ದಿ ವಿಲನ್ ಹಾಡಲ್ಲಿ ಏನಿದೆ ಗೊತ್ತಾ?
Team Udayavani, Jul 22, 2018, 3:31 PM IST
“ನೆನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ …’ “ದಿ ವಿಲನ್’ ಚಿತ್ರಕ್ಕೆ ಪ್ರೇಮ್ ಇಂಥದ್ದೊಂದು ಹಾಡು
ಮಾಡಿದಾಗ, ಸಾಕಷ್ಟು ಚರ್ಚೆಯಾಗಿತ್ತು. ಬೇರೆ ಹೀರೋಗಳನ್ನು ಪ್ರೇಮ್ ಟಾರ್ಗೆಟ್ ಮಾಡುತ್ತಿದ್ದಾರೆ,
ಕಾಲೆಳೆಯುತ್ತಿದ್ದಾರೆ ಎಂದೆಲ್ಲಾ ನೂರೆಂಟು ಮಾತುಗಳು ಕೇಳಿ ಬಂದಿದ್ದವು. ಈ ಕುರಿತು ಪ್ರತಿಕ್ರಿಯಿಸಿದ್ದ ಪ್ರೇಮ್,
“ಯಾರನ್ನೂ ಉದ್ದೇಶಿಸಿ ಈ ಸಾಲನ್ನು ಬರೆದಿಲ್ಲ ಮತ್ತು ಸಣ್ಣ ವಿಷಯಗಳಿಗೆ ದೊಡ್ಡ ವಿವಾದ ಮಾಡಬಾರದೆಂದು’
ಚಿತ್ರಪ್ರೇಮಿಗಳಲ್ಲಿ ಕೇಳಿಕೊಂಡಿದ್ದರು. ಅಲ್ಲಿಗೆ ಆ ವಿವಾದ ಮುಗಿದಿತ್ತು. ಈಗ ಆ ಹಾಡಿನ ಲಿರಿಕಲ್ ವೀಡಿಯೋವನ್ನು ಪ್ರೇಮ್ ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಅದು ಸಾಕಷ್ಟು ಜನಪ್ರಿಯವಾಗಿದೆ.
ಈ ಮುನ್ನ “ನೆನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ …’ ಸಾಲಿನ ಬಗ್ಗೆ ಮಾತ್ರ ವಿವಾದ ಎದ್ದಿತ್ತು.
ಆದರೆ, ಈ ಹಾಡಿನಲ್ಲಿ ಇನ್ನಷ್ಟು ಸಾಲುಗಳಲ್ಲಿ ತಪ್ಪು ಕಂಡು ಹಿಡಿದಿದ್ದಾರೆ ಚಿತ್ರ ಪ್ರೇಮಿಗಳು. “ಮಚ್ಚು ಹಿಡಿದು ನಿಂತ್ರೆ ನೀನು ಹುಚ್ಚೆದ್ದು ಕುಣೀತಾರೋ, ನಿನ್ನ ಮುಂದೆ ಎಲ್ರೂ ಬಚ್ಚ ಕಾಣಣ್ಣ …’ ಎಂಬ ಸಾಲುಗಳ ಕುರಿತಾಗಿ ಕೆಲವು ನಟರ ಅಭಿಮಾನಿಗಳು ಬೇಸರಗೊಂಡಿದ್ದು, ಇದೇ ವಿಷಯವಾಗಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ. ಇನ್ನು
ಹಾಡಿನ ಎರಡನೆಯ ಚರಣದಲ್ಲಿ “ನೆನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ, ಅವ್ರವರೆ ಸಂಘ ಕಟ್ಕೊಂಡು ಬಿರುದು ಇಟ್ಕೊಂಡ್ ನಿಂತವ್ರೋ, ನಿಂಗೆ ನಂಬರ್‌ಗಳೆ ಲೆಕ್ಕಇಲ್ಲಣ್ಣ …’ ಎಂಬ ಸಾಲುಗಳು ಬರುತ್ತದೆ.
ಚಿತ್ರದಲ್ಲಿ ಶಿವರಾಜಕುಮಾರ್ ಅವರನ್ನು ಪರಿಚಯಿಸುವ ಈ ಹಾಡಿಗೆ ಕೈಲಾಶ್ ಖೇರ್, ವಿಜಯಪ್ರಕಾಶ್, ರವಿಶಂಕರ್ ಮತ್ತು ಪ್ರೇಮ್ ಧ್ವನಿ ನೀಡಿದ್ದಾರೆ.
ಈ ಹಾಡಿನ ವಿಶೇಷವೆಂದರೆ, ಡಾ. ರಾಜಕುಮಾರ್ ಅಭಿನಯದ “ಆಪರೇಷನ್ ಡೈಮಂಡ್ ರಾಕೆಟ್’ ಚಿತ್ರದ “ಇಫ್ ಯೂ ಕಮ್ ಟುಡೇ …’ ಹಾಡಿನ ಕೆಲವು ಸಾಲುಗಳನ್ನು ಬಳಸಿಕೊಳ್ಳಲಾಗಿದೆ.
