“ಶಕ್ತಿಧಾಮ”ದಲ್ಲಿ ನಿರ್ಗತಿಕ ಮಹಿಳೆಯರು,ಮಕ್ಕಳಿಗೆ ಆಸರೆಯಾಗಿದ್ದ ಅಮ್ಮ
Team Udayavani, May 31, 2017, 11:43 AM IST
ಮೈಸೂರು : ಬಹು ಅಂಗಾಂಗವೈಫಲ್ಯಗಳಿಂದ 77ರ ಹರೆಯದಲ್ಲಿ ಕೊನೆಯುಸಿರೆಳೆದಿರುವ ವರನಟ ಡಾ.ರಾಜ್ ಕುಮಾರ್ ಧರ್ಮಪತ್ನಿ, ಹಿರಿಯ ನಿರ್ಮಾಪಕಿ ಡಾ.ಪಾರ್ವತಮ್ಮ ರಾಜ್‌ಕುಮಾರ್ ಅವರು ಕೇವಲ ನಿರ್ಮಾಪಕಿಯಾಗಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯಗಳ ಮೂಲಕವೂ ಗುರುತಿಸಿಕೊಂಡವರು.
ಮೈಸೂರಿನ ನಂಜನಗೂಡು ರಸ್ತೆಯಲ್ಲಿ 2010 ರ ಮೇ 20 ರಂದು ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಶಕ್ತಿಧಾಮ ಎನ್ನುವ ಟ್ರಸ್ಟ್ ಮೂಲಕ ಪುನರ್‌ವಸತಿ ಕೇಂದ್ರವನ್ನು ತೆರೆದಿದ್ದರು. ಈ ಕೇಂದ್ರ ಆರಂಭವಾದುದರಿಂದ ಇಲ್ಲಿಯವರೆಗೆ ಸಾವಿವಾರು ಮಹಿಳೆಯರು,ಮಕ್ಕಳು ಕಳೆದುಹೋದ ಬದುಕನ್ನು ಮರಳಿ ಪಡೆದಿದ್ದಾರೆ.ಪ್ರಸಕ್ತ ಈ ಕೇಂದ್ರದಲ್ಲಿ 35 ಮಹಿಳೆಯರು ಮತ್ತು 100 ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಶಕ್ತಿಧಾಮದಲ್ಲಿ ಪಾರ್ವತಮ್ಮ ಅವರ ನಿಧನದ ವಾರ್ತೆ ಕೇಳಿ ನೀರವ ಮೌನ ಆವರಿಸಿದ್ದು ಅನ್ನದಾತೆ ಇಲ್ಲದೆ ಮಹಿಳೆಯರು ಮಕ್ಕಳು ಕಂಬನಿ ಮಿಡಿದಿದ್ದಾರೆ. ಪಾರ್ವತಮ್ಮ ಅವರ ಭಾವ ಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ದೀಪ ಬೇಳಗಿ ಮೌನಾಚರಣೆ ಮಾಡುತ್ತಿದ್ದಾರೆ.
ಅಶಕ್ತರ ಸೇವೆ ಮಾಡಬೇಕೆಂಬ,ಶೋಷಿತರ ಪರ ಧನಿಯಾಗಬೇಕೆಂಬ ತುಡಿತ ಹೊಂದಿದ್ದ ಪಾರ್ವತಮ್ಮ ಸಮಯ ಸಿಕ್ಕಾಗೆಲ್ಲಾ ಶಕ್ತಿಧಾಮಕ್ಕೆ ಭೇಟಿ ನೀಡಿ ನೊಂದವರಿಗೆ ಸಾಂತ್ವನ ಹೇಳಿ ಜೀವನ ಭರವಸೆ ತುಂಬುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Prashanth Neel: ಸಲಾರ್‌ಗೆ ನಾನು ಇನ್ನಷ್ಟು ಶ್ರಮ ಹಾಕಬೇಕಿತ್ತು; ಪ್ರಶಾಂತ್ ನೀಲ್
UI Movie: ಉಪ್ಪಿ ಯುಐ ಮೆಚ್ಚಿದ ಯಶ್
Shivaraj Kumar: ಶಿವರಾಜ್ ಕುಮಾರ್ ಅವರ ಆಪರೇಷನ್ ಯಶಸ್ವಿಯಾಗಿದೆ – ಪತ್ನಿ ಗೀತಾ ಮಾಹಿತಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.