Marigold; ಮಾರಿಯ ಹಿಂದೆ ದಿಗಂತ್, ಸಂಗೀತಾ
Team Udayavani, Feb 8, 2024, 3:24 PM IST
ದಿಗಂತ್ ಹಾಗೂ ಸಂಗೀತಾ ಶೃಂಗೇರಿ ಮುಖ್ಯಭೂಮಿಕೆಯಲ್ಲಿರುವ “ಮಾರಿಗೋಲ್ಡ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ರಾಘವೇಂದ್ರ ನಾಯ್ಕ ನಿರ್ದೇಶನದ ಈ ಚಿತ್ರವನ್ನು ರಘುವರ್ಧನ್ ನಿರ್ಮಿಸಿದ್ದಾರೆ.
“ಗುಣವಂತ ಸೇರಿ ಹಲವು ಚಿತ್ರ ನಿರ್ದೇಶನ ಮಾಡಿದ್ದೇನೆ. ರಾಘವೇಂದ್ರ ನಾಯ್ಕ್ ಹೇಳಿದ ಕಥೆ ಇಷ್ಟವಾಯಿತು. ನಾನು ನಿರ್ಮಾಣ ಮಾಡುತ್ತೇನೆ. ನೀವೇ ನಿರ್ದೇಶನ ಮಾಡಿ ಎಂದು ಅವರಿಗೆ ಅವಕಾಶ ಮಾಡಿಕೊಟ್ಟಿದ್ದೇನೆ. ಚಿತ್ರ ಅಂದು ಕೊಂಡದಕ್ಕಿಂತ ಚೆನ್ನಾಗಿ ಮೂಡಿ ಬಂದಿದೆ. ನಾಯಕ ದಿಗಂತ್, ನಾಯಕಿ ಸಂಗೀತಾ ಸಹಕಾರ ಚೆನ್ನಾಗಿತ್ತು. ಮುಂದಿನ ತಿಂಗಳು ಎರಡನೇ ಅಥವಾ ಮೂರನೇ ವಾರ ಚಿತ್ರ ತೆರೆಗೆ ತರುವ ಉದ್ದೇಶವಿದೆ’ ಎಂದರು ನಿರ್ಮಾಪಕ ರಘುವರ್ಧನ್.
ನಿರ್ದೇಶಕ ರಾಘವೇಂದ್ರ ಎಂ. ನಾಯ್ಕ್ ಮಾತನಾಡಿ, “ಮಾರಿ ಗೋಲ್ಡ್ ಗೋಲ್ಡ್ ಬಿಸ್ಕಟ್ ಮಾರಲು ಹೋದವರ 4 ಜನರ ಹುಡುಗರ ಕಥೆ. ಚಿತ್ರದುರ್ಗ, ಬೆಂಗಳೂರು ಸಕಲೇಶಪುರ ಮತ್ತಿತರ ಕಡೆ ಚಿತ್ರಿಕರಣ ಮಾಡಲಾಗಿದೆ. ಕೋವಿಡ್ ಆದ ಮೇಲೆ ಆ ನಂತರದ ಬೆಳವಣಿಗೆಗಳು ಚಿತ್ರ ವಿಳಂಬಕ್ಕೆ ಕಾರಣವಾಯಿತು. ಈಗ ಬಿಡುಗಡೆಗೆ ಸಜ್ಜಾಗಿದೆ. ಟೀಸರ್ ಮೂಲಕ ಪ್ರಚಾರ ಆರಂಭಿಸಿದ್ದೇವೆ’ ಎಂದು ಹೇಳಿದರು.
ಶುದ್ಧ ಮನರಂಜನೆಗೆ ಒತ್ತು ನೀಡಿ ಚಿತ್ರ ಮಾಡಲಾಗಿದೆ. ಚಿತ್ರದ ಮೂಲಕ ದಿಗಂತ ಅವರನ್ನು ಬೇರೆ ರೀತಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚಿತ್ರೀಕರಣಕ್ಕೂ ಮುನ್ನ ದಿಗಂತ್ ಅವರಿಗೆ ರಿಹಸರ್ಲ್ ಮಾಡಲಾಗಿದೆ. ಮನರಂಜನೆ ಡ್ರಾಮ ಮತ್ತು ಥ್ರಿಲ್ಲರ್ ಕಥೆ ಹೊಂದಿದೆ ಎನ್ನಲು ಮರೆಯಲಿಲ್ಲ. ನಟ ದಿಗಂತ್ ಇಷ್ಟು ದಿನ ಮಾಡಿದ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆಯಂತೆ. ಬುದ್ಧಿವಂತ ಸ್ಕಾಮರ್ ಪಾತ್ರದಲ್ಲಿ ನಟಿಸಿದ್ದಾರೆ.