ಅಣ್ಣ ನನ್ನ ಊರು
ಅಣ್ಣ ನನ್ನ ಹೆಸರು
ಅಣ್ಣ ನಾನು ಕೆಂಚನಹಳ್ಳಿ ಕೆಂಚ ಕಾಣಣ್ಣೋ
ಇಫ್ ಯೂ ಕಮ್ ಟುಡೇ
ಐ ಆ್ಯಮ್ ಸೋ ಹ್ಯಾಪಿ
ಇಫ್ ಯೂ ಕಮ್ ಟುಮಾರೋ
ಐ ಆ್ಯಮ್ ಟೂ ಬ್ಯಾಡ್
ಯೂ ಪಿಕ್ ದಿ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಧಗ ಧಗ ಧಗ ಧಗ
ರಾಜರ ಹಿರಿ ಮಗ
ಬಿಟ್ಟ ನೋಡು ಮೂರನೇ ಕಣ್ಣ ಶಂಕರ
ಶಿವಶಂಕರ
ತಗ ತಗ ತಗ ತಗ
ಮಚ್ಚೇಟು ಬೀಳುವಾಗ
ಕೈಕಾಲು ಲ್ಯಾಪುÕ ಶಿವಶಂಕರ
ಅಯ್ಯೋ ಶಂಕರ
ಮಚ್ಚು ಹಿಡಿದು ನಿಂತ್ರೆ ನೀನು ಹುಚ್ಚೆದ್ದು ಕುಣೀತಾರೋ
ನಿನ್ನ ಮುಂದೆ ಎಲ್ರೂ ಬಚ್ಚ ಕಾಣಣ್ಣ
ಇಫ್ ಯೂ ಕಮ್ ಟುಡೇ
ಐ ಆ್ಯಮ್ ಸೋ ಹ್ಯಾಪಿ
ಇಫ್ ಯೂ ಕಮ್ ಟುಮಾರೋ
ಐ ಆ್ಯಮ್ ಟೂ ಬ್ಯಾಡ್
ಯೂ ಪಿಕ್ ದಿ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ರಾಜಾಧಿರಾಜನೇ ರಾಕ್ಷಸರ ರಾಜನೇ
ರಾಜಾಧಿರಾಜ ಬಾರೋ
ಹೇಳಿ ಹೇಳಿ ಹೇಳ್ರಪ್ಪಾ
ಎಲ್ರೂ ಒಟ್ಟಿಗೆ ಹೇಳ್ರಪ್ಪಾ
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಬಿಡು ಬಿಡು ಬಿಡು ಬಿಡು
ನಾನ್ನದ್ ಮೊದುÉ ಬಿಡು
ನಾವು ಅಂತ ಬಾಳ್ಳೋದು ಕಲಿ ಶಂಕರ
ಶಿವಶಂಕರ
ಕೊಡು ಕೊಡು ಕೊಡು ಕೊಡು
ಕೈಲಾದಷ್ಟು ದಾನ ಕೊಡು
ಸ್ವರ್ಗ ನರ್ಕ ಎಲ್ಲ ಇಲ್ಲೇ ಶಂಕರ
ಇಲ್ಲೇ ಶಂಕರ
ನೆನ್ನೆ ಮೊನ್ನೆ ಬಂದೋರೆಲ್ಲ ನಂಬರ್ ಒನ್ ಅಂತಾರೋ
ಅವ್ರವರೆ ಸಂಘ ಕಟ್ಕೊಂಡು ಬಿರುದು ಇಟ್ಕೊಂಡ್
ನಿಂತವ್ರೋ
ನಿಂಗೆ ನಂಬರ್‌ಗಳೆ ಲೆಕ Rಇಲ್ಲಣ್ಣ
ಇಫ್ ಯೂ ಕಮ್ ಟುಡೇ
ಐ ಆ್ಯಮ್ ಸೋ ಹ್ಯಾಪಿ
ಇಫ್ ಯೂ ಕಮ್ ಟುಮಾರೋ
ಐ ಆ್ಯಮ್ ಟೂ ಬ್ಯಾಡ್
ಯೂ ಪಿಕ್ ದಿ ಟೈಮ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
ICC ಪಿಚ್ ರೇಟಿಂಗ್: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ
ICC Bowling Ranking: ಐಸಿಸಿ ಬೌಲಿಂಗ್ ರ್‍ಯಾಂಕಿಂಗ್… ಬುಮ್ರಾ ಅಗ್ರಸ್ಥಾನ ಗಟ್ಟಿ
BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..
Mangaluru: MCC ಬ್ಯಾಂಕ್ ಅಧ್ಯಕ್ಷರ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.