್ತಿ, ಡ್ಯಾನ್ಸ್ ತುಂಬಾ ಇಷ್ಟಪಡುವ ಹುಡುಗಿಯ ಪಾತ್ರ ಅದು’ ಎಂದರು. ಉಳಿದಂತೆ ರಮೇಶ್ ಭಟ್, ಮೂಗೂರು ಸುರೇಶ್, ಸುಮನ್ ನಗಕರರ್, ಅಶ್ವಿನ್ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Hysteroscopy: ಸಂತಾನಹೀನತೆಯ ಪತ್ತೆ ಮತ್ತು ಚಿಕಿತ್ಸೆಗೆ ಒಂದು ಅತ್ಯವಶ್ಯಕ ಕಾರ್ಯವಿಧಾನ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.