ಅರವಿಂದ್ ತಟ್ಟೆಯಲ್ಲಿ ಮೂರು ಸಿನಿಮಾ
Team Udayavani, Mar 21, 2019, 8:00 AM IST
ನಿರ್ದೇಶಕ ಅರವಿಂದ್ ಕೌಶಿಕ್ ಸದ್ದಿಲ್ಲದೆಯೇ ಒಂದಲ್ಲ, ಎರಡಲ್ಲ, ಮೂರು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಹೌದು, ಕಿರುತೆರೆಯಲ್ಲಿ “ಕಮಲಿ’ ಧಾರಾವಾಹಿ ನಿರ್ದೇಶಿಸುತ್ತಿರುವ ಅರವಿಂದ್ ಕೌಶಿಕ್, ನಿರ್ದೇಶನದ ಒಂದು ಚಿತ್ರ ರಿಲೀಸ್‌ಗೆ ರೆಡಿಯಾಗಿದ್ದರೆ, ಇನ್ನೊಂದು ಶೇ.80 ರಷ್ಟು ಪೂರ್ಣಗೊಂಡಿದೆ. ಮತ್ತೂಂದು ಚಿತ್ರ ಶುರುವಾಗಬೇಕಿದೆ. “ಶಾರ್ದೂಲ’ ಇದು ಅರವಿಂದ್ ಕೌಶಿಕ ಅವರ ಹಾರರ್ ಥ್ರಿಲ್ಲರ್ ಚಿತ್ರ. ಈ ಹಿಂದೆಯೇ ಚಿತ್ರ ಪೂರ್ಣಗೊಂಡಿತ್ತು.
ಆದರೆ, ಇಂತಹ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮುಖ್ಯವಾಗಿರಬೇಕು ಎಂಬ ಕಾರಣಕ್ಕೆ ಎರಡು-ಮೂರು ಸಲ ಹಿನ್ನೆಲೆ ಸಂಗೀತ ಕೆಲಸ ಮಾಡಿಸಿ, ಈಗ ಬಿಡುಗಡೆಗೆ ತಯಾರಾಗಿದ್ದಾರೆ. ಈ ಚಿತ್ರದಲ್ಲಿ ಚೇತನ ಚಂದ್ರ,ಕೃತಿಕಾ ರವೀಂದ್ರ, ರವಿತೇಜ, ಹೊಸ ಹುಡುಗಿ ಐಶ್ವರ್ಯ ಪ್ರಸಾದ್ ನಟಿಸಿದ್ದಾರೆ.
ಐದು ಪ್ರಮುಖ ಪಾತ್ರಗಳು ಚಿತ್ರದ ಹೈಲೈಟ್ ಎನ್ನುವ ಅರವಿಂದ್ ಕೌಶಿಕ್, ಈ ಚಿತ್ರವನ್ನು ರೋಹಿತ್ ಮತ್ತು ಕಲ್ಯಾಣ್ ನಿರ್ಮಾಣ ಮಾಡಿದ್ದಾರೆ ಎಂದು ವಿವರ ಕೊಡುತ್ತಾರೆ. ಎರಡನೆಯದು “ಸ್ಟೀಲ್ ಪಾತ್ರೆ ಸಾಮಾನು’ ಇದು ಕೂಡ ಹೊಸಬರನ್ನು ಹಾಕಿಕೊಂಡು ಮಾಡಿರುವ ಚಿತ್ರ. ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಪಕ್ಕಾ ಮನರಂಜನೆಯ ಚಿತ್ರ. ಬಹಳ ದಿನಗಳಿಂದಲೂ “ಸ್ಟೀಲ್
ಪಾತ್ರೆ ಸಾಮಾನು’ ಚಿತ್ರ ಮಾಡಬೇಕು ಎಂಬ ಯೋಚನೆ ಇತ್ತು. ಆದರೆ, ಕಾಲ ಕೂಡಿಬಂದಿರಲಿಲ್ಲ. ಇದು ಸಹ ಮೂವರು ಹೊಸಬರ ಸುತ್ತ ನಡೆಯುವ ಕಥೆ. ಮೂವರು ಹುಡುಗರು ಸಿನಿಮಾಗೆ ಹೊಸಬರಾದರೂ ಇಂಡಸ್ಟ್ರಿಗೆ ಹೊಸಬರಲ್ಲ. ಮಿಮಿಕ್ರಿ ಮಾಡುವ ಮೂಲಕ ಗಮನ ಸೆಳೆದಿರುವ ಜಯಂತ್ ಪಿ.ಬೆಳ್ಳೂರು, ಶ್ರವಣ್ ಐತಾಳ್, ಮನೋಜ್ ಚಿತ್ರ.
