ShivaRajkumar: ʼಘೋಸ್ಟ್ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್ ರಿವೀಲ್
Team Udayavani, Nov 14, 2024, 1:19 PM IST
ಬೆಂಗಳೂರು: ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ (Dr. Shiva Rajkumar) ಅವರ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿದೆ.
ಕನ್ನಡ ಚಿತ್ರರಂಗದಲ್ಲಿ ʼಬೀರ್ ಬಲ್ʼ ಆಗಿ, ʼಓಲ್ಡ್ ಮಾಂಕ್ʼ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಿದ ನಿರ್ದೇಶಕ ಶ್ರೀನಿ (Director Srini) ಶಿವರಾಜ್ ಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಮುಂದಿನ ಸಿನಿಮಾದ ಟೈಟಲ್ ರಿವೀಲ್ ಆಗಿದೆ.
ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ ‘A for Apple’ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ ಎಂದು ಸಿನಿಮಾದ ಟೈಟಲ್ ನ್ನು ಪೋಸ್ಟರ್ ಮೂಲ ರಿಲೀಸ್ ಮಾಡಲಾಗಿದೆ.
ಸಿನಿಮಾಕ್ಕೆ ʼಎ ಫಾರ್ ಆನಂದ್ʼ ಎಂದು ಟೈಟಲ್ ಇಡಲಾಗಿದೆ. ರೈಲಿನ ಮೇಲೆ ಶಿವರಾಜ್ ಕುಮಾರ್ ಮ್ಯಾಜಿಕ್ ಪೆನ್ಸಿಲ್ ವೊಂದನ್ನು ಹಿಡಿದು ನಿಂತಿದ್ದಾರೆ. ಅವರ ಹಿಂದೆ ಖುಷಿಯಿಂದ ಮಕ್ಕಳು ನಿಂತಿದ್ದಾರೆ. ರೈಲಿನ ಒಳಗೆ ಪಾಠಶಾಲೆ ಎಂದು ಬರೆಯಲಾಗಿದೆ. ಮೇಲ್ನೋಟಕ್ಕೆ ಶಿವಣ್ಣ ಶಿಕ್ಷಕನಂತೆ ಕಾಣುತ್ತಿದ್ದಾರೆ.
ಇದನ್ನೂ ಓದಿ: Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
ಕರ್ನಾಟಕದ ಹೃದಯ ಭಾಗದಲ್ಲಿ, ಹದಿನಾಲ್ಕು ಹಳ್ಳಿಗಳ ಕನಸುಗಳು ಒಂದೇ ಶಾಲೆಯಲ್ಲಿ ಚಿಗುರುತ್ತವೆ. ಇಲ್ಲಿ ಅಕ್ಷರದ ಅರುಣೋದಯ ‘A for Apple’ನಿಂದ ಆರಂಭವಾಗುವುದಿಲ್ಲ, ಬದಲು ಬೆಳಕಿನ ಬೀಜ ಬಿತ್ತಿದ ಗುರುವಿನ ಹೆಸರಿನಿಂದ ಮೊಳೆಯುತ್ತದೆ
ಅದೇ A for ಆನಂದ್ ✨📚@NimmaShivanna #GeethaShivaRajkumar @GeethaPictures @lordmgsrinivas pic.twitter.com/ZpgKNDBvdl
— Geetha Pictures (@GeethaPictures) November 14, 2024
ಸಿನಿಮಾಕ್ಕೆ ಗೀತಾ ಶಿವರಾಜ್ ಕುಮಾರ್ ಅವರ ಗೀತಾ ಪಿಕ್ಚರ್ಸ್ ಬಂಡವಾಳ ಹಾಕಲಿದೆ. ಪೋಸ್ಟರ್ ರಿಲೀಸ್ ಮಾಡಿ ಮಕ್ಕಳ ದಿನಾಚರಣೆಯ ಶುಭಾಶಯವನ್ನು ಚಿತ್ರತಂಡ ತಿಳಿಸಿದೆ.
ಈ ಹಿಂದೆ ನಿರ್ದೇಶಕ ಶ್ರಿನಿ ಶಿವರಾಜ್ ಕುಮಾರ್ ಅವರೊಂದಿಗೆ ಮಾಸ್ ಕಂಟೆಂಟ್ ವುಳ್ಳ ʼಘೋಸ್ಟ್ʼ ಸಿನಿಮಾವನ್ನು ಮಾಡಿದ್ದರು. ಇದೀಗ ಶಿವಣ್ಣ ಜತೆ ವಿಭಿನ್ನ ಕಂಟೆಂಟ್ ವುಳ್ಳ ಮತ್ತೊಂದು ಸಿನಿಮಾ ಮಾಡಲಿದ್ದಾರೆ.
ಸದ್ಯ ಶಿವರಾಜ್ ಕುಮಾರ್ ತಮ್ಮ ʼಭೈರತಿ ರಣಗಲ್ʼ ಸಿನಿಮಾದ ರಿಲೀಸ್ ತಯಾರಿಯಲ್ಲಿದ್ದಾರೆ. ಶುಕ್ರವಾರ (ನ.15ರಂದು) ಸಿನಿಮಾ ರಿಲೀಸ್ ಆಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.