ನಮ್ಮ ತಂಟೆಗೆ ಬರಬೇಡಿ

ಪೈರಸಿ ಹಿನ್ನೆಲೆ, ಚಿತ್ರಮಂದಿರ ಸಮಸ್ಯೆ ಹಿನ್ನೆಲೆ- ಪರಭಾಷಿಗರಿಗೆ ಗಣೇಶ್‌ ಎಚ್ಚರಿಕೆ

Team Udayavani, Sep 25, 2019, 3:05 AM IST

GANESH

“ನನ್ನ ಸಿನಿಮಾ ತಂಟೆಗೆ ಬೇರೆ ಯಾರೂ ಕೈ ಹಾಕಬೇಡಿ. ನಿಮ್ಮ ಪಾಡಿಗೆ ನೀವಿರಿ, ನಮ್ಮ ಪಾಡಿಗೆ ನಾವಿರ್ತೀವಿ. ಹಾಗೇನಾದ್ರೂ ಬಂದರೆ, ಯಾರೇ ಇದ್ದರೂ ಸರಿ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ…’ ಹೀಗೆ ಖಡಕ್‌ ಆಗಿ ಎಚ್ಚರಿಕೆ ಕೊಟ್ಟಿದ್ದು ನಟ ಗಣೇಶ್‌. ಅವರು ಈ ರೀತಿ ಮಾತನಾಡೋಕೆ ಕಾರಣ ಅವರ ಅಭಿನಯದ “ಗೀತಾ’ ಚಿತ್ರ. ಹೌದು, “ಗೀತಾ’ ಸೆ.27 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಂದು ಪರಭಾಷೆಯ ಚಿತ್ರಗಳೂ ಬಿಡುಗಡೆಯಾಗುತ್ತಿವೆ.

ಕರ್ನಾಟಕದಲ್ಲಿರುವ ಚಿತ್ರಮಂದಿರಗಳಲ್ಲಿ ತೆರೆಕಾಣುತ್ತಿರುವ “ಗೀತಾ’ ಚಿತ್ರಕ್ಕೆ ಯಾರೂ ಅಡ್ಡಿಪಡಿಸಬಾರದು. ಹಾಗೇನಾದರೂ ಅಡ್ಡಿಯಾದರೆ, ಮುಂದಿನ ಪರಿಣಾಮ ಎದುರಿಸಬೇಕಾಗುತ್ತೆ ಎಂಬರ್ಥದಲ್ಲಿ ಗಣೇಶ್‌ ಗುಡುಗಿದ್ದಾರೆ. “ಗೀತಾ’ ಅಪ್ಪಟ ಕನ್ನಡ ಸಿನಿಮಾ. ಅದರಲ್ಲೂ ಗೋಕಾಕ್‌ ಚಳವಳಿ ಹಿನ್ನೆಲೆಯಲ್ಲಿ ಮೂಡಿಬಂದಿರುವ ಚಿತ್ರ. ಚಿತ್ರದ ಟ್ರೇಲರ್‌ ನೋಡಿದವರಿಗೆ ಸಿನಿಮಾದೊಳಗಿರುವ ಕನ್ನಡತನದ ಬಗ್ಗೆ ಗೊತ್ತಾಗುತ್ತದೆ.

“ಗೀತಾ’ ಚಿತ್ರ ಬಿಡುಗಡೆಯಾಗಲಿರುವ ಚಿತ್ರಮಂದಿರಗಳಲ್ಲಿ ಪರಭಾಷೆ ಚಿತ್ರಗಳು ಬರಲು ಪ್ರಯತ್ನಿಸಿದರೆ, ಸಮಸ್ಯೆಯಾಗುತ್ತದೆ ಎಂಬುದು ಗಣೇಶ್‌ ಮಾತು. ಅವರೇ ಹೇಳುವಂತೆ, “ನಮ್ಮ ಚಿತ್ರದ ತಂಟೆಗೆ ಬರಬೇಡಿ. “ಗೀತಾ’ ನನ್ನ ಮನಸ್ಸಿನಲ್ಲಿರುವ ಚಿತ್ರ. ಬಹಳ ಇಷ್ಟಪಟ್ಟು ಮಾಡಿರುವ ಚಿತ್ರ. ಹಾಗೊಂದು ವೇಳೆ, ಚಿತ್ರಕ್ಕೆ ತೊಂದರೆ ಮಾಡಿದರೆ, ಅದು ಯಾರೇ ಆಗಿರಲಿ, ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಇದು ಎಚ್ಚರಿಕೆಯ ಮಾತು’ ಎಂದಿದ್ದಾರೆ ಗಣೇಶ್‌.