ಹೈಲೈಟ್. ಇದು ನಮ್ಮ ಹೋಮ್ ಪ್ರೊಡಕ್ಷನ್‌ನಲ್ಲಿ ತಯಾರಾಗುತ್ತಿರುವ ಚಿತ್ರ ಎನ್ನುತ್ತಾರೆ ಅರವಿಂದ್ ಕೌಶಿಕ್.
ಇನ್ನು, ಈ ಚಿತ್ರದ ಬಳಿಕ ಮುಂದೇನು ಎಂಬ ಪ್ರಶ್ನೆ ಎದುರಾದಾಗ, ಫೇಸ್‌ಬುಕ್‌ನಲ್ಲಿ ಸುಮ್ಮನೆ ಒಂದಷ್ಟು ಡೈಲಾಗ್‌ಗಳನ್ನು ಅಪ್‌ಲೋಡ್ ಮಾಡುತ್ತಿದ್ದೆ. ಪಂಚಿಂಗ್ ಡೈಲಾಗ್ ಗಳು ಫಿಲಾಸಫಿ ಹೇಳುವಂತಿರುತ್ತಿದ್ದವು.
ಹಾಗೇ ಒಂದು ಪಾತ್ರ ತಲೆಯಲ್ಲಿ ಕೂತುಕೊಂಡಿತು. “#ಫೂಲ್ ದಿ ಫಿಲ್ಮ್ ಮೇಕರ್’ ಹೆಸರಲ್ಲೇ ಒಂದಷ್ಟು ಬರೆಯುತ್ತಾ ಹೋದೆ. ಫೇಸ್ ಬುಕ್ ಫ್ರೆಂಡ್ಸ್ ಮೆಚ್ಚಿಕೊಂಡರು. ಕೊನೆಗೆ ಚಿತ್ರ ಮಾಡಬೇಕು ಅಂತ ನಿರ್ಧರಿಸಿದೆ. “# ಫೂಲ್ ದಿ ಫಿಲ್ಮ್ಮೇಕರ್ ಟೈಟಲ್ ಇಟ್ಟು ಸಿನಿಮಾ ಮಾಡುವ ಯೋಚನೆ ಮಾಡಿದ್ದೇನೆ.
ಇಲ್ಲಿ ಪಾತ್ರಗಳು ಹೆಚ್ಚಾಗಿಲ್ಲ. ಇಲ್ಲಿ ಹೀರೋಯಿಸಂ ಇರಲ್ಲ. ಕಥೆಯೇ ಹೀರೋ, ಅದಕ್ಕೊಂದಷ್ಟು ಕಾಮಿಡಿ ಟಚ್ ಇಟ್ಟು ಸಿನಿಮಾ ಮಾಡಲು ಹೊರಟಿದ್ದೇನೆ. ಸದ್ಯಕ್ಕೆ ನನ್ನ ಮೂರು ಚಿತ್ರಗಳನ್ನು ತಟ್ಟೆಯಲ್ಲಿಟ್ಟುಕೊಂಡಿದ್ದೇನೆ. “# ದಿ ಫೂಲ್ ಫಿಲ್ಮ್ಮೇಕರ್’ ಚಿತ್ರ ಕೊಂಚ ಸರ್‌ಪ್ರೈಸ್ ಆಗಿರಲಿದೆ. ಇನ್ನು ಎರಡು ತಿಂಗಳ ಬಳಿಕ ಈ ಚಿತ್ರ ಶುರುವಾಗಲಿದೆ ಎನ್ನುತ್ತಾರೆ ಅರವಿಂದ್ ಕೌಶಿಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
OTT Release Date: ಸೂಪರ್ ಹಿಟ್ ʼಭೈರತಿ ರಣಗಲ್ʼ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್
Lacchi Kannada Movie: ಲಚ್ಚಿ ಚಿತ್ರಕ್ಕೆ ಪ್ರಶಸ್ತಿ ಗರಿ
Chowkidar Movie: ಶೂಟಿಂಗ್ ಮುಗಿಸಿದ ಚೌಕಿದಾರ್
KD Movie: ಪ್ರೇಮ್ ಕೆಡಿಗೆ ಅಜಯ್ ದೇವಗನ್ ಸಾಥ್; ಶಿವನ ಹಾಡಿಗೆ ಧ್ರುವ ಭರ್ಜರಿ ಸ್ಟೆಪ್ಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.