ಹಿರಿ-ಕಿರಿಯರ ಸಂಗಮದಲ್ಲಿ ಡವ್‌ ಮಾಸ್ಟರ್


Team Udayavani, Dec 22, 2021, 11:42 AM IST

dove master

ಬಣ್ಣಬಣ್ಣದ ಮಾತುಗಳನ್ನಾಡುವವರನ್ನ, ತುಂಬ ನಾಟಕೀಯವಾಗಿ ಬದುಕು ವವರನ್ನ “ಡವ್‌ ಮಾಸ್ಟರ್‌’ ಅಂಥ ಅಡ್ಡ ಹೆಸರಿನಲ್ಲಿ ಕರೆಯುವುದನ್ನು ನೀವು ಕೇಳಿರು ತ್ತೀರಿ. ಈಗ ಇದೇ “ಡವ್‌ ಮಾಸ್ಟರ್‌’ ಎಂಬ ಹೆಸರಿನಲ್ಲೇ ಸಿನಿಮಾವೊಂದು ಶುರು ವಾಗಿದೆ.

ಇಂಥದ್ದೇ ಬಣ್ಣದ ಮಾತು ಗಳನ್ನಾಡುತ್ತ, ಒಳಗೊಂದು ಥರ – ಹೊರ ಗೊಂದು ಥರ ಇರುವಂಥ ಕಥೆ ಮತ್ತು ಪಾತ್ರಗಳ ಸುತ್ತ ಸಿನಿಮಾ ನಡೆಯುವು ದರಿಂದ, ಚಿತ್ರತಂಡ ಕೂಡ ತಮ್ಮ ಸಿನಿಮಾಕ್ಕೆ “ಡವ್‌ ಮಾಸ್ಟರ್‌’ ಅಂಥ ಹೆಸರಿಟ್ಟಿದೆ. ಕನ್ನಡ ಚಿತ್ರರಂಗದ ವಿವಿಧ ವಿಭಾಗ ಗಳಲ್ಲಿ ಸುಮಾರು ಹತ್ತು ವರ್ಷಗಳಿಂದ ಕೆಲಸ ಮಾಡಿದ ಅನುಭವವಿರುವ ಯುವ ಪ್ರತಿಭೆ ಆರ್ಯ, “ಡವ್‌ ಮಾಸ್ಟರ್‌’ ಚಿತ್ರಕ್ಕೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಇದನ್ನೂ ಓದಿ:- ಗೋವಾ ಜನರು ಒಳ್ಳೆಯವರು, ಆದರೆ ಇಲ್ಲಿನ ರಾಜಕಾರಣಿಗಳು ಕೆಟ್ಟವರು: ಅರವಿಂದ್ ಕೇಜ್ರಿವಾಲ್

ಇನ್ನೊಂದು ವಿಶೇಷವೆಂದರೆ, “ಡವ್‌ ಮಾಸ್ಟರ್‌’ ಚಿತ್ರದಲ್ಲಿ ರಾಕಿ ಎಂಬ ನಾಯಿ ಕೂಡ ಪ್ರಮುಖ ಪಾತ್ರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದೆ. ರಾಕಿ ಬರ್ತ್‌ಡೇ ಪ್ರಯುಕ್ತ, ಇತ್ತೀಚೆಗೆ “ಡವ್‌ ಮಾಸ್ಟರ್‌’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಪತ್ರಕರ್ತರು ಮತ್ತು ಮಾಧ್ಯಮಗಳನ್ನು ಆಹ್ವಾನಿಸಿದ್ದ ಚಿತ್ರತಂಡ ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಆರ್ಯ, “ಮನುಷ್ಯ ಮತ್ತು ನಾಯಿಯ ನಡುವಿನ ಬಾಂಧವ್ಯದ ಕಥೆ ಈ ಸಿನಿಮಾದಲ್ಲಿದೆ. ತುಂಬ ಪ್ರೀತಿಯಿಂದ ಸಾಕಿದ ನಾಯಿ ವ್ಯಕ್ತಿಯೊಬ್ಬನ ಜೀವನದಲ್ಲಿ ದೂರವಾಗಬೇಕಾದ ಸಂದರ್ಭ ಬಂದಾಗ ಏನೇನು ನಡೆಯುತ್ತದೆ ಎಂಬ ಸರಳವಾದ, ಸಣ್ಣ ಎಳೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗುತ್ತಿದೆ.

