Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ
Team Udayavani, Sep 17, 2024, 3:54 PM IST
![Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ](https://www.udayavani.com/wp-content/uploads/2024/09/15-10-620x372.jpg)
![Dhruva Thare Movie: ಸೆ.20ಕ್ಕೆ ಧ್ರುವತಾರೆ ತೆರೆಗೆ](https://www.udayavani.com/wp-content/uploads/2024/09/15-10-620x372.jpg)
ಹೊಸಬರ “ಧ್ರುವತಾರೆ’ ಚಿತ್ರ ಸೆ.20ರಂದು ತೆರೆಕಾಣುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಚಿತ್ರತಂಡ ಖುಷಿಯಾಗಿದೆ.
ಇದು ಒಂದು ವಾಸ್ತವದ ಪ್ರೇಮಕಥೆಯಾಗಿದ್ದು, ಗಣೇಶ್ ಕುಮಾರ್ ಸಿನಿಮಾದ ನಿರ್ಮಾಣ ಮಾಡಿದ್ದು, ಪ್ರತೀಕ್ ನಿರ್ದೇಶನದ ಜೊತೆಗೆ ನಟನೆಯನ್ನು ಕೂಡ ಮಾಡಿದ್ದಾರೆ.
ಪ್ರತಿಕ್ ಮತ್ತು ಮೌಲ್ಯ ಮುಖ್ಯ ತಾರಾಗಣದಲ್ಲಿ ಕಾಣಿಸಿಕೊಂಡಿದ್ದು, ಉಳಿದಂತೆ ರಮೇಶ್ ಭಟ್, ಸುಮನ್ ನಗಕರರ್, ಅಶ್ವಿನ್ ರಾವ್ ಪಲ್ಲಕ್ಕಿ, ಪಿಡಿ ಸತೀಶ್ ಸೇರಿದಂತೆ ಹಲವರು ಇದ್ದಾರೆ.
ಕಾರ್ತಿಕ್ ಮಹೇಶ್ ನೆಗೆಟಿವ್ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೊಂದು ಫ್ಯಾಮಿಲಿ ಡ್ರಾಮಾವಾಗಿದ್ದು, ಪ್ರೇಕ್ಷಕ ಇಷ್ಟಪಡುವ ವಿಶ್ವಾಸ ತಂಡದ್ದು