ದಾಂಪತ್ಯಕ್ಕೆ ಕಾಲಿಟ್ಟ ಸ್ಯಾಂಡಲ್‌ವುಡ್ ಜೋಡಿಗಳು
Team Udayavani, Dec 13, 2018, 4:21 PM IST
ಕನ್ನಡ ಚಿತ್ರರಂಗದ ಇಬ್ಬರು ನಾಯಕ ನಟರಾದ ದೂದ್ ಪೇಡಾ ದಿಗಂತ್ ಮತ್ತು ಸುಮಂತ್ ಶೈಲೇಂದ್ರ ವೈವಾಹಿಕ ಬದುಕಿಗೆ ಅಡಿಯಿಟ್ಟಿದ್ದಾರೆ. ನಂದಿಬೆಟ್ಟದ ತಪ್ಪಲಲ್ಲಿರುವ ಡಿಸ್ಕವರಿ ವಿಲೇಜ್‌ನಲ್ಲಿ ನಡೆದ ದಿಗಂತ್ ಮತ್ತು ಐಂದ್ರಿತಾ ಮದುವೆ ಸಮಾರಂಭದಲ್ಲಿ ಇಬ್ಬರ ಕುಟುಂಬದ ಸದಸ್ಯರು, ಸ್ನೇಹಿತರು, ಚಿತ್ರರಂಗದ ಕೆಲ ಆಪ್ತರು ಮಾತ್ರ ಪಾಲ್ಗೊಂಡಿದ್ದು, ನೂತನ ವಧು-ವರರಿಗೆ ಶುಭ ಹಾರೈಸಿದರು.
ಇನ್ನು ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ “ಆಟ’, “ದಿಲ್‌ವಾಲಾ’, “ತಿರುಪತಿ ಎಕ್ಸಪ್ರಸ್’ ಚಿತ್ರಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಸುಮಂತ್ ಶೈಲೇಂದ್ರ, ತಮ್ಮ ಬಹುಕಾಲದ ಗೆಳತಿ ಅನಿತಾ ಅವರನ್ನು ವರಿಸಿದ್ದಾರೆ. ಸುಮಂತ್-ಅನಿತಾ ಕುಟುಂಬ ವರ್ಗದವರು, ಸ್ನೇಹಿತರು, ಮತ್ತು ಚಿತ್ರೋದ್ಯಮದ ಹಲವು ಗಣ್ಯರು ವಿವಾಹ ಸಮಾರಂಭಕ್ಕೆ ಆಗಮಿಸಿ ನವಜೋಡಿಗೆ ಶುಭ ಕೋರಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.