ರಾಧಿಕಾ ಹೆಚ್ಚು ಸಿನಿಮಾ ಒಪ್ಪಿಕೊಳ್ಳದಿರಲು ಕಾರಣವೇನು ಗೊತ್ತಾ?


Team Udayavani, Oct 9, 2018, 11:39 AM IST

radhika.jpg

ಒಂದು ಸಮಯದಲ್ಲಿ ವರ್ಷಕ್ಕೆ ರಾಧಿಕಾ ಅವರ ಮೂರ್‍ನಾಲ್ಕು ಚಿತ್ರಗಳು ಬಿಡುಗಡೆಯಾಗುತ್ತಿದ್ದವು. ಆದರೆ, ಈಗ ವರ್ಷಕ್ಕೆ ಒಂದು ಸಿನಿಮಾ ಕೂಡಾ ಬಿಡುಗಡೆಯಾಗುವುದು ಕಷ್ಟ. ಸಹಜವಾಗಿಯೇ ಒಂದು ಪ್ರಶ್ನೆ ಮೂಡುತ್ತದೆ. ಚಿತ್ರರಂಗದಲ್ಲಿ ಅಷ್ಟೊಂದು ಆ್ಯಕ್ಟೀವ್‌ ಆಗಿದ್ದ ನಟಿ ಯಾಕೆ ಸಿನಿಮಾಗಳಿಂದ ದೂರವಾಗುತ್ತಿದ್ದಾರೆ, ವರ್ಷಕ್ಕೆ ಒಂದು ಸಿನಿಮಾ ಬಿಡುಗಡೆಯಾಗದಷ್ಟು ಬಿಝಿಯಾದರಾ ಎಂದು. ಈ ಪ್ರಶ್ನೆಗೆ ಸ್ವತಃ ರಾಧಿಕಾ ಉತ್ತರಿಸುತ್ತಾರೆ. 

ರಾಧಿಕಾ ಹೇಳುವಂತೆ ಅವರಿಗೆ ವರ್ಷಕ್ಕೆ ಒಂದೆರಡು ಸಿನಿಮಾವಾದರೂ ಬಿಡುಗಡೆಯಾಗಬೇಕೆಂಬ ಆಸೆ ಇದೆಯಂತೆ. ಆದರೆ, ಅವರದೇ ಆದ ಕಮಿಟ್‌ಮೆಂಟ್‌ಗಳಿಂದ ಸಿನಿಮಾಕ್ಕೆ ಸಮಯ ಮೀಸಲಿರಿಸಲು ಸಾಧ್ಯವಾಗುತ್ತಿಲ್ಲವಂತೆ. “ನಾನು 14ನೇ ವರ್ಷಕ್ಕೆ ಚಿತ್ರರಂಗಕ್ಕೆ ಬಂದಾಗ ಸಿನಿಮಾನೇ ನನ್ನ ಲೈಫ್. ಸಿನಿಮಾ ಬಿಟ್ಟು ಬೇರೇನೂ ಯೋಚನೆ ಮಾಡುತ್ತಿರಲಿಲ್ಲ. ಈಗ ಸಿನಿಮಾ ಒಂದು ಭಾಗವಾಗಿದೆ ಅಷ್ಟೇ. ಪ್ಯಾಶನ್‌ಗಾಗಿ ಸಿನಿಮಾ ಮಾಡುತ್ತಿದ್ದೇನೆ.

