ಜಗ್ಗೇಶ್ ದಂಗಾಗಿದ್ದು ಯಾಕೆ ಗೊತ್ತಾ?: ಟ್ವೀಟ್‍ನಲ್ಲೇನಿದೆ
Team Udayavani, Dec 20, 2018, 6:10 PM IST
ನವರಸ ನಾಯಕ ಜಗ್ಗೇಶ್ ಈ ಹಿಂದೆ ತಾವು ಹೆಣ್ಣುಮಗುವಿನ ತಾತನಾದ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ತಮ್ಮ ದೊಡ್ಡ ಮಗ ಗುರುರಾಜ್ ನಟನೆಯನ್ನು ನೋಡಿ ದಂಗಾಗಿದ್ದಾರೆ. ಹಾಗಂತ ಅವರೇ ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಹೌದು, ಜಗ್ಗೇಶ್ ಅವರು “ನಾನು ನೋಡಿ ದಂಗಾದ ಅದ್ಭುತ #Raw ಚಿತ್ರ.. ನಿರ್ದೇಶಕ ಚಂದ್ರಹಾಸ ಪ್ರತಿ ತುಣಕನ್ನು ಅಳೆದು ತೂಗಿ ಮಾಡಿದ್ದಾನೆ.. ನಾನು ಒಬ್ಬ ಕಲಾವಿದನಾಗಿ ಬದುಕಲ್ಲಿ ಇಂಥ ಚಿತ್ರ ಮಾಡುವ ಯೋಗ ನನಗೆ ಬರಲಿಲ್ಲವೆ ಎಂದು ಕೊರಗಿದೆ! ನನ್ನ ಮಗ #Gururajjaggeshಗೆ ಈ ಚಿತ್ರ ಒಂದು ಮೈಲಿಗಲ್ಲಾಗುತ್ತೆ ಎಂದು ನಂಬಿಕೆಯಿಂದ ಹೇಳುವೆ.. ಚಿತ್ರತಂಡಕ್ಕೆ ಶುಭಹಾರೈಕೆ..’ ಹೇಳುವೆ ಎಂದು ಟ್ವೀಟರ್‌ನಲ್ಲಿ ಬರೆದುಕೊಂಡಿದ್ದಾರೆ.
ನಾನು ನೋಡಿ ದಂಗಾದ ಅದ್ಭುತ #Raw
ಚಿತ್ರ..ನಿರ್ದೇಶಕ ಚಂದ್ರಹಾಸ ಪ್ರತಿ ತುಣಕನ್ನು ಅಳೆದು ತೂಗಿ ಮಾಡಿದ್ದಾನೆ..
ನಾನು ಒಬ್ಬ ಕಲಾವಿದನಾಗಿ ಬದುಕಲ್ಲಿ ಇಂಥ ಚಿತ್ರ ಮಾಡುವ ಯೋಗ ನನಗೆ ಬರಲಿಲ್ಲವೆ ಎಂದು ಕೊರಗಿದೆ!ನನ್ನ ಮಗ #Gururajjaggesh ಗೆ ಈಚಿತ್ರ ಒಂದು ಮೈಲಿಗಲ್ಲಾಗುತ್ತೆ ಎಂದು ನಂಬಿಕೆಯಿಂದ ಹೇಳುವೆ..ಚಿತ್ರತಂಡಕ್ಕೆ ಶುಭಹಾರೈಕೆ.. pic.twitter.com/VBsMRGMOGY— ನವರಸನಾಯಕ ಜಗ್ಗೇಶ್ (@Jaggesh2) December 19, 2018
ಇನ್ನು ಸ್ಕೈಲೈನ್ಸ್ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಬಿ.ಕೆ.ಚಂದ್ರಹಾಸ್ ಅವರು ನಿರ್ಮಿಸಿ ನಿರ್ದೇಶನ ಮಾಡಿರುವ “ಕಾಗೆ ಮೊಟ್ಟೆ’ ಚಿತ್ರದಲ್ಲಿ ಜಗ್ಗೇಶ್ ಮಗ ಗುರುರಾಜ್ ನಾಯಕನಾಗಿ ವಿಭಿನ್ನವಾದ ಪಾತ್ರದಲ್ಲಿ ಮಿಂಚಿದ್ದಾರೆ. “ಕಾಗೆ ಮೊಟ್ಟೆ’ ಎಂಬ ಟೈಟಲ್ ಇರೋ ಈ ಚಿತ್ರಕ್ಕೆ ಪಿಳ್ಳ ಗೋವಿ ಕೃಷ್ಣನ್ ಕಥೆ ಎಂಬ ಟ್ಯಾಗ್‍ಲೈನ್ ಇದೆ.
ಪಿ.ಎಲ್. ರವಿ ಅವರ ಛಾಯಾಗ್ರಹಣ, ಶ್ರೀವತ್ಸ ಅವರ ಸಂಗೀತ ಸಂಯೋಜನೆ, ವಿ.ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ ಚಿತ್ರಕ್ಕಿದ್ದು, ಮುಖ್ಯವಾಗಿ ಜಗ್ಗೇಶ್ ಅವರೇ ಮಗನ ಈ ಚಿತ್ರಕ್ಕೆ ಒಂದು ಮಾಸ್ ಸಾಂಗ್ ಕೂಡಾ ಬರೆದಿದ್ದಾರೆ. ಉಳಿದಂತೆ ಜಯಂತ್ ಕಾಯ್ಕಿಣಿ, ಕವಿರಾಜ್ ಅವರು ಹಾಡುಗಳನ್ನು ಬರೆದಿದ್ದು, ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
Kannada Cinema: ‘ರುದ್ರಾಭಿಷೇಕಂ’ನಲ್ಲಿ ವಿಜಯ್ ರಾಘವೇಂದ್ರ
Health Issue: ಸರ್ಜರಿಗಾಗಿ ಮುಂದಿನ ತಿಂಗಳು ಅಮೆರಿಕಕ್ಕೆ ಹೋಗುವೆ: ನಟ ಶಿವರಾಜ್‌ಕುಮಾರ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.