ಶ್ರೀಮನ್ನಾರಾಯಣ ತಡವಾಗಲು ಕಾರಣ ಏನ್‌ ಗೊತ್ತಾ?

ಆಗಸ್ಟ್‌ ಬದಲು ನವೆಂಬರ್‌ ರಿಲೀಸ್‌ ಸಾಧ್ಯತೆ

Team Udayavani, Aug 27, 2019, 3:04 AM IST

avane

ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರ ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್‌ನಲ್ಲಿ ಬಿಡುಗಡೆಯಾಗಬೇಕಿತ್ತು. ಆ ನಂಬಿಕೆ ಚಿತ್ರತಂಡದಲ್ಲಿದ್ದ ಕಾರಣಕ್ಕೇ ಆಗಸ್ಟ್‌ನಲ್ಲಿ ಬರುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದರೆ, ಕೆಲವೊಮ್ಮೆ ಅಂದುಕೊಂಡಂತೆ ಆಗುವುದಿಲ್ಲ. ಕನಸುಗಳು ದೊಡ್ಡದಾಗುತ್ತಾ ಹೋದಂತೆ ಕನಸು ಸಾಕಾರಗೊಳಿಸಲು ಸಮಯವೂ ಬೇಕಾಗುತ್ತದೆ. ಈಗ “ಅವನೇ ಶ್ರೀಮನ್ನಾರಾಯಣ’ ತಂಡಕ್ಕೆ ಆಗಿರೋದು ಕೂಡಾ ಅದೇ.

ಅತಿ ಹೆಚ್ಚು ದಿನ ಚಿತ್ರೀಕರಣವಾದ ಸಿನಿಮಾ ಎಂಬ ಟ್ಯಾಗ್‌ಲೈನ್‌ ಒಂದು ಕಡೆಯಾದರೆ, ಪಂಚಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ರಕ್ಷಿತ್‌ ಅವರ ಮೊದಲ ಸಿನಿಮಾ ಎಂಬುದು ಮತ್ತೂಂದು ಅಂಶ. ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ “ಅವನೇ ಶ್ರೀಮನ್ನಾರಾಯಣ’ ಬಿಡುಗಡೆಯಾಗುತ್ತಿದೆ. ಪ್ಯಾನ್‌ ಇಂಡಿಯಾ ಬಿಡುಗಡೆಯಾಗುವಾಗ ಚಿತ್ರದ ಗುಣಮಟ್ಟ ಕೂಡಾ ಪ್ಯಾನ್‌ ಇಂಡಿಯಾ ಲೆವೆಲ್‌ಗೆ ಇರಬೇಕೆಂದುಕೊಂಡ ಚಿತ್ರತಂಡ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡು ಸಿನಿಮಾ ಕೆಲಸದಲ್ಲಿ ಬಿಝಿಯಾಗಿದೆ.

ಈಗಾಗಲೇ ಡಬ್ಬಿಂಗ್‌, ಎಡಿಟಿಂಗ್‌ ಎಲ್ಲಾ ಮುಗಿಸಿರುವ ಸಿನಿಮಾದ ಬಹುಪಾಲು ಸಮಯವನ್ನು ವಿಎಫ್ಎಕ್ಸ್‌ ಹಾಗೂ ಸಿಜಿ ತೆಗೆದುಕೊಳ್ಳುತ್ತಿದೆ. ತಂತ್ರಜ್ಞರ ದೊಡ್ಡ ಬಳಗವೇ ಎರಡೆರಡು ಶಿಫ್ಟ್ನಲ್ಲಿ ಈ ಕೆಲಸ ಮಾಡುತ್ತಿದೆ. “ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಹುತೇಕ ಚಿತ್ರೀಕರಣ ಸೆಟ್‌ನಲ್ಲಿ ನಡೆದಿದೆ. ಜೊತೆಗೆ ಚಿತ್ರದಲ್ಲಿ ಗ್ರಾಫಿಕ್‌ಗೆ ಹೆಚ್ಚಿನ ಜಾಗವಿದೆ. ಆರಂಭದಲ್ಲಿ ಚಿತ್ರತಂಡ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಮಯ ವಿಎಫ್ಎಕ್ಸ್‌ಗೆ ಬೇಕಾಗಿರುವುದರಿಂದ ಚಿತ್ರ ಬಿಡುಗಡೆ ಕೂಡಾ ಮುಂದಕ್ಕೆ ಹೋಗಿದೆ.

