“ಕೆಜಿಎಫ್’ ಫ್ಲಾಪ್ ಆಗುತ್ತೆ ಅಂದವರಿಗೆ ಜಗ್ಗೇಶ್ ಹೇಳಿದ್ದೇನು ಗೊತ್ತಾ?
Team Udayavani, Nov 9, 2018, 12:46 PM IST
ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್’ ಸಿನಿಮಾ ಫ್ಲಾಪ್ ಆಗುತ್ತೆ ಎಂದು ಹೇಳಿದ್ದವರಿಗೆ ನವರಸ ನಾಯಕ ಜಗ್ಗೇಶ್ ತಮ್ಮ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ರಾಕಿಂಗ್ ಸ್ಟಾರ್ ಅಭಿನಯದ “ಕೆಜಿಎಫ್’ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಭಾರೀ ನಿರೀಕ್ಷೆಯನ್ನು ಮೂಡಿಸಿದೆ. ಡಿಸೆಂಬರ್ 21ಕ್ಕೆ ಪಂಚ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಅಲ್ಲದೇ ಬಾಲಿವುಡ್ ನಟ ಶಾರುಖ್ ಖಾನ್ ನಟನೆಯ “ಝಿರೋ’ ಚಿತ್ರವು ಕೂಡಾ ಅಂದೇ ರಿಲೀಸ್ ಆಗಲಿದ್ದು, “ಕೆಜಿಎಫ್’ ಚಿತ್ರ “ಝಿರೋ’ ಚಿತ್ರದ ಮುಂದೆ ಫ್ಲಾಪ್ ಆಗುತ್ತದೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಬಗ್ಗೆ ಅಭಿಮಾನಿಯೊಬ್ಬರು ನಟ ಜಗ್ಗೇಶ್‍ಗೆ ಟ್ಯಾಗ್ ಮಾಡಿದ್ದರು.
ಇದಕ್ಕೆ ಜಗ್ಗೇಶ್ ತಮ್ಮ ಟ್ವೀಟರ್ ನಲ್ಲಿ “ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೇ ಆಗಲಿ, ಅವರ ಭುಜ ತಟ್ಟಿ ಹುರಿದುಂಬಿಸುವವನೇ ನಿಜವಾದ ಕನ್ನಡಿಗ. ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸಲಾಗದ ನಿಷ್ಪ್ರಯೋಜಕ. ನಮ್ಮ ಕಲಾಬಂಧುಗಳಿಂದ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ. ಈ ಬಗ್ಗೆ ಹೆಮ್ಮೆ ಪಡಿ, ಪರಭಾಷಿಕರಿಗೆ ಕನ್ನಡ ಚಿತ್ರರಂಗ ಕುತೂಹಲ ಮೂಡಿಸುತ್ತಿದೆ. ಹೆಮ್ಮೆಯಿಂದ ಜೈ ಎನ್ನಿ’ ಎಂದು ಬರೆದುಕೊಂಡಿದ್ದಾರೆ.
ಕನ್ನಡದ ಬೆಳವಣಿಗೆಗೆ ಶ್ರಮಿಸುವ ಯಾರೆ ಆಗಲಿ ಅವರ ಭುಜತಟ್ಟಿ ಹುರಿದುಂಬಿಸುವವನೆ ನಿಜವಾದ #ಕನ್ನಡಿಗ
ಅಸೂಯೆ ಪಡುವವನು ಸಾಧಿಸಲಾಗದ ಸಾಧಿಸಿದವರನ್ನು ಸಹಿಸದಲಾಗದ ನಿಶ್ಪ್ರಯೋಜಕ!
ಹೆಮ್ಮೆಪಡಿ ಕನ್ನಡ ಚಿತ್ರರಂಗ ಮುಂಚೂಣಿಗೆ ನುಗ್ಗುತ್ತಿದೆ ನಮ್ಮಕಲಾಬಂಧುಗಳಿಂದ..
ಕನ್ನಡಚಿತ್ರರಂಗ ಕುತೂಹಲ ಮೂಡಿಸುತ್ತಿದೆ ಪರಭಾಷಿಕರಿಗೆ.
ಹೆಮ್ಮೆಯಿಂದ ಜೈಅನ್ನಿ. https://t.co/ifxwVSNUpC— ನವರಸನಾಯಕ ಜಗ್ಗೇಶ್ (@Jaggesh2) November 8, 2018
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Upendra: ʼಯುಐʼಗೆ ಸ್ಯಾಂಡಲ್‌ವುಡ್ ಸಾಥ್; ಉಪೇಂದ್ರ ಚಿತ್ರ ನೋಡಲು ಕಾತುರ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
MUST WATCH
ಹೊಸ ಸೇರ್ಪಡೆ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
Puttur: ಬಸ್ – ಬೈಕ್ ಅಪಘಾತ; ಸವಾರ ಸಾವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.