ಶ್ರೀಸಾಮಾನ್ಯನ ಪರಿಸರ ಕಾಳಜಿ!
Team Udayavani, Jul 12, 2017, 10:28 AM IST
ಪ್ಲಾಸ್ಟಿಕ್ ಅಕ್ಕಿ, ಪ್ಲಾಸ್ಟಿಕ್ ಮೊಟ್ಟೆ ಕುರಿತ ಚರ್ಚೆಗಳು ನಡೆಯುತ್ತಲೇ ಇವೆ. ಈ ಚರ್ಚೆಗಳ ನಡುವೆಯೇ ಅದರ ಕುರಿತಾಗಿ ಸಿನಿಮಾವೊಂದು ತಯಾರಾಗುತ್ತಿದೆ. ಅದು “ಶ್ರೀ ಸಾಮಾನ್ಯ’. “ಗುಣವಂತ’ ಮಂಜು ಈ ಸಿನಿಮಾದ ನಿರ್ದೇಶಕರು. ನಿರ್ದೇಶನವಷ್ಟೇ ಅಲ್ಲ, ಚಿತ್ರದ ಮುಖ್ಯಭೂಮಿಕೆಯಲ್ಲೂ ಅವರೇ ನಟಿಸಿದ್ದಾರೆ. ಇದು ಪರಿಸರ ಕಾಳಜಿ ಕುರಿತ ಸಿನಿಮಾವಂತೆ.
ಇಲ್ಲಿ ಸದ್ಯ ಚರ್ಚೆಗೆ ಗ್ರಾಸವಾಗಿರುವ ಪ್ಲಾಸ್ಟಿಕ್ ಅಕ್ಕಿ ಸೇರಿದಂತೆ ಪರಿಸರಕ್ಕೆ ಹಾನಿಯುಂಟಾಗುವ ಅಂಶಗಳ ಕುರಿತು ಹೇಳಿದ್ದಾರಂತೆ. ಪ್ಲಾಸ್ಟಿಕ್ ಬಳಕೆಯನ್ನು ನಾವು ಕಡಿಮೆ ಮಾಡಿ, ಪರಿಸರ ಸಂರಕ್ಷಿಸದೇ ಹೋದರೆ ಅದರಿಂದ ಏನೇನು ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂಬುದನ್ನು ಇಲ್ಲಿ ಹೇಳಿದ್ದಾರಂತೆ ಮಂಜು.
“ಇಲ್ಲಿ ಪರಿಸರ ಕಾಳಜಿ ಬಗ್ಗೆ ಹೇಳಿದ್ದೇನೆ. ಸಾಮಾನ್ಯವಾಗಿ ಒಬ್ಬ ಮನುಷ್ಯನಿಗೆ ಒಂದು ಮರ ಇರಬೇಕು. ಆದರೆ ಈಗ ಹತ್ತು ಜನರಿಗೆ ಒಂದು ಮರ ಎಂಬಂತಾಗಿದ್ದು, ಮರದ ಬದಲು ಒಬ್ಬ ಮನುಷ್ಯನಿಗೆ ಎರಡು ವಾಹನವಿದೆ. ಈ ತರಹ ಆದಾಗ ಆಗುವ ತೊಂದರೆಗಳ ಬಗ್ಗೆ ಇಲ್ಲಿ ಹೇಳಿದ್ದೇನೆ’ ಎನ್ನುವುದು ಮಂಜು ಮಾತು.
ಅಂದಹಾಗೆ, ಚಿತ್ರದಲ್ಲಿ ಮಂಜು ಅಂಧನಾಗಿ ಪರಿಸರಕ್ಕಾಗಿ ಹೋರಾಡುವ ಪರಿಸರ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಭಾರತಿ ಎಂ ಸುರೇಶ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ನಿರ್ಮಾಪಕರ ಮಗಳು ಶಕ್ತಿ ಎಸ್ ಶೆಟ್ಟಿ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಚಿತ್ರಕ್ಕೆ ಇಂದ್ರಸೇನಾ ಅವರ ಸಂಗೀತವಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ ಮಂಜು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.