ದಿಗಂತ್ ಹೇಳಿದ 4 ದಿನದ ಕಥೆ
Team Udayavani, Jun 19, 2018, 11:04 AM IST
ದಿಗಂತ್ ಖುಷಿಯಾಗಿದ್ದಾರೆ. ಈ ಬಾರಿ ಅವರಿಗೆ ಗೆದ್ದೇ ಗೆಲ್ಲುವ ವಿಶ್ವಾಸವಿದೆ. ಅದಕ್ಕೆ ಕಾರಣ “ಕಥೆಯೊಂದು ಶುರುವಾಗಿದೆ’. ಇದು ದಿಗಂತ್ ಅವರ ಹೊಸ ಸಿನಿಮಾ. ಈ ಚಿತ್ರ ಜುಲೈನಲ್ಲಿ ತೆರೆಕಾಣಲಿದ್ದು, ಇತ್ತೀಚೆಗೆ ಬಿಡುಗಡೆಯಾದ ಟ್ರೇಲರ್ ಹಿಟ್‌ಲಿಸ್ಟ್ ಸೇರಿದೆ. ಸಿನಿಮಾವನ್ನು ಜನ ಇದೇ ರೀತಿ ಸ್ವೀಕರಿಸುತ್ತಾರೆಂಬ ವಿಶ್ವಾಸದಲ್ಲಿರುವ ದಿಗಂತ್ ತಮ್ಮ “ಕಥೆಯೊಂದು ಶುರುವಾಗಿದೆ’ ಬಗ್ಗೆ ಮಾತನಾಡಿದ್ದಾರೆ …
*ನಿಮ್ಮ “ಕಥೆಯೊಂದು ಶುರುವಾಗಿದೆ’ ಬಿಡುಗಡೆಗೆ ರೆಡಿಯಾಗಿದೆ. ಟ್ರೇಲರ್‌ಗೂ ಮೆಚ್ಚುಗೆ ವ್ಯಕ್ತವಾಗಿದೆ. ಹೇಗನಿಸ್ತಾ ಇದೆ?
ನನ್ನ ಯಾವ ಸಿನಿಮಾದ ಟ್ರೇಲರ್ ಕೂಡಾ ಈ ಮಟ್ಟಿಗೆ ಹಿಟ್ ಆಗಿರಲಿಲ್ಲ. “ಕಥೆಯೊಂದು ಶುರುವಾಗಿದೆ’ ಟ್ರೇಲರ್ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ನೋಡಿದ ಶೇ 80 ರಷ್ಟು ಮಂದಿಯಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ಒಂದು ಸಿನಿಮಾ ಬಿಡುಗಡೆಗೆ ಮುನ್ನ ಟ್ರೇಲರ್ ಹಿಟ್ ಆದರೆ, ಜನ ಸಿನಿಮಾವನ್ನು ಇಷ್ಟಪಡುತ್ತಾರೆಂಬ ನಂಬಿಕೆ. ನಾನು ಕೂಡಾ ಈ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಯಿಂದ ಎದುರು ನೋಡುತ್ತಿದ್ದೇನೆ.
* ತುಂಬಾ ದಿನಗಳ ನಂತರ ಸಿನಿಮಾವೊಂದು ಸೌಂಡ್ ಮಾಡ್ತಿದೆ?
ಹೌದು, ಈ ಸಿನಿಮಾ ಒಪ್ಪಿಕೊಂಡಾಗಲೇ ನನಗೆ ವಿಶ್ವಾಸವಿತ್ತು. ಅದಕ್ಕೆ ಕಾರಣ ತಂಡ. ನಿರ್ದೇಶಕ ಸೆನ್ನಾ ಅವರಿಂದ ಹಿಡಿದು ಛಾಯಾಗ್ರಾಹಕ, ಸಂಗೀತ ನಿರ್ದೇಶಕ …. ಹೀಗೆ ಇಡೀ ತಂಡ ತುಂಬಾ ಫ್ರೆಶ್ ಆಗಿತ್ತು ಮತ್ತು ತುಂಬಾ ಉತ್ಸಾಹದಿಂದ ಕೂಡಿತ್ತು. ಅದರ ಫಲವಾಗಿ ಸಿನಿಮಾ ಕೂಡಾ ಚೆನ್ನಾಗಿ ಮೂಡಿಬಂದಿದೆ.
* “ಕಥೆಯೊಂದು ಶುರುವಾಗಿದೆ’ ಟೈಟಲ್‌ಗೂ, ಕಥೆಗೂ ಏನು ಸಂಬಂಧ?
ಜೀವನದ ಪ್ರತಿ ಘಟ್ಟಗಳಲ್ಲೂ ಒಂದೊಂದು ಕಥೆ ಹುಟ್ಟಿಕೊಳ್ಳುತ್ತಾ ಹೋಗುತ್ತದೆ. ಲವ್‌ಸ್ಟೋರಿ ಆರಂಭವಾದಾಗ ಇದೇ ನನ್ನ ಜೀವನ ಎಂದು ಭಾವಿಸುತ್ತಾರೆ. ಆದರೆ, ಅದು ಮುಗಿದು, ಮತ್ತೂಂದು ಹೊಸ ಕಥೆ ಹುಟ್ಟಿಕೊಳ್ಳುತ್ತದೆ. ಇದು ನಾಲ್ಕು ದಿನದಲ್ಲಿ ನಡೆಯುವ ಕಥೆ. ಸೋಮವಾರ ಆರಂಭವಾಗಿ ಗುರುವಾರ ಮುಗಿಯುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಕಥೆಯನ್ನು ಮಜಾವಾಗಿ ಹೇಳಿದ್ದಾರೆ.