ಹಾಗಾದರೆ, ಚಿತ್ರ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು. ಈಗಾಗಲೇ ಗಾಂಧಿನಗರದಲ್ಲಿ “ಅವನೇ ಶ್ರೀಮನ್ನಾರಾಯಣ’ ಚಿತ್ರ ಮುಂದಕ್ಕೆ ಹೋಗಿದ್ದು, ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ ಎಂಬ ಸುದ್ದಿ ಓಡಾಡುತ್ತಿದೆ. ರಕ್ಷಿತ್‌ ಶೆಟ್ಟಿಯ “ಕಿರಿಕ್‌ ಪಾರ್ಟಿ’ ಚಿತ್ರ 2016 ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾಗಿ ದೊಡ್ಡ ಹಿಟ್‌ ಆಯಿತು. ಜೊತೆಗೆ ಕನ್ನಡ ಚಿತ್ರರಂಗದಲ್ಲಿ ಡಿಸೆಂಬರ್‌ ಕೊನೆಯಲ್ಲಿ ಬಿಡುಗಡೆಯಾದ ಚಿತ್ರಗಳು ಹಿಟ್‌ ಆಗುತ್ತವೆ ಎಂಬ ನಂಬಿಕೆ ಕೂಡಾ ಇದೆ.

ಈ ಕಾರಣದಿಂದಲೂ “ಅವನೇ ಶ್ರೀಮನ್ನಾರಾಯಣ’ ಡಿಸೆಂಬರ್‌ಗೆ ಹೋಗಿದೆ ಎಂಬುದು ಚಿತ್ರರಂಗದ ಕೆಲವರ ಲೆಕ್ಕಾಚಾರ. “ಅವನೇ ಶ್ರೀಮನ್ನಾರಾಯಣ’ ಚಿತ್ರದ ಬಿಡುಗಡೆಯ ಬಗ್ಗೆ ಮಾತನಾಡುವ ನಿರ್ಮಾಪಕ ಪುಷ್ಕರ್‌, “ಸಿನಿಮಾದ ವಿಎಫ್ಎಕ್ಸ್‌, ಗ್ರಾಫಿಕ್ಸ್‌ ಕೆಲಸಗಳಿಗೆ ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಚಿತ್ರ ಬಿಡುಗಡೆ ಮುಂದಕ್ಕೆ ಹೋಗಿರುವುದು ನಿಜ. ಸದ್ಯ ನಿರಂತರವಾಗಿ ಚಿತ್ರದ ಕೆಲಸಗಳು ನಡೆಯುತ್ತಿವೆ. ಚಿತ್ರವನ್ನು ನವೆಂಬರ್‌ನಲ್ಲಿ ತೆರೆಗೆ ತರಲು ಪ್ರಯತ್ನಿಸುತ್ತಿದ್ದೇವೆ. ಹಾಗಂತ ನಾನು ಈಗಲೇ ಡೇಟ್‌ ಹೇಳಲ್ಲ.

ಏಕೆಂದರೆ ಎಲ್ಲವೂ ಅಂತಿಮವಾಗದೇ ಡೇಟ್‌ ಹೇಳಿದರೆ, ಈಗಾಗಲೇ ಬಿಡುಗಡೆಗೆ ಪ್ಲ್ರಾನ್‌ ಮಾಡಿಕೊಂಡಿರುವ ಇತರ ಸಿನಿಮಾಗಳಿಗೆ ತೊಂದರೆಯಾಗುತ್ತದೆ. ನನಗೆ ಡಿಸೆಂಬರ್‌ಗೆ ಬರಬೇಕು, ಲಕ್ಕಿ .. ಆ ತರಹದ ಯಾವುದೇ ಸೆಂಟಿಮೆಂಟ್‌ ಇಲ್ಲ. ಸಿನಿಮಾ ಕೆಲಸ ಮುಗಿದ ಕೂಡಲೇ ಡೇಟ್‌ ಅನೌನ್ಸ್‌ ಮಾಡುತ್ತೇನೆ’ ಎನ್ನುತ್ತಾರೆ. ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’ ಚಿತ್ರದ ಟೀಸರ್‌ ಈಗಾಗಲೇ ಬಿಡುಗಡೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಈಗ ಚಿತ್ರ ಬಿಡುಗಡೆ ಪೂರ್ವ ಕೆಲಸದಲ್ಲಿ ಬಿಝಿಯಾಗಿದೆ.

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Max Movie: ಸಖತ್‌ ರೆಸ್ಪಾನ್ಸ್‌ ಪಡೆದ ಕಿಚ್ಚನ ʼಮ್ಯಾಕ್ಸ್‌ʼ ಮೊದಲ ದಿನ ಗಳಿಸಿದ್ದೆಷ್ಟು?

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್‌ ನೀಲ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

UI Movie: ಉಪ್ಪಿ ಯುಐ ಮೆಚ್ಚಿದ ಯಶ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.