ಈಗಾಗಲೇ ಮೂರ್‍ನಾಲ್ಕು ದಿನಗಳ ಕಾಲ ಶೂಟಿಂಗ್‌ ನಡೆದಿದ್ದು, ಸಿನಿಮಾ ಚೆನ್ನಾಗಿ ಮೂಡಿಬರುತ್ತಿದೆ’ ಎಂದು ಮಾಹಿತಿ ನೀಡಿದರು. ಚಿತ್ರದಲ್ಲಿ ಮತ್ತೂಂದು ಪ್ರಮುಖ ಪಾತ್ರ ದಲ್ಲಿ ತಬಲ ನಾಣಿ ಕಾಣಿಸಿಕೊಳ್ಳುತ್ತಿದ್ದು, ಚಿತ್ರದಲ್ಲಿ ಅವರದ್ದು ಮದುವೆಯಾಗಲು ಹುಡುಗಿಯನ್ನು ಹುಡುಕಲು ಪರದಾಡುತ್ತಿರುವ ವರನ ಪಾತ್ರವಂತೆ.

ತಮ್ಮ ಪಾತ್ರದ ಬಗ್ಗೆ ಮಾತನಾಡಿದ ತಬಲ ನಾಣಿ, “ಇದೊದು ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಚಿತ್ರ. ನನ್ನದು ತುಂಬ ವಯಸ್ಸಾದರೂ, ಮದುವೆಯಾಗದ ಮದುವೆ ಗಂಡಿನ ಪಾತ್ರ. ಸಿನಿಮಾದ ಕಥೆಯ ಎಳೆ ತುಂಬ ಚೆನ್ನಾಗಿದೆ. ಪ್ರೇಕ್ಷಕರಿಗೂ ಸಿನಿಮಾ ಇಷ್ಟವಾಗುತ್ತದೆ’ ಎಂಬ ಭರವಸೆಯ ಮಾತುಗಳನ್ನಾಡಿದರು. “ಡವ್‌ ಮಾಸ್ಟರ್‌’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಬಹುಭಾಷಾ ನಟಿ ಶಕೀಲಾ ಮತ್ತೂಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

“ಬಹಳ ವರ್ಷಗಳ ನಂತರ ಕನ್ನಡ ಸಿನಿಮಾ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ತುಂಬ ಚೆನ್ನಾಗಿರು ವಂಥ ಗೃಹಿಣಿ ಪಾತ್ರ ಇದರಲ್ಲಿದೆ. ಹೊಸ ತಂಡದ ಜೊತೆ ಕೆಲಸಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ’ ಎನ್ನುವುದು ಚಿತ್ರದ ಬಗ್ಗೆ ಶಕೀಲಾ ಮಾತು. ಉಳಿದಂತೆ “ಡವ್‌ ಮಾಸ್ಟರ್‌’ ಚಿತ್ರದಲ್ಲಿ ಕಾಕ್ರೊಚ್‌ ಸುಧಿ, ಗೋವಿಂದೇ ಗೌಡ (ಜಿ.ಜಿ), ಸುಂದರ್‌, ಗಿರೀಶ್‌ ಜತ್ತಿ, ನವೀನ್‌ ಪಡೀಲ್, ಆ್ಯಂಟನಿ ಕಮಲ್, ಸಪ್ನಾ, ಮಿತ್ರ, ಕುರಿ ಪ್ರತಾಪ್‌ ಮೊದಲಾ ದವರು ಕಾಣಿಸಿಕೊಳ್ಳುತ್ತಿದ್ದು, ಎಲ್ಲರೂ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ‌

ಈ ಹಿಂದೆ “ನಮ್ಮೂರ ಹೈಕ್ಳು’ ಸಿನಿಮಾಕ್ಕೆ ಸಂಗೀತ ಮಾಡಿದ್ದ ಶಕೀಲ್‌ ಅಹಮದ್‌ ಈ ಚಿತ್ರದ ಮೂರು ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ. ಹಾಡುಗಳಿಗೆ ನಾಗಿ ನೃತ್ಯ ಸಂಯೋಜನೆಯಿದೆ. ಚಿತ್ರಕ್ಕೆ ಕಿರಣ್‌ ಕುಮಾರ್‌ ಛಾಯಾಗ್ರಹಣ ಮಾಡುತ್ತಿದ್ದಾರೆ. “ರೈನ್‌ ಬೋ’ ಬ್ಯಾನರ್‌ನಲ್ಲಿ ರೋಶನ್‌ “ಡವ್‌ ಮಾಸ್ಟರ್‌’ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಟಾಪ್ ನ್ಯೂಸ್

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

PM Modi

PM Modi;ಇಂದು 71000ಕ್ಕೂ ಅಧಿಕ ಮಂದಿಗೆ ಉದ್ಯೋಗ ಪತ್ರ ವಿತರಣೆ

naksal (2)

Chhattisgarh; ನಕ್ಸಲ್‌ ವ್ಯಾಪ್ತಿ 9500 ಚ.ಕಿ.ಮೀ.ಗೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

Nodidavaru Enanthare Movie: ನವೀನ್‌ ಶಂಕರ್‌ ಚಿತ್ರದ ಟೀಸರ್‌ ಬಂತು

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

KD

Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್‌

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು

1-eng

Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್‌ ತಂಡ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.