* ನಿಮ್ಮ ಪಾತ್ರದ ಬಗ್ಗೆ ಹೇಳಿ?
ನಾನಿಲ್ಲಿ ರೆಸಾರ್ಟ್ ಮಾಲೀಕ. ಮಿಡ್‌ಲೈಫ್ಗೆ ಬಂದ ಯುವಕನ ತಳಮಳನ್ನು ಇಲ್ಲಿ ತೋರಿಸಲಾಗಿದೆ. ಮದುವೆಯಾಗುತ್ತಾ, ಇಲ್ವಾ, ಒಂಟಿತನದ ಭಯವನ್ನು ಇಲ್ಲಿ ಬಿಂಬಿಸಲಾಗಿದೆ. ಚಿತ್ರದಲ್ಲಿ ಮೂರು ವಯಸ್ಸಿನವರ ಮೂಲಕ ಜೀವನವನ್ನು ಕಟ್ಟಿಕೊಡಲಾಗಿದೆ. 20ರಿಂದ 21ರ ಒಂದು ಜೋಡಿ., 30ರ ಯುವಕ, 60 ರ ಒಂದು ಜೋಡಿ ಹಾಗೂ ಅವರ ಚಿಂತನೆಗಳೊಂದಿಗೆ ಇಡೀ ಸಿನಿಮಾ ಸಾಗುತ್ತದೆ.
*ನಿಮ್ಮ ಈ ಹಿಂದಿನ ಸಿನಿಮಾಗಳಿಂತ “ಕಥೆಯೊಂದು ಶುರುವಾಗಿದೆ’ ಬೇಗ ಮುಗಿದಿದೆ?
ಅದು ನಿರ್ಮಾಣ ಸಂಸ್ಥೆ ಮೇಲೆ ಅವಲಂಭಿತವಾಗಿರುತ್ತದೆ. ಒಳ್ಳೆಯ ನಿರ್ಮಾಣ ಸಂಸ್ಥೆ, ಸಿನಿಮಾ ಬಗ್ಗೆ ಆಸಕ್ತಿ ಇರುವ ನಿರ್ಮಾಪಕರು ಸಿಕ್ಕರೆ ಎಲ್ಲವೂ ಬೇಗನೇ ಮತ್ತು ಅಚ್ಚುಕಟ್ಟಾಗಿ ಮುಗಿಯುತ್ತದೆ. ಪುಷ್ಕರ್ ಹಾಗೂ ಪರಂವಾ ಬ್ಯಾನರ್ ಮಾತ್ರ ಆ ವಿಷಯದಲ್ಲಿ ತುಂಬಾ ಪ್ಯಾಶನೇಟ್ ಆಗಿದೆ. ಇಡೀ ತಂಡ ಸಿನಿಮಾವನ್ನು ತುಂಬಾನೇ ಪ್ರೀತಿಸುತ್ತಾರೆ. ಚಿತ್ರೀಕರಣದಿಂದ ಹಿಡಿದು ಮಾರ್ಕೇಟ್‌ವರೆಗೂ ಅವರು ಸಿನಿಮಾವನ್ನು ತಲುಪಿಸುವಲ್ಲಿ ಶ್ರಮ ವಹಿಸುತ್ತಾರೆ. ಈ ಬ್ಯಾನರ್‌ನಲ್ಲಿ ಮತ್ತೂಂದು ಸಿನಿಮಾ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ.
*ನಿಮ್ಮ ಫಾರ್ಚೂರ್ನರ್ ಸಿನಿಮಾದ ಕಥೆ ಏನಾಯ್ತು?
ಆ ಸಿನಿಮಾದ ಚಿತ್ರೀಕರಣ ಆಗಿ ಡಬ್ಬಿಂಗ್ ಕೂಡಾ ಮುಗಿಸಿದ್ದೇನೆ. “ಕಥೆಯೊಂದು ಶುರುವಾಗಿದೆ’ ನಂತರ ಅದು ಬರಲಿದೆ.
* ಬಾಲಿವುಡ್‌ನಲ್ಲಿ ಅವಕಾಶ ಹೇಗಿದೆ?
ಒಂದಷ್ಟು ಸಿನಿಮಾ ಅವಕಾಶಗಳು ಬರುತ್ತಿವೆ. ಸದ್ಯ ಹಿಂದಿ ವೆಬ್ ಸೀರಿಸ್‌ವೊಂದನ್ನು ಒಪ್ಪಿಕೊಂಡಿದ್ದೇನೆ. ಸಿನಿಮಾ ಯಾವುದೂ ಒಪ್ಪಿಕೊಂಡಿಲ್ಲ.
* ಆಗಾಗ ನಿಮ್ಮ ಮದುವೆ ಸುದ್ದಿ ಜೋರಾಗಿ ಕೇಳಿಬರುತ್ತಲ್ವಾ?
ಹೌದು, ನಾನು ಒಂದು ಹೇಳಿದರೆ ಅದು ಇನ್ನೇನೋ ಆಗಿ ಸುದ್ದಿಯಾಗುತ್ತದೆ. ಆ ಬಗ್ಗೆ ನಾನೇ ಮುಂದೊಂದು ದಿನ ಮಾತನಾಡುತ್ತೇನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.