ದೃಶ್ಯ-2 ಚಿತ್ರಕ್ಕೆಮುಹೂರ್ತ; ನಿರ್ದೇಶಕ ಪಿ. ವಾಸು ಆ್ಯಕ್ಷನ್-ಕಟ್
ಎಲ್ಲರೂ ಲಾಕ್ ಡೌನ್ ಸಮಯದಲ್ಲಿ ದಪ್ಪ ಆಗುತ್ತಾರೆ. ನಾನು ನಾಲ್ಕುಕೆಜಿ ಕಡಿಮೆಯಾಗಿದ್ದೇನೆ.
Team Udayavani, Jul 13, 2021, 3:39 PM IST
2014ರಲ್ಲಿ ತೆರೆಕಂಡು ಜನಮನ ಗೆದ್ದಿದ್ದ “ದೃಶ್ಯ’ ಚಿತ್ರದ ಮುಂದುವರೆದ ಭಾಗ “ದೃಶ್ಯ2′ ಹೆಸರಿನಿಂದ ನಿರ್ಮಾಣವಾಗುತ್ತಿದೆ. ಈಗಾಗಲೇ ಮಲೆಯಾಳಂನಲ್ಲಿ “ದೃಶ್ಯ 2′ ಬಿಡುಗಡೆಯಾಗಿ ಯಶಸ್ವಿಯಾಗಿದ್ದು, ಅದರಕನ್ನಡ ಅವತರಣಿಕೆಗೆ ಹಿರಿಯ ನಿರ್ದೇಶಕ ಪಿ. ವಾಸು ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಇನ್ನು “ದೃಶ್ಯ-2′ ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಹಿಂದೆ “ದೃಶ್ಯ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ, ನವ್ಯಾ ನಾಯರ್ ಈ ಚಿತ್ರದಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಪುತ್ರಿ ಪಾತ್ರದಲ್ಲಿ ಆರೋಹಿ ನಾರಾಯಣ್ ಕಾಣಿಸಿಕೊಳ್ಳುತ್ತಿದ್ದಾರೆ.
ಉಳಿದಂತೆ ಹಿರಿಯ ನಟ ಅನಂತನಾಗ್, ಪ್ರಭು ಶಿವಾಜಿ, ಸಾಧುಕೋಕಿಲ, ನೀತು ರೈ, ಪ್ರಮೋದ್ ಶೆಟ್ಟಿ, ಅಶೋಕ್, ಶಿವರಾಂ, ಉನ್ನತಿ,ಕೃಷ್ಣ, ನಾರಾಯಣ ಸ್ವಾಮಿ, ಲಾಸ್ಯಾ ನಾಗರಾಜ್ ಮುಂತಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. “ಇ4 ಎಂಟರ್‌ಟೈನ್ಮೆಂಟ್’ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜೀತು ಜೋಸೆಫ್ಕಥೆ ಬರೆದಿದ್ದು, ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ರವಿ ಸಂತೆಹಕ್ಲುಕಲಾ ನಿರ್ದೇಶನವಿದೆ. “ದೃಶ್ಯ-2′ ಚಿತ್ರದ ಮುಹೂರ್ತ ಸಮಾರಂಭ ಸೋಮವಾರ ಯಲಹಂಕದ ಬಳಿಯ ವೈಟ್‌ಹೌಸ್‌ನಲ್ಲಿ ಸರಳವಾಗಿ ನೆರವೇರಿದ್ದು, ಮಂಗಳವಾರದಿಂದ ಚಿತ್ರೀಕರಣ ನಿರಂತರವಾಗಿ ನಡೆಯಲಿದೆ.
“ದೃಶ್ಯ-2′ ತಂಡಕ್ಕೆ ಅನಂತನಾಗ್ ಎಂಟ್ರಿ ಇನ್ನು “ದೃಶ್ಯ-2′ ಚಿತ್ರತಂಡ ಸೇರಿಕೊಂಡಿರುವುದಕ್ಕೆ ಹಿರಿಯ ನಟ ಅನಂತನಾಗ್ ಸಂತಸ ವ್ಯಕ್ತಪಡಿಸಿದ್ದಾರೆ. “ಕಳೆದ ಒಂದುವರೆ ವರ್ಷದಿಂದ ನಾನು ಮನೆಬಿಟ್ಟು ಹೊರಗೆ ಬಂದಿರಲಿಲ್ಲ. ಬಹಳ ದಿನಗಳ ನಂತರ ಆಚೆ ಬಂದಿರುವುದು ನನಗೆ ಖುಷಿಯಾಗಿದೆ. ಎಲ್ಲರೂ ಲಾಕ್ ಡೌನ್ ಸಮಯದಲ್ಲಿ ದಪ್ಪ ಆಗುತ್ತಾರೆ. ನಾನು ನಾಲ್ಕುಕೆಜಿ ಕಡಿಮೆಯಾಗಿದ್ದೇನೆ.
ನನಗೆಕಥೆ ಇಷ್ಟವಾಗಿ,ಕೇವಲ ನಾಲ್ಕೈದು ದಿನಗಳಲ್ಲಿ ಈ ಚಿತ್ರದಲ್ಲಿ ನಾನು ಅಭಿನಯಿ ಸುವುದು ಖಚಿತವಾಯಿತು. ಸ್ವಲ್ಪ ಸಮಯ ದಲ್ಲಿ ಚಿತ್ರತಂಡ ಎಲ್ಲಾ ಸಿದ್ದತೆ ಮಾಡಿ ಕೊಂಡಿರುವುದು ಸಂತಸದ ವಿಷಯ. ಪಿ. ವಾಸು ಅವರ ನಿರ್ದೇಶನದಲ್ಲಿ ನಾನು ನಟಿಸುತ್ತಿರುವ ಎರಡನೇ ಚಿತ್ರವಿದು’ ಎಂದಿದ್ದಾರೆ ಅನಂತ ನಾಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.