ಡ್ರಗ್ಸ್ ಪ್ರಕರಣ: ಸಂಜನಾ, ರಾಗಿಣಿ ತಲೆಕೂದಲು ಪರೀಕ್ಷೆಗೆ ಹೈಕೋರ್ಟ್ ಅನುಮತಿ
Team Udayavani, Dec 5, 2020, 2:50 PM IST
ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಜೈಲು ಸೇರಿರುವ ನಟಿಯರಾದ ರಾಗಿಣಿ, ಸಂಜನಾ ಸೇರಿದಂತೆ ಐವರು ಆರೋಪಿಗಳ ತಲೆಕೂದಲು ಮಾದರಿ ಪರೀಕ್ಷೆ ನಡೆಸಲು ನ್ಯಾಯಾಲಯ ಅನುಮತಿ ನೀಡಿದೆ.
ತಲೆಕೂದಲ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಆರೋಪಿಗಳು ಸಹಕರಿಸುತ್ತಿಲ್ಲ. ಈ ನಿಟ್ಟಿನಲ್ಲಿ ಆರೋಪಿಗಳ ತಲೆಕೂದಲ ಸಂಗ್ರಹಕ್ಕೆ ಅನುಮತಿ ನೀಡುವಂತೆ ಸಿಸಿಬಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ಸಿಸಿಎಚ್ 33ನೇ ನ್ಯಾಯಾಲಯ, ಆರೋಪಿಗಳಾದ ರಾಗಿಣಿ, ಸಂಜನಾ, ರಾಹುಲ್ ತೋನ್ಸೆ, ಲೂಮ್ ಪೆಪ್ಪರ್, ರಿಯಾಜ್ ಮೊಹಮದ್, ತಲೆಕೂದಲು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲು ಅನುಮತಿ ನೀಡಿ ಶುಕ್ರವಾರ ಆದೇಶ ನೀಡಿದೆ.
ತಲೆಕೂದಲು ಪರೀಕ್ಷೆ ಏಕೆ?: ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ಸೇರಿದಂತೆ ಐವರು ಆರೋಪಿಗಳು ಹಲವು ಪಾರ್ಟಿಗಳಲ್ಲಿ ಪಾಲ್ಗೊಂಡಿದ್ದು, ಮಾದಕ ವಸ್ತು ಸೇವನೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಅವರು ಮಾದಕ ವಸ್ತು ಸೇವಿಸಿರುವುದು ಖಚಿತ ಪಡಿಸಿಕೊಳ್ಳಲು ಅವರ ತಲೆಕೂದಲನ್ನು ಸಂಗ್ರಹಿಸಿ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಬೇಕಿದೆ.
ಇದನ್ನೂ ಓದಿ:ಕುಮಾರಸ್ವಾಮಿಗೆ ಈಗ ಜ್ಞಾನೋದಯವಾಗಿದೆ, ಇನ್ನಾದರೂ ಕಾಂಗ್ರೆಸ್ ಸಹವಾಸ ಬಿಡಲಿ : ಸಿ ಟಿ ರವಿ
ಮಾದಕ ವಸ್ತು ಸೇವಿಸಿದವರ ತಲೆಕೂದಲಲ್ಲಿ ಹಲವು ತಿಂಗಳುಗಳ ಕಾಲ ಮಾದಕ ವಸ್ತುವಿನ ಅಂಶಗಳು ಅಡಗಿರುತ್ತವೆ. ಹೀಗಾಗಿ, ಆರೋಪಿಗಳ ಮಾದಕ ವಸ್ತು ಸೇವಿಸಿದ್ದರೇ ಎಂಬುದು ಧೃಡಪಡಿಸಬೇಕು. ಅದನ್ನು ದೋಷಾರೋಪ ಪಟ್ಟಿಯಲ್ಲೂ ರುಜುವಾತುಪಡಿಸಬೇಕು.
ಈ ನಿಟ್ಟಿನಲ್ಲಿ ಅವರ ತಲೆಕೂದಲಿನ ಮಾದರಿ ತೆಗೆದುಕೊಳ್ಳಲು ಆರೋಪಿಗಳು ಸಹಕರಿಸಿರಲಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆರೋಪಿಗಳ ವಿರುದ್ಧ ಈಗಾಗಲೇ ತನಿಖೆಯಲ್ಲಿ ಹಲವು ಸಾಕ್ಷ್ಯಾಧಾರಗಳು ಲಭ್ಯವಾಗಿವೆ. ಕೂದಲ ಪರೀಕ್ಷೆಗೆ ಅನುಮತಿ ದೊರೆತಿದ್ದು, ತಲೆಕೂದಲ ಮಾದರಿ ಸಂಗ್ರಹಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.