Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Team Udayavani, Apr 24, 2024, 11:20 AM IST
ಇಂದು ವರನಟ ಡಾ.ರಾಜ್‌ಕುಮಾರ್ ಅವರ 96ನೇ ಹುಟ್ಟುಹಬ್ಬ. ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ತಯಾರಾಗಿದ್ದಾರೆ.
ಕಂಠೀರವ ಸ್ಟುಡಿಯೋದಲ್ಲಿರುವ ರಾಜ್ ಸ್ಮಾರಕಕ್ಕೆ ತೆರಳಿ ಪೂಜೆ ಸಲ್ಲಿಸಲಿರುವ ಕುಟುಂಬ ವರ್ಗ, ಅಭಿಮಾನಿಗಳು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಲಿದ್ದಾರೆ.
ರಾಜ್‌ಕುಮಾರ್ ಅವರನ್ನು ಅಭಿಮಾನಿಗಳು ನೆನೆಯದ ದಿನವಿಲ್ಲ. ಅದಕ್ಕೆ ಕಾರಣ ರಾಜ್ ನಡೆದುಕೊಂಡ ಬಂದ ರೀತಿ. ರಾಜ್ ಆದರ್ಶ, ರಾಜ್ ನಿಲುವು, ರಾಜ್ ವಿನಯ, ರಾಜ್ ಅಭಿನಯ ಎಲ್ಲವೂ ಒಂದು ಮಾದರಿಯೇ. ಅಷ್ಟೇ ಅಲ್ಲ, ರಾಜ್ ಕನ್ನಡವೂ ಚಿತ್ರರಂಗದ ಭಾಷೆಯೇ ಆಗಿಹೋಯಿತು.
ಅವರು ಮಾತಾಡುವ ಭಾಷೆಯಲ್ಲೇ ಸಂಭಾಷಣೆಗಳನ್ನು ಬರೆಯಲು ಆರಂಭಿಸಿದರು. ಅವರಿಗೆ ಅಂತಲೇ ಒಂದು ಮಾದರಿ ಸೃಷ್ಟಿಯಾಯಿತು. ಹೀಗಾಗಿ ರಾಜ್‌ಕುಮಾರ್ ಕನ್ನಡದ ಪಾಲಿಗೆ ಅಂಬಿಗ. ಹೊಸ ದ್ವೀಪಗಳನ್ನು ತೋರಿಸಿದವರು.
ಅಣ್ಣಾವ್ರು ಸೂಪರ್ ಸ್ಟಾರ್ ಅಷ್ಟೇ ಆಗಿರಲಿಲ್ಲ. ಆಳಾಗಬಲ್ಲವನೇ ಅರಸಾಗುವ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಈ ಕಾಲದ ಸಂಪರ್ಕಸಾಧನಗಳು ಯಾವುವೂ ಇಲ್ಲದ ಕಾಲದಲ್ಲಿ ಅವರು ನಾಡಿನಾದ್ಯಂತ ಜನಪ್ರಿಯ ರಾಗಿದ್ದರು.
ಇವತ್ತು ಟೀವಿ, ಇಂಟರ್‌ನೆಟ್ಟು, ಅಸಂಖ್ಯಾತ ಪತ್ರಿಕೆಗಳು,ಆಧುನಿಕ ಸಂವಹನ ಮಾಧ್ಯಮಗಳಿದ್ದರೂ, ಒಬ್ಬ ನಟನ ಫೋಟೋವನ್ನು ಮುಂದೆ ಹಿಡಿದು ಯಾರಿದು ಹೇಳಿ ಎಂದರೆ ನೂರಕ್ಕೆ ಎಪ್ಪತ್ತು ಮಂದಿ ಅಡ್ಡಡ್ಡ ತಲೆಯಾಡಿಸುತ್ತಾರೆ. ಅದರ ಅರ್ಥ ಇಷ್ಟೇ. ಒಬ್ಬ ನಟ ಎಲ್ಲರಿಗೂ ಹತ್ತಿರವಾಗುವುದು ಸ್ಟಾರ್‌ಗಿರಿಯಿಂದಲೋ ಪ್ರಚಾರದಿಂದಲೋ ಅಲ್ಲ. ಅಣ್ಣಾವ್ರಿಗೆ ಇದ್ದ ಜನಪ್ರೀತಿ ಮತ್ತು ಸಜ್ಜನಿಕೆಯಿಂದ. ನಾಡಿನ ಕುರಿತು ಅವರಿಗಿದ್ದ ಖಚಿತ ಅಭಿಪ್ರಾಯಗಳಿಂದ.
ಎಲ್ಲರ ಮೇಲೂ ಅವರಿಗಿದ್ದ ಅಕ್ಕರೆಯಿಂದ. ಇಡೀ ಭಾರತೀಯ ಚಿತ್ರರಂಗದಲ್ಲೇ ಡಾ ರಾಜಕುಮಾರ್ ರಷ್ಟು ಕಾದಂಬರಿಯಾಧಾರಿತ ಚಿತ್ರಗಳಲ್ಲಿ ಯಾವೊಬ್ಬ ನಟನೂ ನಟಿಸಿಲ್ಲ ಎಂಬುದು ಗೊತ್ತಿರಬಹುದು. ಇದು ಅವರ ಹೆಸರಿನಲ್ಲಿರುವ ಒಂದು ಅಪರೂಪದ ದಾಖಲೆ.
ಇನ್ನೊಂದು ವಿಶೇಷವೆಂದರೆ, ಡಾ ರಾಜಕುಮಾರ್ ಅವರ ಮಹತ್ವದ ಚಿತ್ರಗಳನ್ನು ಬೇರೆಬೇರೆ ಭಾಷೆಗಳಲ್ಲಿ ರೀಮೇಕ್ ಮಾಡಲಾಗಿದೆ. ಅಷ್ಟೇ ಅಲ್ಲ, ಆ ಭಾಷೆಯ ಜನಪ್ರಿಯ ಮತ್ತು ಯಶಸ್ವಿ ಕಲಾವಿದರು ಆ ಚಿತ್ರಗಳಲ್ಲಿ ನಟಿಸಿರುವುದು ವಿಶೇಷ.
ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಎನ್.ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರ ರಾವ್, ಎಂ.ಜಿ. ರಾಮಚಂದ್ರನ್, ಶಿವಾಜಿ ಗಣೇಶನ್, ಅಮಿತಾಭ್ ಬಚ್ಚನ್, ಧರ್ಮೇಂದ್ರ, ರಾಜೇಶ್ ಖನ್ನಾ ಇವರೆಲ್ಲರೂ ತಮ್ಮ ಭಾಷೆಗಳಲ್ಲಿ ಡಾ. ರಾಜಕುಮಾರ್ ಅವರ ಚಿತ್ರಗಳನ್ನು ರೀಮೇಕ್ ಮಾಡುವುದರ ಜೊತೆಗೆ, ಅವರು ನಿರ್ವಹಿಸಿದ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.