ಈಗ ಮೊದಲಿನ ತರಹ ಸಿನಿಮಾ ಒಪ್ಪಿಕೊಳ್ಳೋದು ಕಷ್ಟ. ಕನ್ನಡವಷ್ಟೇ ಅಲ್ಲದೇ, ಮಲಯಾಳಂ, ತಮಿಳಿನಿಂದಲೂ ಆಫ‌ರ್‌ ಬರುತ್ತಿವೆ. ಆದರೆ, ಡೇಟ್ಸ್‌ ಹೊಂದಿಸಲು ಸಾಧ್ಯವಾಗುತ್ತಿಲ್ಲ. ನನ್ನ ಮಗಳಿಗೂ ಸಮಯಕೊಡಬೇಕು. ಸಹಜವಾಗಿಯೇ ತಡವಾಗುತ್ತಾ ಹೋಗುತ್ತದೆ. ಮುಂದೆ ವರ್ಷಕ್ಕೆ ಎರಡು ಸಿನಿಮಾವಾದರೂ ಮಾಡಬೇಕೆಂದು ನಿರ್ಧರಿಸಿದ್ದೇನೆ’ ಎನ್ನುತ್ತಾರೆ ರಾಧಿಕಾ. ಜೊತೆಗೆ ಈ ಮೂಲಕ ಗಾಸಿಪ್‌ಗಳಿಗೆ ಉತ್ತರಿಸಬೇಕೆಂದು ಅವರು ನಿರ್ಧರಿಸಿದ್ದಾರೆ. 

ಯಾವ ಗಾಸಿಪ್‌, ಏನು ಉತ್ತರ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ರಾಧಿಕಾ ಅವರು ಬೆಂಗಳೂರು ಬಿಟ್ಟು, ಮಂಗಳೂರಿನಲ್ಲಿ ಸೆಟ್ಲ ಆಗಿದ್ದಾರಂತೆ, ಮುಂದೆ ಸಿನಿಮಾ ಮಾಡೋದಿಲ್ವಂತೆ ಎಂಬೆಲ್ಲಾ ಗಾಸಿಪ್‌ಗಳು ಕೇಳಿಬಂದಿದ್ದವು. ಇದಕ್ಕೆ ರಾಧಿಕಾ ಸಿನಿಮಾ ಮೂಲಕ ಉತ್ತರ ಕೊಡಲು ನಿರ್ಧರಿಸಿದ್ದಾರೆ. “ಜನ ನಾನು ಇಲ್ಲಿ ಇಲ್ಲ ಎಂದು ಭಾವಿಸಿದ್ದಾರೆ. ಎಲ್ಲರಿಗೂ ಉತ್ತರ ಕೊಟ್ಟು ಸುಸ್ತಾಗಿ ಹೋಯಿತು.

ಇನ್ನು ನಾನು ಮಾತನಾಡುವುದರಲ್ಲಿ ಅರ್ಥವಿಲ್ಲ. ಸಿನಿಮಾ ಮೂಲಕ ಉತ್ತರಿಸಬೇಕು. ವರ್ಷಕ್ಕೆರಡು ಸಿನಿಮಾ ಬಿಡುಗಡೆಯಾದಾಗ ನಾನೆಲ್ಲಿದ್ದೇನೆ ಎಂಬುದು ಜನರಿಗೆ ಗೊತ್ತಾಗುತ್ತದೆ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ರಾಧಿಕಾ. ನೀವು ಸೂಕ್ಷ್ಮವಾಗಿ ಗಮನಿಸಿದರೆ, ರಾಧಿಕಾ ಇತ್ತೀಚೆಗೆ ಬೇರೆ ಬ್ಯಾನರ್‌ನ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಯಾವುದಾದರೂ ಕಥೆ ಇಷ್ಟವಾದರೆ, ಅದನ್ನು ತಮ್ಮ ಬ್ಯಾನರ್‌ನಲ್ಲೇ ನಿರ್ಮಿಸಿ, ನಟಿಸುತ್ತಾರೆ.

