ಹೊಸ ಚಿತ್ರದ ಶೂಟಿಂಗ್‌ನಲ್ಲಿ ಹರಿಪ್ರಿಯಾ ದಿಗಂತ್‌ ಬಿಝಿ

ಹೈದರಾಬಾದ್‌ನಲ್ಲಿ ನಡೆಯುತ್ತಿದೆ ಭರದ ಚಿತ್ರೀಕರಣ

Team Udayavani, Nov 9, 2020, 2:06 PM IST

ಹೊಸ ಚಿತ್ರದ ಶೂಟಿಂಗ್‌ನಲ್ಲಿ ಹರಿಪ್ರಿಯಾ ದಿಗಂತ್‌ ಬಿಝಿ

ತೆಲುಗಿನ ಸೂಪರ್‌ ಹಿಟ್‌ “ಎವರು’ ಚಿತ್ರದ ಕನ್ನಡ ರಿಮೇಕ್‌ನಲ್ಲಿ ನಟಿ ಹರಿಪ್ರಿಯಾ, ದಿಗಂತ್‌ ಮುಖ್ಯ ಭೂಮಿಕೆಯಲ್ಲಿಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿಕೆಲ ದಿನಗಳ ಹಿಂದಷ್ಟೇ ಹೊರಬಿದ್ದಿತ್ತು. ಅದಾದ ಬಳಿಕ “ಎವರು’ಕನ್ನಡ ಅವತರಣಿಕೆಯ ಮುಹೂರ್ತ ಸಮಾರಂಭಕೂಡ ಅದ್ಧೂರಿಯಾಗಿ ನೆರವೇರಿತ್ತು.

ಮುಹೂರ್ತದ ಬಳಿಕ ಚಿತ್ರ ತಂಡ ಕೊಂಚವೂ ತಡಮಾಡದೆ, ಚಿತ್ರೀಕರಣವನ್ನು ಆರಂಭಿಸಿದೆ. ಸದ್ಯ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದ್ದು, ಚಿತ್ರತಂಡಕೆಲ ದಿನಗಳಿಂದ ಹೈದರಾಬಾದ್‌ನಲ್ಲಿಯೇ ಬೀಡು ಬಿಟ್ಟಿದೆ. ಇನ್ನು ಈ ಚಿತ್ರದ ಮೊದಲ ಹಂತದ ಚಿತ್ರೀಕರಣದಲ್ಲಿ ನಾಯಕ ನಟಿ ಹರಿಪ್ರಿಯಾ, ನಟ ದಿಗಂತ್‌ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಬರುವ ಹರಿಪ್ರಿಯಾ ಮತ್ತು ದಿಗಂತ್‌ ಅವರ ನಟನೆಯ ಪ್ರಮುಖ ದೃಶ್ಯಗಳನ್ನು ಈ ಹಂತದ ಚಿತ್ರೀಕರಣದಲ್ಲಿ ಸೆರೆಹಿಡಿಯಲಾಗುತ್ತಿದ್ದು, ಈಗಾಗಲೇ ಒಂದು ವಾರದಿಂದ ಈ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಚಿತ್ರೀಕರಣದ ಬಗ್ಗೆ ಟ್ಟಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಹರಿಪ್ರಿಯಾ, “ದಿಗಂತ್‌ ಅವರೊಂದಿಗೆ ಹೊಸ ಚಿತ್ರದ ಶೂಟಿಂಗ್‌ ಹೈದರಾಬಾದ್‌ನಲ್ಲಿ ಒಂದು ವಾರದ ಹಿಂದೆ ಆರಂಭವಾಗಿದೆ. ಚಿತ್ರತಂಡ ತುಂಬ ಉತ್ಸಾಹದಿಂದ ಇದ್ದು, ನಾನು ಖುಷಿಯಾಗಿದ್ದೇನೆ’ ಎಂದಿದ್ದಾರೆ. ಅಲ್ಲದೆ ದಿಗಂತ್‌ ಜೊತೆಗಿರುವ ತಮ್ಮ ಫೋಟೋವನ್ನೂ ಹಂಚಿಕೊಂಡಿದ್ದಾರೆ.

