Tharun Sudhir: ತನ್ನ ಜೀವನದ ಹೀರೋಯಿನ್ ಪರಿಚಯಿಸಲು ರೆಡಿಯಾದ ತರುಣ್ ಸುಧೀರ್
Team Udayavani, Jul 21, 2024, 5:35 PM IST
ಬೆಂಗಳೂರು: ನಿರ್ದೇಶಕ ತರುಣ್ ಸುಧೀರ್ (Tharun Sudhir) ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನುವ ವಿಚಾರ ಚಂದನವನದಲ್ಲಿ ಕಳೆದ ಕೆಲ ದಿನಗಳಿಂದ ಹರಿದಾಡುತ್ತಿದೆ.
ಸೋನಲ್ ಮಂಥೆರೋ (Sonal Monteiro) ಜೊತೆ ಅವರು ಜೀವನದ ಹೊಸ ಹೆಜ್ಜೆಯನ್ನು ಇಡಲಿದ್ದಾರೆ ಎನ್ನಲಾಗುತ್ತಿದೆ. ಬಹುತೇಕ ತರುಣ್ – ಸೋನಲ್ ಪ್ರೇಮ್ ಕಹಾನಿ ಮದುವೆಯ ಹಂತಕ್ಕೆ ಬಂದಿರುವುದು ಅಧಿಕೃತವಾಗಿದ್ದು, ಈ ಬಗ್ಗೆ ಇಬ್ಬರು ಜೊತೆಯಾಗಿ ಮಾಧ್ಯಮಗಳೊಂದಿಗೆ ವಿಚಾರವನ್ನು ಹಂಚಿಕೊಳ್ಳಲು ಡೇಟ್ ಫಿಕ್ಸ್ ಆಗಿದೆ.!
ಹೌದು, ಸೋಮವಾರ ಬೆಳಗ್ಗೆ(ಜು.22ರಂದು) ತರುಣ್ ಸುಧೀರ್ ನಾಳೆ ಬೆಳಗ್ಗೆ 11:08ಕ್ಕೆ ತಾನು ಕೈ ಹಿಡಿಯುವ ಹುಡುಗಿ, ತನ್ನ ಜೀವನದ ಹೀರೋಯಿನ್ ಯಾರೆಂದು ಬಹಿರಂಗ ಮಾಡಲಿದ್ದಾರೆ.
ಹೀರೋಯಿನ್ – ಡೈರೆಕ್ಟರ್ ಕುರ್ಚಿಯ ಫೋಟೋವನ್ನು ಹಂಚಿಕೊಂಡು,”ಕೊನೆಗೂ ನಿರ್ದೇಶಕರು ತನ್ನ ಜೀವನದ ನಾಯಕಿಯನ್ನು ಕಂಡುಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ. ಈ ಫೋಟೋವನ್ನು ಸೋನಲ್ ಕೂಡ ಹಂಚಿಕೊಂಡಿದ್ದಾರೆ.
ಈ ಹಿಂದೆ ಮದುವೆಯ ವಿಚಾರವಾಗಿ ತರುಣ್, ಮದುವೆ ಆಗುತ್ತಿರುವುದು ಹೌದು. ಇದನ್ನು ನಾವು ಖುದ್ದಾಗಿ ಎಲ್ಲರ ಮುಂದೆ ಹೇಳುತ್ತೇವೆ ಎಂದು ಹೇಳಿದ್ದರು.
View this post on Instagram
ನಾಳೆ ಸೋನಲ್ – ತರುಣ್ ಇಬ್ಬರೂ ಜೊತೆಯಾಗಿ ಮದುವೆ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಸಾಧ್ಯತೆಯಿದೆ. ಇತ್ತೀಚೆಗೆ ತರುಣ್ ದರ್ಶನ್(Actor Darshan) ಅವರನ್ನು ಭೇಟಿಯಾಗಿ ಮದುವೆ ಬಗ್ಗೆ ಹೇಳಿದ್ದರು ಎನ್ನಲಾಗಿದೆ.
ಮೂಲಗಳ ಪ್ರಕಾರ ಆಗಸ್ಟ್ ತಿಂಗಳಿನಲ್ಲಿ ತರುಣ್ – ಸೋನಲ್ ಮದುವೆ ಆಗಲಿದ್ದಾರೆ ಎನ್ನಲಾಗಿದೆ.
ʼರಾಬರ್ಟ್ʼ ಸಿನಿಮಾದ ಸಂದರ್ಭದಲ್ಲಿ ತರುಣ್ – ಸೋನಲ್ ನಡುವಿನ ಆತ್ಮೀಯತೆ ಪ್ರೀತಿಗೆ ತಿರುಗಿತ್ತು ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.