ಡಿಕೆ ಬೋಸ್ ರೆಡಿ
Team Udayavani, Feb 20, 2019, 5:33 AM IST
ಪ್ರೇಮ್ “ಡಿಕೆ’ ಎಂಬ ಸಿನಿಮಾ ಮಾಡಿರೋದು ನಿಮಗೆ ನೆನಪಿರಬಹುದು. ಈಗ “ಡಿ.ಕೆ.ಬೋಸ್’ ಎಂಬ ಸಿನಿಮಾ ಸದ್ದಿಲ್ಲದೇ ತಯಾರಾಗಿದ್ದು, ಬಿಡುಗಡೆಯ ಹಂತಕ್ಕೆ ಬಂದಿದೆ. ಬ್ರೇಕ್ ಫ್ರೀ ಸಿನಿಮಾಸ್ ಲಾಂಛನದಲ್ಲಿ ಸಂತೋಷ್ ಮಹಂತೇಶ್ ಹಾಗೂ ನರಸಿಂಹಮೂರ್ತಿ ಅವರು ನಿರ್ಮಿಸಿರುವ “ಡಿ.ಕೆ.ಬೋಸ್’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.
ಮಾರ್ಚ್‌ನಲ್ಲಿ 15 ರಂದು ಚಿತ್ರ ತೆರೆಗೆ ಬರಲಿದೆ. ವಜ್ರ ಹುಡುಕಿಕೊಂಡು ಮಂಗಳೂರಿಗೆ ಇಬ್ಬರು ಕಳ್ಳರು ಬರುತ್ತಾರೆ. ಅವರು ಬಂದ ಮೇಲೆ ಅಲ್ಲಿ ಏನೇನು ಘಟನೆಗಳು ನಡೆಯುತ್ತದೆ ಎನ್ನುವ ಕಥಾ ಹಂದರವುಳ್ಳ ಈ ಚಿತ್ರವನ್ನು ಚಿತ್ರದ ನಿರ್ಮಾಪಕರಲೊಬ್ಬರಾದ ಸಂತೋಷ್ ಮಹಾಂತೇಶ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಮಂಗಳೂರು ಸುತ್ತಮುತ್ತ ಚಿತ್ರಕ್ಕೆ 21 ದಿನಗಳ ಚಿತ್ರೀಕರಣ ನಡೆದಿದೆ.
ಎರಡು ಹಾಡುಗಳಿರುವ ಈ ಚಿತ್ರಕ್ಕೆ ಡೊಲ್ವಿನ್ ಸಂಗೀತ ನೀಡಿದ್ದಾರೆ. ಉದಯ್ ಬಲ್ಲಾಳ್ ಛಾಯಾಗ್ರಹಣ ಹಾಗೂ ಸುರೇಶ್ ಆರ್ಮುಗಂ ಸಂಕಲನರುವ ಈ ಚಿತ್ರದ ತಾರಾಬಳಗದಲ್ಲಿ ಪೃಥ್ವಿ ಅಂಬರ್, ಭೋಜರಾಜ್ ವಾಮಂಜೂರ್, ಶೋಭ್‌ರಾಜ್ ಪಾವೂರ್, ರಿಷಾ ನಿಜಗುಂದ್, ರಘು ಪಾಂಡೇಶ್ವರ್ ಮುಂತಾದವರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.