“ನಮ್ಮೊಂದಿಗೆ ಕನ್ನಡ ಚಿತ್ರಗಳು ಬರಲಿ. ತೊಂದರೆ ಇಲ್ಲ. ಆದರೆ, ದಯವಿಟ್ಟು, ಕನ್ನಡ ಸಿನಿಮಾಗಳಿಗೆ ಕೈ ಹಾಕಬೇಡಿ. ನಾವು ಮೊದಲಿನಿಂದಲೂ ಪರಭಾಷೆಯ ಚಿತ್ರಗಳ ಜೊತೆಯಲ್ಲಿ ಸ್ಪರ್ಧೆ ಮಾಡಿಕೊಂಡು ಬಂದಿದ್ದೇವೆ. ನಿಮ್ಮ ಪಾಡಿಗೆ ನೀವು ಬನ್ನಿ, ನಮ್ಮ ಪಾಡಿಗೆ ನಾವು ಇರುತ್ತೇವೆ. ಆದರೆ, ನಮ್ಮ ಸಿನಿಮಾ ತಂಟೆಗೆ ಬರಬೇಡಿ’ ಎಂದರು ಗಣೇಶ್‌. ಇನ್ನು, “ಗೀತಾ’ ಚಿತ್ರ ಸದ್ಯಕ್ಕೆ ರಾಜ್ಯದ 160 ಚಿತ್ರಮಂದಿರಗಳು, 60 ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆಯಾಗುತ್ತಿದೆ.

ವಿದೇಶದಲ್ಲೂ ಚಿತ್ರ ತೆರೆ ಕಾಣುತ್ತದೆ. ಆದರೆ, ಈಗಲೇ ಬಿಡುಗಡೆ ಮಾಡುವುದಿಲ್ಲ. ಮೂರು ವಾರಗಳ ಬಳಿಕ ಅಲ್ಲಿ ರಿಲೀಸ್‌ ಮಾಡುತ್ತೇವೆ ಎನ್ನುತ್ತಾರೆ ಗಣೇಶ್‌. “ಶೇ.15, 20 ರಷ್ಟು ಮಾತ್ರ ಆಲ್ಲಿ ವರ್ಕೌಟ್‌ ಆಗುತ್ತಿದೆ. ಅಲ್ಲಿ ಹಂಗೆ, ಹಿಂಗೆ ಅಂತ ಹೇಳಿಕೊಳ್ಳುವುದು ಸರಿ ಇರೋದಿಲ್ಲ. ಹಾಗಾಗಿ, ಇಲ್ಲಿ ಬಿಡುಗಡೆ ನಂತರ ಅಲ್ಲಿ ನೋಡಿಕೊಂಡು ಪ್ಲಾನ್‌ ಮಾಡ್ತೀವಿ. ದಯವಿಟ್ಟು, ಯಾರೂ ನಮ್ಮ ಚಿತ್ರಮಂದಿರಗಳಿಗೆ ಕೈ ಹಾಕಬೇಡಿ.

ಹಾಗೊಂದು ವೇಳೆ ಬಂದರೆ, ಚಿತ್ರಮಂದಿರ ಮುಂದೆ ಪ್ರತಿಭಟನೆ ನಡೆಯುತ್ತೆ’ ಎಂಬ ಎಚ್ಚರಿಕೆ ಕೊಟ್ಟ ಗಣೇಶ್‌, ಸದ್ಯಕ್ಕೆ ಪೈರಸಿ ಬಗ್ಗೆಯೂ ಗಮನಹರಿಸಿದ್ದೇವೆ. ಆ ಕುರಿತು, ಏನೆಲ್ಲಾ ಮಾಡಬೇಕೋ, ಯಾರಿಗೆಲ್ಲಾ ಮುಂಚಿತವಾಗಿಯೇ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಮನವಿ ಮಾಡಲಾಗಿದೆ ಎನ್ನುತ್ತಾರೆ ಗಣೇಶ್‌.

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Gowri Shankara: ಸೆಟ್ಟೇರಿತು ಹೊಸಬರ ಗೌರಿ ಶಂಕರ

Maryade Prashne movie trailer out

Maryade Prashne: ಪ್ರಶ್ನೆ ಕೇಳಲು ಬಂದ ಮರ್ಯಾದಸ್ತರು

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

ShivaRajkumar: ʼಘೋಸ್ಟ್‌ʼ ಬಳಿಕ ಮತ್ತೆ ಶ್ರೀನಿ ಜತೆ ಶಿವಣ್ಣ ಸಿನಿಮಾ; ಟೈಟಲ್‌ ರಿವೀಲ್

5

Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

BBK11: ಮಣ್ಣಿನಲ್ಲಿ ಕಳೆದು ಹೋದ ಚೈತ್ರಾಳ ಉಂಗುರ; ದೈವಕ್ಕೆ ಮೊರೆ ಹೋದ ಬಳಿಕ ಪತ್ತೆ

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.