“ಏನೋ ಆಗಿದೆ…’ ಆಲ್ಬಂ ಸಾಂಗ್ ರಿಲೀಸ್
Team Udayavani, Feb 18, 2018, 11:03 AM IST
ಕನ್ನಡದಲ್ಲಿ ಇತ್ತೀಚೆಗೆ ಆಲ್ಬಂ ಮತ್ತು ಶಾರ್ಟ್ ಫಿಲಂಸ್ ಮೇಕಿಂಗ್ ಟ್ರೆಂಡ್ ಹೆಚ್ಚಾಗುತ್ತಿದೆ. ಆ ಸಾಲಿಗೆ ಹೊಸ ಪ್ರತಿಭೆಗಳು ಸೇರಿ, “ಏನೋ ಆಗಿದೆ..’ ಎಂಬ ಮ್ಯೂಸಿಕ್ ಆಲ್ಬಂ ಮಾಡಿದ್ದಾರೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಬಾಲ್ಯದಿಂದಲೂ ಸಂಗೀತ ಮತ್ತು ನಟನೆಯ ಕಡೆಗೆ ಅಭಿರುಚಿ ಹೊಂದಿದ್ದ ಹರ್ಷಿತಾ ಸುಬ್ರಮಣ್ಯ ಎಂಬ ಹುಡುಗಿ ಈ ಮ್ಯೂಸಿಕ್ ಆಲ್ಬಂ ಮೂಲಕ ಗಾಯಕಿ ಕಂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ “ಏನೋ ಆಗಿದೆ…’ ಮ್ಯೂಸಿಕ್ ಆಲ್ಬಂನ ಬಿಡುಗಡೆ ಸಮಾರಂಭ ನಡೆಯಿತು. ಉದ್ಯಮಿ ಎ.ಎಸ್. ಜಯರಾಮಣ್ಣ, ಸಂಗೀತ ವಿದ್ವಾನ್ ಬಲರಾಮ್, ನಿರ್ಮಾಪಕರಾದ ರಂಗಿತರಂಗ ಪ್ರಕಾಶ್, ರಾಜ್.ಪಿ ಪುರುಷೋತ್ತಮ್ ಪಟೇಲ್ ಇತರರು ಅತಿಥಿಗಳಾಗಿ ಭಾಗವಹಿಸಿ, ತಂಡಕ್ಕೆ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಆಲ್ಬಂನಲ್ಲಿ ಕೆಲಸ ಮಾಡಿರುವ ಕಲಾವಿದರು, ತಂತ್ರಜ್ಞರು ಮತ್ತು ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.
ಸಮೃದ್ದಿ ಕ್ರಿಯೇಷನ್ಸ್ ಬ್ಯಾನರ್‌ನಡಿ ನಿರ್ಮಾಣವಾಗಿರುವ “ಏನೋ ಆಗಿದೆ…’ ಮ್ಯೂಸಿಕ್ ಆಲ್ಬಂಗೆ ನಿರ್ಮಾಪಕಿಯಾಗಿ ಜೀವಿತಾ ಸುಬ್ರಮಣ್ಯ ಬಂಡವಾಳ ಹಾಕಿದ್ದಾರೆ. ಆಲ್ಬಂ ಹಾಡುಗಳಿಗೆ ಶ್ರೀರಾಮ್ ಗಂಧರ್ವ ಸಂಗೀತ ನೀಡಿದ್ದಾರೆ. ಗೌರವ್ ಸಾಹಿತ್ಯ ಬರೆದಿದ್ದಾರೆ. ಆಲ್ಬಂನಲ್ಲಿ ಹರ್ಷಿತಾ ಸುಬ್ರಮಣ್ಯ ಅವರೊಂದಿಗೆ ಪ್ರಶಾಂತ್ ಜೈನ್ ಇತರರು ನಟಿಸಿದ್ದಾರೆ.
“ಬಿಎಂಡಬ್ಲೂ’ ಚಿತ್ರದ ನಿರ್ದೇಶಕ ಗಂಧರ್ವರಾಯ ರಾವತ್ ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ “ಏನೋ ಆಗಿದೆ…’ ಮ್ಯೂಸಿಕ್ ಆಲ್ಬಂ ಮೂಡಿಬಂದಿದೆ. “ಏನೋ ಆಗಿದೆ…’ ಆಲ್ಬಂ ಶೀರ್ಷಿಕೆಗೆ “ಏನೂ ಆಗದೆ…’ ಎಂಬ ಅಡಿಬರಹವಿದೆ. ಇದು ಹದಿ ಹರೆಯದ ಯುವ ಮನಸ್ಸುಗಳ ಪ್ರೀತಿಯ ಪರಿಯನ್ನು ಹೇಳಲಿದೆ. ಈ ಆಲ್ಬಂ ಸಾಂಗ್ ಯು-ಟ್ಯೂಬ್ ಸೇರಿದಂತೆ ಸಾಮಾಜಿಕ ತಾಣಗಳಲ್ಲಿ ಬಿಡುಗಡೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸ್ಕೂಟಿಯಲ್ಲಿಟ್ಟಿದ್ದ ಬಂದೂಕಿನಿಂದ ಆಕಸ್ಮಿಕವಾಗಿ ಗುಂಡು ಸಿಡಿದು ವ್ಯಕ್ತಿ ಮೃತ್ಯು!
Saif; ಸೈಫ್ ಅಲಿ ಖಾನ್ ಮೇಲೆ ದಾಳಿಗೂ ಮೊದಲು 1 ಕೋಟಿ ರೂ.ಗೆ ಬೇಡಿಕೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.