ತಿನ್ನಬಹುದು, ತಿನ್ನಿಸಬಹುದು ಯಾರಿಗೆ ಬೇಕು ಕುಲ್ಫಿ?
Team Udayavani, Aug 30, 2017, 10:32 AM IST
“ಕುಲ್ಫಿ’ ಎಂಬ ಚಿತ್ರದ ಜಾಹೀರಾತೊಂದು ಇತ್ತೀಚೆಗೆ ಪತ್ರಿಕೆಗಳಲ್ಲಿ ಪದೇಪದೇ ಕಾಣಿಸಿಕೊಳ್ಳುತ್ತಲೇ ಇತ್ತು. ಆದರೆ, ಆ ಚಿತ್ರವನ್ನು ಯಾರು ಮಾಡಿದ್ದಾರೆ? ಯಾರೆಲ್ಲಾ ಇದ್ದಾರೆ ಎಂಬ ವಿಷಯ ಮಾತ್ರ ಬಹಿರಂಗವಾಗಿರಲಿಲ್ಲ. ಈಗ ಕೊನೆಗೂ “ಕುಲ್ಫಿ’ ಬಗ್ಗೆ ಒಂದಿಷ್ಟು ಮಾಹಿತಿ ಲಭ್ಯವಾಗಿದೆ. ಈ ಚಿತ್ರವನ್ನು ಮಂಜು ಹಾಸನ್ ಎನ್ನುವವರು ನಿರ್ದೇಶಿಸಿದ್ದು, ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆಯನ್ನು ಅವರೇ ರಚಿಸಿದ್ದಾರೆ.
ಇನ್ನು ಚಿತ್ರದ ಮೂಲಕ ಗಿರೀಶ್ ಗೌಡ, ಲಾರೆನ್ಸ್, ದಿಲೀಪ್ ಎಂಬ ಹೊಸ ಹುಡುಗರನ್ನು ಮತ್ತು ಸಿಲೋನ್ ಎಂಬ ಮಂಗಳೂರು ಮೂಲಕ ಹೊಸ ನಾಯಕಿಯನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿದ್ದಾರೆ. ಅಂದ ಹಾಗೆ, ಈ ಚಿತ್ರಕ್ಕೆ ಹೆಸರಿನ ಪಕ್ಕಾ ಗಾಂಧೀಜಿ ಅವರ ಮೂರು ಕೋತಿಗಳಿದ್ದು, ಒಬ್ಬೊಬ್ಬ ನಾಯಕ ಒಂದೊಂದು ಕೋತಿಯನ್ನು ಪ್ರತಿನಿಧಿಸಲಿದೆಯಂತೆ.
“ಈ ಚಿತ್ರದ ಮೂಲಕ ಯುವ ಜನತೆ ಮಾಡುತ್ತಿರುವ ತಪ್ಪುಗಳನ್ನು ಹೇಳುವುದಕ್ಕೆ ಹೊರಟಿದ್ದೇವೆ. ಹೆಣ್ಣು, ಹೊನ್ನು, ಮಣ್ಣಿನ ಹಿಂದೆ ಹೋಗಬಾರದು, ಅದು ತಾನಾಗಿ ಒಲಿದು ಬರಬೇಕು ಎಂದು ಹೇಳುವ ಪ್ರಯತ್ನವನ್ನು ಈ ಚಿತ್ರದ ಮೂಲಕ ಮಾಡುತ್ತಿದ್ದೇವೆ. ಏಪ್ರಿಲ್ 24ಕ್ಕೆ ಚಿತ್ರ ಪ್ರಾರಂಭವಾಗಿ, ಬೆಂಗಳೂರು, ಮಂಗಳೂರು ಮುಂತಾದ ಕಡೆ ಚಿತ್ರೀಕರಣ ಮುಗಿದಿದೆ.
ಸದ್ಯ ಚಿತ್ರವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಲಿದೆ’ ಎನ್ನುತ್ತಾರೆ ಮಂಜು. ಈ ಚಿತ್ರವನ್ನು ಮುನಿಸ್ವಾಮಿ ಮತ್ತು ಅವರ ಸಹೋದರ ಚೌಡಪ್ಪ ಜೊತೆಯಾಗಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಚಿತ್ಕಲಾ ಬಿರಾದಾರ್, ರಮೇಶ್ ಭಟ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಅಭಿಷೇಕ್ ಡಿ. ರಘುನಾಥ್ ಅವರ ಸಂಗೀತ ಈ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kudremukh National Park: ವನ್ಯಜೀವಿ ಬೇಟೆಗೆ ಯತ್ನ; ಆರೋಪಿ ಬಂಧನ
ಮೋಹ ಪರವಶ, ಅಧಿಕಾರ ಮದ, ಮತ್ಸರದ ರಾಜಕಾರಣ ಮಾಡೋರಿಗೆ ಸತ್ಯ ಅರ್ಥವಾಗಲ್ಲ: ಸಿ.ಟಿ.ರವಿ
Bengaluru: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದುರುಳರು; ಭುಗಿಲೆದ್ದ ಆಕ್ರೋಶ
Tulu Film: ರೂಪೇಶ್ ಶೆಟ್ರ ‘ಜೈ’ ಸಿನಿಮಾಗೆ ಬಂದ್ರು ಬಾಲಿವುಡ್ ಸೂಪರ್ ಸ್ಟಾರ್
ಮಕ್ಕಳ ಮೇಲೆ ಗದರದೇ, ಕೈ ಮಾಡದೆ ಶಿಸ್ತನ್ನು ಮೂಡಿಸುವುದು ಹೇಗೆ? ಇಲ್ಲಿದೆ ಕೆಲವು ಸಲಹೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.