‘ಡೆಡ್ಲಿ-3’ ಕೈಗೆತ್ತಿಕೊಂಡ ನಿರ್ದೇಶಕ ರವಿ ಶ್ರೀವತ್ಸವ
Team Udayavani, May 31, 2021, 4:02 PM IST
ನಿರ್ದೇಶಕ ರವಿ ಶ್ರೀವತ್ಸವ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಈ ಚಿತ್ರಕ್ಕೆ ದೀಕ್ಷಿತ್ ನಾಯಕ ನಟರಾಗಿ ಅಭಿನಯಿಸಲಿದ್ದಾರೆ.
ಇಂದು ದೀಕ್ಷಿತ ಅವರ ಹುಟ್ಟುಹಬ್ಬ. ಈ ಸಂಭ್ರಮದ ಪ್ರಯುಕ್ತ ಡೆಡ್ಲಿ-3 ಚಿತ್ರ ಅನೌನ್ಸ್ ಮಾಡಿದ್ದಾರೆ ನಿರ್ದೇಶಕ ಶ್ರೀವತ್ಸವ. ತಮ್ಮ ಹೊಸ ಸಿನಿಮಾ ಬಗ್ಗೆ ಮಾತನಾಡಿರುವ ಅವರು, ‘ಎಲ್ಲರಿಗೂ ತಿಳಿದಿರುವ ಹಾಗೆ ಹೋದ ವರ್ಷ MR ಸಿನಿಮಾ ಶುರು ಮಾಡ್ಲಿಕ್ಕೆ ಅಂತ ಹೊರಟು ನಿಂತ್ವೀ, ಅದ್ಯಾವ ನಾಯಿ ಕಣ್ಣೋ ನರಿ ಕಣ್ಣೋ, ಆ ಸಿನಿಮಾ ಮುಹೂರ್ತ ಮಾಡಿಕೊಂಡ ತದನಂತರದ ದಿನಗಳಲ್ಲಿ ಪ್ರಾರಂಭ ಮಾಡೋ ಮುನ್ನವೇ ಆ ಸಿನಿಮಾಗೆ ಸಮಾಧಿ ಕಟ್ಬಿಟ್ರೂ. ಓಕೆ. MR ಹೋದ್ರೇನು DR ಮಾಡೋಣ ಅಂತ ಹೆಜ್ಜೆ ಎತ್ತಿ ಮುಂದಕ್ಕಿಟ್ಟು ಸಾಗಬೇಕು ಅಂದ್ಕೊಂಡ್ವೀ ಅಷ್ಟರಲ್ಲಿ, ಅದೇ ಕಥೇ ಇಟ್ಕೊಂಡು ಇನ್ನೊಂದು ಟೈಟಲ್ ಹಾಕಿ ಸಿನಿಮಾ ಮಾಡ್ತಾ ಇದ್ದಾನೆ, DR ಬೇರೇನೆ ಕಥೆ ಅಂತ ಬರದು ಕೊಟ್ಟು ಸಿನಿಮಾ ಮಾಡಿ ಅಂತ ಅಂದ್ರೂ’ ‘ನನ್ನ ಕೈಲಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಿನಿಮಾ ಮಾಡೋ ಛಲ ಇದೆ, ಇಲ್ಲ ಸಲ್ಲದ ಗಲಾಟೆಗಳನ್ನ ಮಾಡಿಕೊಂಡಾದ್ರೂ ಸಿನಿಮಾ ಮಾಡೋ ಮನುಷ್ಯ ನಾನಲ್ಲಾ. DR ಕಥೆಗೆ ಅಲ್ಲೆ ಎಳ್ಳು ನೀರು ಬಿಟ್ವೀ. ಅನ್ಯಾಯ, ಸುನಾಮಿ, ಕರೋನಾ ಇನ್ನು ಅದೇನೇನು ಎದ್ರಾಗುತ್ತೋ ನೋಡೆೇ ಬಿಡೋಣಾ ಅಂತ ಈಗ ಇನ್ನೊಂದು ಹಜ್ಜೆ ಮುಂದಿಡ್ತಾ ಇದ್ದೀವೀ. I’m Using My LifeLine.. MR ಆಯ್ತು DR ಆಯ್ತು ನನ್ನ ಅನ್ನದ ಋಣ ಈಗ D3’
‘ಕಳೆದ 16ವರ್ಷಗಳಿಂದ ನನ್ನ ಹೆಸರನ್ನ ನನ್ನ ಗೌರವವನ್ನ ಕಾಪಾಡಿಕೊಂಡು ಬಂದ ಡೆಡ್ಲಿ ಅನ್ನೋ ಆಯುಧವೇ ನನಗೆ ಬುನಾದಿಯಾಗಿ ನಿಂತಿದೆ, ಈ ದಿನ ಶ್ರೀರಕ್ಷೆಯಾಗಿ ಕಾಪಾಡ್ಲಿಕ್ಕೆ ಬಂದಿದೆ. ನಿಮ್ಮೆಲ್ಲರ ಪ್ರೀತಿ ಹಾರೈಕೆ ಆಶೀರ್ವಾದ ಸದಾ ನನ್ನ ಬೆಂಗಾವಲಾಗಿರಲಿ’ ಎಂದು ಹೇಳಿದ್ದಾರೆ.
“Deadly 3”
Yes on the occasion of my Hero Dixith BirthDay Celebration, herewith we are announcing our prestigious project “Title” as well as our “First Look”
DEADLY IT’S NOT JUST A FILM IT’S MY JOURNEY!!
ನಿಮ್ಮೆಲ್ಲರ ಪ್ರೀತಿ ಹಾರೈಕೆ ಆಶೀರ್ವಾದ ಸದಾ ನನ್ನ ಬೆಂಗಾವಲಾಗಿರಲಿ..
ಡೆಡ್ಲಿ! pic.twitter.com/OsA3Mezh6K
— Ravii Srivatsaa (@deadlysrivatsaa) May 30, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.