“ದಿ ಕಾಶ್ಮೀರಿ ಫೈಲ್ಸ್” ಚಿತ್ರಕ್ಕೆ ನೀಡಿದ ಪ್ರೋತ್ಸಾಹ “ದಂಡಿ”ಗೂ ನೀಡಿ: ವಿಶಾಲ್ ರಾಜ್
ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟದ ಕಥೆಯ ಚಿತ್ರ
Team Udayavani, Mar 30, 2022, 6:04 PM IST
ಶಿರಸಿ: “ದಿ ಕಾಶ್ಮೀರಿ ಫೈಲ್ಸ್” ಚಿತ್ರಕ್ಕೆ ನೀಡಿದ ಪ್ರೋತ್ಸಾಹವನ್ನು ಏ.8ರಂದು ಬಿಡುಗಡೆ ಆಗಲಿರುವ ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ಒಳಗೊಂಡ ದಂಡಿ ಚಲನಚಿತ್ರಕ್ಕೂ ನೀಡುವಂತೆ ಚಿತ್ರದ ನಿರ್ದೇಶಕ ವಿಶಾಲ್ ರಾಜ್ ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಂಡಿ ಸಿನಿಮಾ ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರ ಕಥೆಯನ್ನು ಒಳಗೊಂಡಿದೆ. ಗುಜರಾತ್ ನಲ್ಲಿ ನಡೆದ ಹೋರಾಟಗಳು ಅಂದಿನ ಕಾಲದಲ್ಲೂ ಒಂದೇ ಸಮಯಕ್ಕೆ ಇಲ್ಲೂ ನಡೆದಿವೆ ಎಂಬುದೇ ಅಚ್ಚರಿ. ಚಾರಿತ್ರಕವಾದ ದಂಡಿಯ ಈ ಚರಿತ್ರೆ ಇಡೀ ಕರಾವಳಿ ಕರ್ನಾಟಕದ ಸುತ್ತಲಿನ ಉಪ್ಪಿನ ಸತ್ಯಾಗ್ರಹದ ಚರಿತ್ರೆಯೇ ಆಗಿದೆ. ಜಿಲ್ಲೆಯ ಅಗೇರ, ಮೊಗೇರ, ಹಾಲಕ್ಕಿ, ಗೌಡ ಸಾರಸ್ವತ, ಹವ್ಯಕ, ದೇಶಾವರಿ ಬ್ರಾಹ್ಮಣ ಸಮುದಾಯಗಳು, ನಾಡವರು, ಖಾರ್ವಿ, ಕುಣಬಿ ಸಮುದಾಯಗಳು ತಮ್ಮ ಹೋರಾಟದ ರೀತಿಯನ್ನು ಚಳುವಳಿಯ ಆಶಯದಂತೆ ರೂಪಿಸಿಕೊಂಡ ಕಥನದ ಕಾದಂಬರಿಯ ಎಳೆಯೇ ಈ ಚಿತ್ರವಾಗಿದೆ ಎಂದರು.
ಹೊನ್ನಾವರ ಸೇರಿಂದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಈ ಸಿನಿಮಾ ಚಿತ್ರೀಕರಣಗೊಂಡಿದೆ. 132ಕ್ಕೂ ಅಧಿಕ ಕಲಾವಿದರು ಇದ್ದು, ಬಹುತೇಕವಾಗಿ ಜಿಲ್ಲೆಯ ಕಲಾವಿದರೇ ಆಗಿದ್ದಾರೆ. 2.08 ಗಂಟೆ ಅವಧಿಯ ಚಿತ್ರವಾಗಿದೆ ಎಂದರು.
ರಾಗಂ ಕಾದಂಬರಿ ಆಧರಿತ ಚಿತ್ರವನ್ನು ಉಷಾರಾಣಿ ಎಸ್.ಪಿ ನಿರ್ಮಾಣ ಮಾಡಿದ್ದಾರೆ. ಯುವಾನ್ ದೇವ್ ನಾಯಕನಾಗಿ, ಶಾಲಿನಿ ಭಟ್ಟ ನಾಯಕಿಯಾಗಿ ದಂಡಿಯ ಜವಬ್ದಾರಿ ನಿರ್ವಹಿಸಿದ್ದಾರೆ. ಹಿರಿಯ ಕಲಾವಿದರಾದ ತಾರಾ ಅನುರಾಧ, ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಇದ್ದಾರೆ.
ಇದನ್ನೂ ಓದಿ:ಆರ್.ಎನ್.ನಾಯಕ್ ಕೊಲೆ ಕೇಸ್ : ಬನ್ನಂಜೆ ರಾಜಾ ಸೇರಿ 9 ಮಂದಿ ದೋಷಿಗಳು
ಈಗಾಗಲೇ ಈ ಚಿತ್ರವು ಬೆಂಗಳೂರಿನಲ್ಲಿ ಫಿಲ್ಮ ಫೆಸ್ಟ್ ನಲ್ಲಿ ದ್ವಿತೀಯ ಸ್ಥಾನ ಪಡೆದಿದೆ. ರಾಜ್ಯದ ಮುಖ್ಯಮಂತ್ರಿ ಹಾಗೂ ಸ್ಪೀಕರ್ ಅವರಿಗೂ ಚಿತ್ರ ತೋರಿಸುವ ಆಸೆ ಇದೆ. ಹಿಂದೆ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ ಪಡೆದ ಚಲನಚಿತ್ರಗಳನ್ನು ತೋರಿಸಲು ಪ್ರತ್ಯೇಕ ಚಿತ್ರಮಂದಿರಗಳೂ ಇದ್ದವು. ಯಾವುದೇ ಚಿತ್ರಕ್ಕೆ ಪ್ರಶಸ್ತಿ ಬಂದರೆ ಜನರಿಗೆ ಅದನ್ನು ತಲುಪಿಸಲು ಚಿತ್ರಮಂದಿರ ಅಗತ್ಯವಿದೆ. ಇಂತಹ ಚಿತ್ರಕ್ಕೆ ಥಿಯೇಟರ್ ಸಿಕ್ಕರೆ ಹತ್ತು ನಿರ್ಮಾಪಕರು, ನಿರ್ದೇಶಕರು ಹುಟ್ಟಿಕೊಳ್ಳುತ್ತಾರೆ. ಇದ್ಯಾವುದೂ ಇಲ್ಲದೇ ಇತಿಹಾಸ, ಕಲಾ ಚಿತ್ರಗಳನ್ನು ಜನರಿಗೆ ತಲುಪಿಸುವದು ಹೇಗೆ? ಎಂಬ ಪರಿಸ್ಥಿತಿಗೆ ಬಂದು ತಲುಪಿದ್ದೇವೆ ಎಂದು ಹೇಳಿದರು.
ಈ ವೇಳೆ ನಿರ್ಮಾಪಕಿ ಉಷಾರಾಣಿ, ನಟ ಯುವಾನ್, ದೇವ ಶಾಲಿನಿ ಭಟ್ಟ, ವೆಂಕಟೇಶ ಮೇಸ್ತ, ಭವಾನಿ ಶಂಕರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.