ಚಿರು ದಂಪತಿಯಿಂದ ದರ್ಶನ್‌ಗೆ ನಾಯಿಮರಿ ಗಿಫ್ಟ್
Team Udayavani, Jul 15, 2019, 3:06 AM IST
ದರ್ಶನ್ ಅವರ ಪ್ರಾಣಿ ಪ್ರೀತಿ ಬಗ್ಗೆ ಹೊಸದಾಗಿ ಹೇಳುವ ಅಗತ್ಯವಿಲ್ಲ. ಅದೇ ಕಾರಣದಿಂದ ಅವರ ಫಾರ್ಮ್ಹೌಸ್‌ನಲ್ಲಿ ಹಲವು ಬಗೆಯ ಪ್ರಾಣಿ ಪಕ್ಷಿಗಳಿವೆ. ಅದೇ ಕಾರಣದಿಂದ ಕೆಲವರು ದರ್ಶನ್‌ಗೆ ಪ್ರೀತಿಯಿಂದ ಪ್ರಾಣಿ-ಪಕ್ಷಿಗಳನ್ನು ಉಡುಗೊರೆಯಾಗಿ ಕೊಡುತ್ತಾರೆ. ಈ ಬಾರಿ ದರ್ಶನ್ ಅವರಿಗೆ ಉಡುಗೊರೆಯಾಗಿ ಮುದ್ದಾಗಿರುವ ನಾಯಿ ಮರಿಯೊಂದು ಬಂದಿದೆ.
ಎಲ್ಲಾ ಓಕೆ, ದರ್ಶನ್ ಅವರಿಗೆ ನಾಯಿ ಮರಿಯನ್ನ ಗಿಫ್ಟ್ ಆಗಿ ಕೊಟ್ಟವರು ಯಾರು ಎಂದರೆ ಚಿರಂಜೀವಿ ಸರ್ಜಾ ದಂಪತಿ. ಹೌದು, ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ದಂಪತಿ ದರ್ಶನ್ ಅವರಿಗೆ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿ, ಕೃತಜ್ಞತೆ ಸಲ್ಲಿಸಿದ್ದಾರೆ. ಇದಕ್ಕೆ ಕಾರಣ, ದರ್ಶನ್ ಚಿರು ಸಿನಿಮಾಳಿಗೆ ನೀಡುತ್ತಾ ಬಂದಿರುವ ಪ್ರೋತ್ಸಾಹ ಬೆಂಬಲ.
ಹೌದು, ಚಿರಂಜೀವಿ ಸರ್ಜಾ ನಾಯಕರಾಗಿರುವ “ಸಿಂಗ’ ಚಿತ್ರದ “ಬ್ಯೂಟಿಫುಲ್ ಹುಡುಗಿ’ ಹಾಡನ್ನು ಇತ್ತೀಚೆಗೆ ದರ್ಶನ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಕೇವಲ ಇದು ಒಂದೇ ಅಲ್ಲ, ಈ ಹಿಂದೆ ಮೇಘನಾ ರಾಜ್ ನಾಯಕಿಯಾಗಿರುವ “ಇರುವುದೆಲ್ಲವ ಬಿಟ್ಟು’ ಚಿತ್ರಕ್ಕೂ ದರ್ಶನ್ ಸಾಥ್ ಕೊಟ್ಟಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಚಿರು ದಂಪತಿ ದರ್ಶನ್ ಅವರಿಗೆ ನಾಯಿಮರಿಯೊಂದನ್ನು ಪ್ರೀತಿಯಿಂದ ನೀಡಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಮೇಘನಾ, “ದರ್ಶನ್ ಸರ್ ನಮ್ಮ ಕುಟುಂಬ ಸದಸ್ಯರಿದ್ದಂತೆ. ಅವರಿಗೆ ನಮ್ಮ ಕಡೆಯಿಂದ ಈ ಪ್ರೀತಿಯ ಉಡುಗೊರೆ’ ಎಂದಿದ್ದಾರೆ. ಅಂದಹಾಗೆ, “ಸಿಂಗ’ ಚಿತ್ರದಲ್ಲಿ ಮೇಘನಾ ರಾಜ್ ಕೂಡಾ ಒಂದು ಭಾಗ. ಅದು ಸಿನಿಮಾದ ಹಾಡೊಂದಕ್ಕೆ ಧ್ವನಿಯಾಗುವ ಮೂಲಕ. ಈ ಚಿತ್ರ ಜುಲೈ 19ರಂದು ತೆರೆಕಾಣುತ್ತಿದೆ. ಉದಯ್ ಮೆಹ್ತಾ ಈ ಸಿನಿಮಾದ ನಿರ್ಮಾಪಕರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Darshan; ಶೂಟಿಂಗ್ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.