ಸಾಹಸ ದೃಶ್ಯಗಳ ಹಿಂದೆ ಅಣ್ಣಾವ್ರ ಶ್ರಮ
Team Udayavani, Apr 17, 2021, 3:16 PM IST
ರಾಜ್ ಅವರಿಗೆ ದೈವಭಕ್ತಿ ಎಷ್ಟಿತ್ತೋ ಅಷ್ಟೇ ಕರ್ತವ್ಯ ನಿಷ್ಠೆ ಕೂಡ ಇತ್ತು. ಅದಕ್ಕೆ ಅತ್ಯುತ್ತಮ ನಿದರ್ಶನವೆಂದರೆ “ಕಂಠೀರವ’ ಚಿತ್ರದ ಚಿತ್ರೀಕರಣದ ಸನ್ನಿವೇಶ. ಮಹಾರಾಜಕಂಠೀರವ ಅವರು ಕೋಣವನ್ನುಭುಜದ ಮೇಲೆ ಹೊತ್ತು ಮೈಸೂರಿನಚಾಮುಂಡಿ ಬೆಟ್ಟದ ಸಾವಿರಮೆಟ್ಟಿಲುಗಳನ್ನು ಏರುತ್ತಿದ್ದರು ಎಂಬ ಪ್ರತೀತಿ ಇತ್ತು.
ಇದು ವರನಟನ ಅರಿವಿಗೆ ಬಂದ ಕೂಡಲೇ ಆ ಪ್ರಯತ್ನವನ್ನೂ ಚಿತ್ರೀಕರಣ ಮಾಡಿಕೊಳ್ಳುವ ಮುಂದಾಗಿ ಚಿತ್ರೀಕರಣಕ್ಕೆ ಸಿದ್ಧರಾಗಿಯೇ ಬಿಟ್ಟರು. ಕೊಬ್ಬಿದ ಕೋಣವನ್ನು ತರಿಸಲಾಯಿತು. ರಾಜ್ ಅದನ್ನು ಭುಜದ ಮೇಲೆ ಏರಿಸಿಕೊಂಡು ಹತ್ತು ಮೆಟ್ಟಿಲು ಏರಲಾರಂಭಿಸಿದರು. ಡೈರೆಕ್ಟರ್ ಕಟ್ ಹೇಳಿದ ಮೇಲೆಯೇ ಕೋಣವನ್ನು ಕೆಳಗಿಳಿಸಿದ್ದು. ಅದೇ ಚಿತ್ರದ ಮತ್ತೂಂದು ದೃಶ್ಯ ರಾಜ್ ಅವರ ಕರ್ತವ್ಯ ನಿಷ್ಠೆಯನ್ನು ಎತ್ತಿ ಹಿಡಿಯುತ್ತದೆ.
ಕಂಠೀರವರನ್ನು ಜಟ್ಟಿ ಕಾಳಗದಲ್ಲಿ ಜಯಿಸುವವರೇ ಇರಲಿಲ್ಲ ಎಂದುಇತಿಹಾಸ ಹೇಳುತ್ತದೆ. ಅದನ್ನು ರಾಜ್ ಅವರ ಪಾತ್ರನಿರ್ವಹಣೆಯಲ್ಲಿ ತೋರಿಸಿಯೂ ಬಿಟ್ಟರು.ಸುಮಾರು 250 ಕೆ.ಜಿ ತೂಗುತ್ತಿದ್ದ, ಒಬ್ಬ ಜಟ್ಟಿಯನ್ನುಹೆಗಲ ಮೇಲಿರಿಸಿಕೊಂಡು ಮೂರು ಸುತ್ತು ತಿರುಗಿಸಿ ನೆಲಕ್ಕೆ ಒಗೆದೇ ಬಿಟ್ಟರು. ಹೀಗೆ ರಾಜ್ ಸಾಹಸ ದೃಶ್ಯಗಳಲ್ಲೂ ನೈಜತೆ ಮೆರೆಯುತ್ತಿದ್ದರು. ಸಿನಿಮಾನೈಜವಾಗಿ ಮೂಡಿ ಬರಲು ಯಾವ ಪ್ರಯತ್ನ, ಸಾಹಸಕ್ಕೂ ಅವರು ಸಿದ್ಧರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್ ಹೆಸರಲ್ಲಿ ವಂಚನೆ!
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.