ಮಾದಕ ವಸ್ತು ಪ್ರಕರಣ; CCBಗೆ ಇಂದ್ರಜಿತ್ ಲಂಕೇಶ್ ಏನೆಲ್ಲಾ ಸಾಕ್ಷ್ಯ, ಮಾಹಿತಿ ಕೊಟ್ಟಿದ್ದಾರೆ?
ಡ್ರಗ್ಸ್ ಜಾಲದೊಂದಿಗೆ ಕನ್ನಡ ಚಲನಚಿತ್ರರಂಗದ ಕೆಲವರಿಗೆ ನಂಟಿದೆ. ಈ ಬಗ್ಗೆ ನನ್ನ ಬಳಿ ವಿವರ ಇದೆ.
Team Udayavani, Aug 31, 2020, 5:51 PM IST
ಬೆಂಗಳೂರು:ಸ್ಯಾಂಡಲ್ ವುಡ್ ನಲ್ಲಿಯೂ ಡ್ರಗ್ಸ್ ಜಾಲ ಇದ್ದಿದ್ದು, ಈ ಚಟಕ್ಕೆ ಬಿದ್ದವರ ಬಗ್ಗೆ ಮಾಹಿತಿ ನೀಡುವುದಾಗಿ ಹೇಳಿದ್ದ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಸೋಮವಾರ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಬಲವಾದ ಸಾಕ್ಷ್ಯಾಧಾರಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.
ಸ್ಯಾಂಡಲ್ ವುಡ್ ನ ನಟ, ನಟಿಯರು ಹಾಗೂ ಸಂಗೀತಗಾರರ ಡ್ರಗ್ಸ್ ಪೂರೈಕೆ ಪ್ರಕರಣವನ್ನು ಕೇಂದ್ರ ಮಾದಕ ವಸ್ತು ನಿಗ್ರಹ ದಳ (ಎನ್ ಸಿಬಿ) ತನಿಖೆಯ ಬಳಿಕ ರಾಜ್ಯ ಪೊಲೀಸರು ತನಿಖೆ ಕೈಗೊಳ್ಳಲಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದರು.
ಸಾಕ್ಷ್ಯ ಕಂಡು ಸಿಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ: ಇಂದ್ರಜಿತ್
ಇಂದು ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾದ ಇಂದ್ರಜಿತ್ ಲಂಕೇಶ್ ಅವರು ತಮ್ಮ ಲ್ಯಾಪ್ ಟ್ಯಾಪ್ ನಲ್ಲಿದ್ದ ನಟರ ಹೆಸರು, ಫೋಟೋಗಳು ಹಾಗೂ ವಿಡಿಯೋಗಳನ್ನು ಹಸ್ತಾಂತರಿಸಿದ್ದಾರೆ. ಡ್ರಗ್ಸ್ ಜಾಲಕ್ಕೆ ಸಂಬಂಧಿಸಿಸಂತೆ ನನ್ನ ಬಳಿ ಇದ್ದ ಎಲ್ಲಾ ಮಾಹಿತಿಯನ್ನು ಅಧಿಕಾರಿಗಳಿಗೆ ನೀಡಿದ್ದೇನೆ. ಸುಮಾರು 10ರಿಂದ 15 ಮಂದಿಯ ಹೆಸರು ಮತ್ತು ಅದಕ್ಕೆ ಸಂಬಂಧಿಸಿದ ಮಾಹಿತಿ ನೀಡಿದ್ದೇನೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ.
ನಾನು ನೀಡಿರುವ ವಿಡಿಯೋ ಸಾಕ್ಷ್ಯ ಕಂಡು ಪೊಲೀಸರು ಕೂಡಾ ಶಾಕ್ ಆಗಿದ್ದಾರೆ. ಇದರಲ್ಲಿ ಓರ್ವ ನಟಿ ಪಾರ್ಟಿಯೊಂದರಲ್ಲಿ ನಶೆಯೊಂದಿಗೆ ಅಸಭ್ಯವಾಗಿ ನೃತ್ಯ ಮಾಡುತ್ತಿರುವ ವಿಡಿಯೋ ಇದ್ದಿದ್ದು, ಅದನ್ನು ಸಿಸಿಬಿ ವಶಕ್ಕೆ ಒಪ್ಪಿಸಿರುವುದಾಗಿ ಇಂದ್ರಜಿತ್ ವಿವರಿಸಿದ್ದಾರೆ.
ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ನಾನು ಅಧಿಕಾರಿಗಳಿಗೆ ನೀಡಿರುವ ಮಾಹಿತಿಯನ್ನು ನಿಮ್ಮ ಮುಂದೆ ಹಂಚಿಕೊಳ್ಳಲಾರೆ. ಯಾಕೆಂದರೆ ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ. ಎಲ್ಲ ವಿವರವನ್ನು ಸಿಸಿಬಿ ಅಧಿಕಾರಿಗಳೇ ನಿಮಗೆ ನಂತರ ನೀಡುತ್ತಾರೆ ಎಂದು ಇಂದ್ರಜಿತ್ ಹೇಳಿದರು. ಡ್ರಗ್ಸ್ ಜಾಲದ ವಿಚಾರದಲ್ಲಿ ಯಾರ ತೇಜೋವಧೆ ಮಾಡುವುದು ನನ್ನ ಉದ್ದೇಶವಲ್ಲ. ಸಮಾಜದ ಒಳಿತಿಗಾಗಿ ಇದು ಅನಿವಾರ್ಯ ಎಂದರು.
ಚಿರಂಜೀವಿ ಸರ್ಜಾ ಬಗ್ಗೆ ನಾನು ಅವರ ಕುಟುಂಬಕ್ಕೆ ನೋವು ನೀಡಬೇಕೆಂಬ ಅರ್ಥದಲ್ಲಿ ಮಾತನಾಡಿಲ್ಲ. ನನಗೆ ಗೊತ್ತಿರುವ ವಿಷಯದ ಬಗ್ಗೆ ಮಾತನಾಡಿದ್ದೇನೆ ಅಷ್ಟೇ ಎಂದು ಇಂದ್ರಜಿತ್ ಲಂಕೇಶ್ ತಿಳಿಸಿದ್ದಾರೆ.
ಡ್ರಗ್ಸ್ ಜಾಲದೊಂದಿಗೆ ಕನ್ನಡ ಚಲನಚಿತ್ರರಂಗದ ಕೆಲವರಿಗೆ ನಂಟಿದೆ. ಈ ಬಗ್ಗೆ ನನ್ನ ಬಳಿ ವಿವರ ಇದೆ. ನನಗೆ ರಕ್ಷಣೆ ನೀಡಿದರೆ ಎಲ್ಲವನ್ನೂ ಅಧಿಕಾರಿಗಳ ಮುಂದೆ ಇಡುತ್ತೇನೆ ಎಂದು ಇಂದ್ರಜಿತ್ ಹೇಳಿದ್ದರು. ಈ ನಿಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಇಂದು ಇಂದ್ರಜಿತ್ ಅವರು ಸಾಕ್ಷ್ಯ ಸಮೇತ ಸಿಸಿಬಿ ಅಧಿಕಾರಿಗಳ ಮುಂದೆ ಹಾಜರಾಗಿ ಬರೋಬ್ಬರಿ ಆರು ಪುಟಗಳ ಹೇಳಿಕೆಯನ್ನು ನೀಡಿರುವುದಾಗಿ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Sandalwood: ಮಾಸ್ ಸಿನಿಮಾಗಳಿಗೆ ಜೈ ಎಂದ ಪ್ರೇಕ್ಷಕ
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.