ಮನುಷ್ಯ ಗುರುತಿನ ಸುತ್ತ ‘ಡಿಎನ್‌ಎ’
Team Udayavani, Apr 8, 2021, 4:24 PM IST
“ಡಿಎನ್‌ಎ ’- ಹೀಗೊಂದು ವಿಭಿನ್ನ ಶೀರ್ಷಿಕೆಯ ಚಿತ್ರ ಸೆಟ್ಟೇರಿರೋದು ನಿಮಗೆ ಗೊತ್ತಿರಬಹುದು. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಪ್ರಮೋಶನಲ್ ಸಾಂಗ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆ ಮಾಡಿದೆ.
ಯೋಗರಾಜ್ ಭಟ್ ಬರೆದಿರುವ ಪ್ರಮೋಶನಲ್ ಸಾಂಗ್ ಅನ್ನು ನೀನಾಸಂ ಸತೀಶ್ ಹಾಡಿದ್ದಾರೆ. ಮನುಷ್ಯನ ಪಯಣದ ಸುತ್ತ ಈ ಹಾಡನ್ನು ಬರೆಯಲಾಗಿದೆ. ಈ ಚಿತ್ರವನ್ನು ಪ್ರಕಾಶ್ ರಾಜ್ ಮೆಹು ನಿರ್ದೇಶಿಸಿದ್ದಾರೆ. ಮೈಲಾರಿ ಎಂ ಈ ಚಿತ್ರದ ನಿರ್ಮಾಪಕರು.
ಚಿತ್ರದ ಬಗ್ಗೆ ಮಾತನಾಡುವ ಪ್ರಕಾಶ್ ರಾಜ್ ಮೆಹು, “ನಾನು ಕಳೆದ 25 ವರ್ಷಗಳಿಂದ ಸಿನಿಮಾ ರಂಗದಲ್ಲಿದ್ದೇನೆ. ಆದರೆ ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಕಲಾತ್ಮಕವೂ ಆಗದೇ, ಪೂರ್ಣ ಕಮರ್ಷಿಯಲ್ ಚಿತ್ರವೂ ಆಗದೇ ಅದರ ನಡುವಿನ ಸಿನಿಮಾವನ್ನಾಗಿ ಡಿಎನ್‌ಎ ಮಾಡಿದ್ದೇನೆ. ಇದೊಂದು ಗುರುತಿನ ಕಣದ ಸಿನಿಮಾ’ ಎಂದರು.
ಚಿತ್ರದಲ್ಲಿ ಅಚ್ಯುತ್ ಕುಮಾ ರ್ ಪ್ರಮುಖ ಪಾತ್ರ ಮಾಡಿ ದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, “ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ ಇದಾಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದರು.
ನಾಯಕಿ ಎಸ್ತರ್ ನರೋನ್ಹಾ ಕೂಡಾ ಒಳ್ಳೆಯ ಕಥೆ, ಸಿನಿಮಾದಲ್ಲಿ ನಟಿಸಿದ ಖುಷಿ ಹಂಚಿ ಕೊಂಡರು. ಉಳಿದಂತೆ ರೋಜರ್ ನಾರಾಯಣ್, ಮಾಸ್ಟರ್ ಕೃಷ್ಣ ಚೈತನ್ಯ ನಟಿಸಿದ್ದಾರೆ. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಇಡೀ ಕುಟುಂಬ ಜೊತೆಯಾಗಿ ಕುಳಿತು ನೋಡಬಹುದು ಎನ್ನುವುದು ನಿರ್ಮಾಪಕ ಮೈಲಾರಿ ಮಾತು. ಚಿತ್ರಕ್ಕೆ ಚೇತನ್ ಸಂಗೀತವಿದೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಚಿತ್ರ ತಂಡಕ್ಕೆ ಶುಭ ಕೋರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Kollywood: ಬಹಿರಂಗ ಪತ್ರ ಬರೆದು ಧನುಷ್ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.