ಕಾರ್ಮಿಕರ ದಿನಸಿಗೆ ಡಿಜಿಟಲ್ ಕಾರ್ಡ್
Team Udayavani, Apr 9, 2020, 10:40 AM IST
ಕೋವಿಡ್ 19 ಹಿನ್ನೆಲೆಯಲ್ಲಿ ಲಾಕ್‌ಡೌನ್ ಮಾಡಿದ್ದರಿಂದ ಚಿತ್ರರಂಗ ಸಂಪೂರ್ಣ ಸ್ಥಗಿತಗೊಂಡಿದ್ದು, ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟದ ದಿನಗೂಲಿ ನೌಕರರು ಕೂಡ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ಚಿತ್ರರಂಗದ ಹಲವು ನಟರು ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಇತ್ತೀಚೆಗೆ ನಟ ನಿಖೀಲ್‌ಕುಮಾರಸ್ವಾಮಿ ಅವರು ಸಹ ಕಾರ್ಮಿಕರ ಒಕ್ಕೂಟಕ್ಕೆ 37 ಲಕ್ಷ ರುಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಸ್ಪಂದಿಸಿದ್ದರು.
ಆ ಕುರಿತಂತೆ “ಉದಯವಾಣಿ ‘ ಜೊತೆ ಮಾತನಾಡಿದ ಒಕ್ಕೂಟದ ಅಧಕ್ಷ ಅಶೋಕ್, ” ಇತ್ತೀಚೆಗೆ ಸಮಸ್ಯೆ ಅರಿತು ನಿಖೀಲ್ ಕುಮಾರಸ್ವಾಮಿ ಅವರು ಒಕ್ಕೂಟಕ್ಕೆ 37 ಲಕ್ಷ ರುಪಾಯಿ ಕೊಟ್ಟಿದ್ದರು. ಆ ಹಣದಿಂದ ಕಾರ್ಮಿಕರ ಅಕೌಂಟ್‌ಗೆ ತಲಾ 1 ಸಾವಿರ ರುಪಾಯಿಗಳನ್ನು ಹಾಕಲಾಗಿದೆ. ಅದು ಬಿಟ್ಟರೆ, ಈಗ ಒಕ್ಕೂಟ ಇನ್ನೊಂದು ಮಹತ್ವದ ಹೆಜ್ಜೆ ಇಡಲು ಮುಂದಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರೂ ಸಂಕಷ್ಟದಲ್ಲಿದ್ದಾರೆ. ಹೀಗಿರುವಾಗ, ಒಕ್ಕೂಟದ ನೌಕರರಿಗೆ ದಿನಸಿ ವ್ಯವಸ್ಥೆ ಮಾಡಲು ಮುಂದಾಗಿದ್ದೇವೆ. ಈಗಾಗಲೇ ರಿಲಯನ್ಸ್ ಫ್ರೆಶ್, ಡಿಮಾರ್ಟ್ ಹಾಗು ಬಿಗ್‌ಬಜಾರ್ ಜೊತೆ ಮಾತುಕತೆ ನಡೆಸಲಾಗುತ್ತಿದ್ದು, ಅವರಿಗೆ ಹಣ ಕೊಟ್ಟು, ಡಿಜಿಟಲ್ ಕಾರ್ಡ್ ಮೂಲಕ ಕಾರ್ಮಿಕರಿಗೆ ದಿನಸಿ ವಿತರಣೆ ಮಾಡಲು ಸಾಧ್ಯತೆ ಕುರಿತು ಚರ್ಚೆ ಮಾಡಿದ್ದೇವೆ. ಅದು ಯಶಸ್ವಿಯಾದರೆ, ನಮ್ಮ ಒಕ್ಕೂಟದ ಎಲ್ಲಾ ಕಾರ್ಮಿಕರು ಕೂಡ ಅಲ್ಲಿಗೆ ಹೋಗಿ ದಿನಸಿ ಪಡೆಯಬಹುದಾಗಿದೆ.
ಒಕ್ಕೂಟದಲ್ಲೀಗ ಮೂರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಜಗತ್ತಿಗೆ ಈ ಸಮಸ್ಯೆ ಎದುರಾಗಿರುವಾಗ, ಅವರೂ ಕೂಡ ತಾಳ್ಮೆಯಿಂದ ಇರಬೇಕು, ಯಾವುದನ್ನೂ ಡಿಮ್ಯಾಂಡ್ ಮಾಡಬಾರದು ಅಂತ ಅರಿತಿದ್ದಾರೆ. ಇನ್ನು, ಒಕ್ಕೂಟದ ಆಯಾ ಸಂಘಗಳು, ತಮ್ಮ ಸದಸ್ಯರಿಗೆ ಇಂತಿಷ್ಟು ಹಣ ಅಂತ ಸಾಲದ ರೂಪದಲ್ಲಿ ವಿತರಣೆ ಮಾಡುತ್ತಿವೆ. ಈ ನಡುವೆ ಸರ್ಕಾರದ ಜೊತೆಯಲ್ಲೂ ಮಾತುಕತೆ ಮಾಡಲಾಗುತ್ತಿದೆ. ಸರ್ಕಾರ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸುವ ಭರವಸೆ ಇದೆ ‘ಎನ್ನುತ್ತಾರೆ ಅಶೋಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.