ಯಾಕೆ ಈ ನಿರ್ಧಾರ ಎಂದರೆ,  ತನ್ನಿಂದ ಬೇರೆ ನಿರ್ಮಾಪಕರಿಗೆ ತೊಂದರೆಯಾಗಬಾರದು ಎಂಬ ಉತ್ತರ ಅವರಿಂದ ಬರುತ್ತದೆ. “ನಾನು ಒಮ್ಮೆ ಡೇಟ್‌ ಕೊಟ್ಟ ನಂತರ ಅವರು ಹೇಳಿದಾಗ ಚಿತ್ರೀಕರಣಕ್ಕೆ ಹೋಗಬೇಕು. ನನ್ನಿಂದ ಯಾವ ನಿರ್ಮಾಪಕರಿಗೂ ತೊಂದರೆಯಾಗಬಾರದು. ಅದೇ ಕಾರಣದಿಂದ ನನಗೆ ಬೇರೆ ಬ್ಯಾನರ್‌ಗಳಿಂದ ಅವಕಾಶ ಬಂದರೂ ತುಂಬಾ ಆಲೋಚಿಸಿ ಒಪ್ಪಿಕೊಳ್ಳುತ್ತೇನೆ. ಒಮ್ಮೆ ಕಮಿಟ್‌ ಆದ ನಂತರ ನಮ್ಮಿಂದ ಯಾರಿಗೂ  ತೊಂದರೆಯಾಗಬಾರದು’ ಎನ್ನುತ್ತಾರೆ.

ಟಾಪ್ ನ್ಯೂಸ್

Kite-Festival

Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ

UV-Deepavali

Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್‌

MNG-tulasi-gowda

Environmental Activist: ತುಳಸಿ ಗೌಡರ ಮಂಗಳೂರು ಒಡನಾಟ

Shipyard-Met

Malpe: ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ನಿಂದ ಕಾರ್ಗೋ ಶಿಪ್‌ ನಾರ್ವೆಗೆ ಹಸ್ತಾಂತರ

1-chagan

Maharashtra; ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ: ಭುಜಬಲ್‌ ಅಸಮಾಧಾನ

1-qeq-wewqe

Constitution; ರಾಜ್ಯಸಭೆಯಲ್ಲಿ ಖರ್ಗೆ-ನಿರ್ಮಲಾ ಜಟಾಪಟಿ

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು

High Court: 384 ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳಿಗೆ ಮರು ಪರೀಕ್ಷೆ: ತಡೆ ತೆರವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiccha Sudeep: ಬಿಗ್‌ ಬಾಸ್‌ಗೆ ಗುಡ್‌ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ

Kiccha Sudeep: ಬಿಗ್‌ ಬಾಸ್‌ಗೆ ಗುಡ್‌ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ

ʼನೀ ನಂಗೆ ಅಲ್ಲವಾ’ ಚಿತ್ರಕ್ಕೆ ಮುರಳಿ ಸಾಥ್

Sandalwood: ʼನೀ ನಂಗೆ ಅಲ್ಲವಾ’ ಚಿತ್ರಕ್ಕೆ ಮುರಳಿ ಸಾಥ್

Audio of ‘Kuladalli Keelyavudo’ is sold

Sandalwood: ‘ಕುಲದಲ್ಲಿ ಕೀಳ್ಯಾವುದೋ’ ಆಡಿಯೋ ಮಾರಾಟ

Darshan:‌ ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್‌ಗೆ ಹಾಜರಾದ ದರ್ಶನ್

Darshan:‌ ಜಾಮೀನು ಹಿನ್ನೆಲೆ: ಮತ್ತೆ ಕೋರ್ಟ್‌ಗೆ ಹಾಜರಾದ ದರ್ಶನ್

Sandalwood: ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ

Sandalwood: ಪವನ್‌ ಒಡೆಯರ್‌ ನಿರ್ದೇಶನದಲ್ಲಿ ಶಿವಣ್ಣನ ಸಿನಿಮಾ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

Kite-Festival

Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ

Thief

Kundapura: ಸರಕಾರಿ ಕಾಲೇಜಿನ ಎನ್‌ವಿಆರ್‌ ಕೆಮರಾ ಕಳವು

UV-Deepavali

Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್‌

Suside-Boy

Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು

Suside-Boy

Mangaluru: ಕಾರು ಚರಂಡಿಗೆ ಬಿದ್ದು ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.