ಇನ್ನು, ಸಂಗೀತಾ ಶೃಂಗೇರಿಗೆ ದಿಗಂತ್ ಜೊತೆ ನಟಿಸಿದ್ದು ಮೊದಲ ಖುಷಿ. ಅದಕ್ಕೆ ಕಾರಣ ಸಂಗೀತಾಗೆ ದಿಗಂತ್ ಚೈಲ್ಡ್‌ವುಡ್ ಕ್ರಶ್ ಅಂತೆ. ಉಳಿದಂತೆ ಚಿತ್ರದಲ್ಲಿ ವಜ್ರಾಂಗ ಶೆಟ್ಟಿ, ಕಾಕ್ರೋಚ್ ಸುಧಿ ಸೇರಿದಂತೆ ಅನೇಕರು ನಟಿಸಿದ್ದಾರೆ.
ಚಿತ್ರಕ್ಕೆ ರಘು ನಿಡುವಳ್ಳಿ ಸಂಭಾಷಣೆ, ಯೋಗರಾಜ್ ಭಟ್, ಕವಿರಾಜ್, ವಿಜಯ್ ಭರಮಸಾಗರ ಸಾಹಿತ್ಯ, ವೀರ್ ಸಮರ್ಥ್ ಸಂಗೀತವಿದೆ. ಚಿತ್ರಕ್ಕೆ ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhuvanam Gaganam Movie: ಭುವನಂ ವಿತರಣಾ ಹಕ್ಕು ಕೋಟಿ ಬೆಲೆಗೆ ಮಾರಾಟ
State Film Awards: 2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ; ಇಲ್ಲಿದೆ ಸಂಪೂರ್ಣ ಪಟ್ಟಿ
ಚೀನಾದ ಸೂಪರ್ ಮಾರ್ಕೆಟ್‌ನಲ್ಲಿ ಡಾ. ರಾಜ್‌ಕುಮಾರ್ ʼಗಂಧದ ಗುಡಿʼ ಹಾಡು: ವಿಡಿಯೋ ವೈರಲ್
Sandalwood: ಥಿಯೇಟರ್, ಓಟಿಟಿ ಬಳಿಕ ಟಿವಿಯಲ್ಲಿ ಬರಲಿದೆ ʼಭೈರತಿ ರಣಗಲ್ʼ: ಯಾವಾಗ, ಎಲ್ಲಿ?
Royal movie: ರಾಯಲ್ ಚಿತ್ರ ವೀಕ್ಷಿಸಿದ ದರ್ಶನ್ ಆ್ಯಂಡ್ ಫ್ಯಾಮಿಲಿ
MUST WATCH
ಹೊಸ ಸೇರ್ಪಡೆ
Shimoga: ಜಮೀನಿನ ವಿದ್ಯುತ್ ಪರಿವರ್ತಕ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ; ಆರೋಪಿಗಳ ಬಂಧನ
Los Angeles: ಮತ್ತೊಂದು ಕಾಡ್ಗಿಚ್ಚು; 30 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ
Threat Mail: ಹಾಸ್ಯ ನಟ ಕಪಿಲ್ ಶರ್ಮಾ ಸೇರಿದಂತೆ ನಾಲ್ವರು ಸೆಲೆಬ್ರಿಟಿಗಳಿಗೆ ಜೀವ ಬೆದರಿಕೆ
Karkala: ಸಾಣೂರಿನಲ್ಲಿ ಟೆಂಪೊಗೆ ಸರಕಾರಿ ಬಸ್ ಢಿಕ್ಕಿ, 10ಕ್ಕೂ ಅಧಿಕ ಮಂದಿಗೆ ಗಾಯ
Donald Trump: ಚೀನಾ ಆಮದು ಮೇಲೆ ಶೇ.10 ಸುಂಕ… ನೂತನ ಅಧ್ಯಕ್ಷ ಟ್ರಂಪ್