ತೆಲುಗು ನಿರ್ದೇಶಕ ಅಶೋಕ್‌ ತೇಜ ಈ ಚಿತ್ರವನ್ನು ಕನ್ನಡದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಹರಿಪ್ರಿಯಾ, ದಿಗಂತ್‌ ಅವರೊಂದಿಗೆ ವಸಿಷ್ಟ ಸಿಂಹ, ಪ್ರಭು ಮುಂದ್ಕೂರ್‌ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ತೆಲುಗಿನ “ಎವರು’ ಸ್ಪಾನಿಷ್‌ ಭಾಷೆಯ “ದಿ ಇನ್ವಿಸಿಬಲ್‌ ಗೆಸ್ಟ್‌’ ಸಿನಿಮಾದ ರಿಮೇಕ್‌ ಆಗಿತ್ತು. ತೆಲುಗು ಪ್ರೇಕ್ಷಕರಿಗೆ ಇಷ್ಟವಾಗುವಂತೆ ಚಿತ್ರಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡು ಈ ಚಿತ್ರವನ್ನು ತೆರೆಗೆ ತರಲಾಗಿತ್ತು. ಅತ್ಯಾಚಾರಿಯೊಬ್ಬನನ್ನುಕೊಲ್ಲುವಕಥೆಯಸುತ್ತ ಚಿತ್ರ ನಡೆಯುತ್ತದೆ. ಸಸ್ಪೆನ್ಸ್‌ಕಂಕ್ರೈಂ – ಥ್ರಿಲ್ಲರ್‌ ಶೈಲಿಯಲ್ಲಿ ಮೂಡಿ ಬಂದ ಈ ಚಿತ್ರ ತೆಲುಗು ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಇದೀಗ ಇದೇ ಚಿತ್ರವನ್ನುಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುವಂತೆ ತೆರೆಮೇಲೆ ತರಲು ಹೊರಟಿದೆ ಚಿತ್ರತಂಡ. ಹೈದರಾಬಾದ್‌ ಮೂಲದ ರಾಜೇಶ್‌ ಅಗರವಾಲ್‌ ಹಾಗೂ ಡಿ. ಜಯಪ್ರಕಾಶ್‌ ರಾವ್‌ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಚಿತ್ರದ ಟೈಟಲ್‌ ಇನ್ನೂ ಅಂತಿಮವಾಗಿಲ್ಲ.

ಟಾಪ್ ನ್ಯೂಸ್

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Koppala–women

Tragedy: ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲೂ ಬಾಣಂತಿ, ಶಿಶು ಸಾವು: ಕುಟುಂಬಸ್ಥರ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

Manada Kadalu Movie: ಮನದ ಕಡಲಲಿ ಹೂ ದುಂಬಿ

Manada Kadalu Movie: ಮನದ ಕಡಲಲಿ ಹೂ ದುಂಬಿ

Sandalwood: ಹಾಡಲ್ಲಿ ಗರುಡ ಪುರಾಣ

Sandalwood: ಹಾಡಲ್ಲಿ ಗರುಡ ಪುರಾಣ

Sherr Kannada Movie: ಘರ್ಜಿಸಲು ಬಂದ ಶೇರ್‌

Sherr Kannada Movie: ಘರ್ಜಿಸಲು ಬಂದ ಶೇರ್‌

Actor Yash: ಈ ವರ್ಷವೂ ಯಶ್‌ ಬರ್ತ್‌ಡೇ ಆಚರಿಸಲ್ಲ

Actor Yash: ಈ ವರ್ಷವೂ ಯಶ್‌ ಬರ್ತ್‌ಡೇ ಆಚರಿಸಲ್ಲ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

infosys

Mysuru: ಇನ್ಫೋಸಿಸ್‌ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್‌ ಫ್ರಂ ಹೋಂ

Darshan-kannada

Professional Life: ಚಿತ್ರರಂಗಕ್ಕೆ ನಟ ದರ್ಶನ್‌ ಮರುಪ್ರವೇಶ!

TB-Jayachndra

Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ

Arrest

Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ

CS-Shadakshari

Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್‌.ಷಡಾಕ್ಷರಿ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.