ಮನರಂಜನೆಯ ಕಿರೀಟ


Team Udayavani, Jul 19, 2017, 10:35 AM IST

kireeta.jpg

ಕನ್ನಡದಲ್ಲೀಗ ಹೊಸಬರ ಕಲರವ. ಆ ಸಾಲಿಗೆ “ಕಿರೀಟ’ ಎಂಬ ಚಿತ್ರವೂ ಸೇರಿದೆ. ಈಗಾಗಲೇ ಬಿಡುಗಡೆಗೆ ಸಿದ್ಧವಾಗಿರುವ “ಕಿರೀಟ’ ಈಗಿನ ಜನರೇಷನ್‌ಗೆ ಸಂಬಂಧಿಸಿದ ಚಿತ್ರ ಎಂಬುದು ಚಿತ್ರತಂಡದ ಮಾತು. ಈ ಚಿತ್ರದ ಮೂಲಕ ಕಿರಣ್‌ ನಿರ್ದೇಶಕರಾದರೆ, ಸಮರ್ಥ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು, ನಿರ್ಮಾಪಕ ಚಂದ್ರಶೇಖರ್‌ಗೂ ಇದು ಮೊದಲ ಚಿತ್ರ. ಈ ಕುರಿತು ನಿರ್ದೇಶಕ ಹಾಗೂ ಹೀರೋ ಸಿನಿಮಾ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ.

ಕಿರೀಟದೊಳಗೆ ನೂರೆಂಟು ಅಂಶ…
“ಇದು ನನ್ನ ಮೊದಲ ಚಿತ್ರ. ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳನ್ನು ಬರೆದಿದ್ದೇನೆ. ಚಂದ್ರಶೇಖರ್‌ ಈ ಚಿತ್ರದ ಮೂಲಕ ನಿರ್ಮಾಪಕರಾಗಿದ್ದಾರೆ. ಇಡೀ ಚಿತ್ರ ಬೆಂಗಳೂರಲ್ಲೇ ಸುಮಾರು 80 ದಿನಗಳ ಕಾಲ ಚಿತ್ರೀಕರಣವಾಗಿದೆ. ಈಗಾಗಲೇ ಚಿತ್ರದ ಹಾಡುಗಳಿಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಟ್ರೇಲರ್‌ ಕೂಡ ಜನರಿಗೆ ತಲುಪಿದ್ದು, ಸಿನಿಮಾ ನೋಡುವ ಕುತೂಹಲದಲ್ಲಿದ್ದಾರೆ ಎಂಬುದೇ ಖುಷಿಯ ವಿಷಯ.

ಇದೊಂದು ಮನರಂಜನೆಯ ಚಿತ್ರ. ಇಂದಿನ ವ್ಯವಸ್ಥೆಯಲ್ಲಿ ನಾನು ಎಂಬುದು ಎಲ್ಲರಲ್ಲೂ ಇದೆ. ಪ್ರತಿಯೊಬ್ಬರೂ ತಮಗೆ ತಾವೇ ಗ್ರೇಟ್‌ ಅಂದುಕೊಂಡು, ಜಾತಿ, ಧರ್ಮ, ಆಸ್ತಿ, ಅಂತಸ್ತು ಎಂಬ ಕಿರೀಟವನ್ನು ತಲೆಮೇಲೆ ಹೊತ್ತುಕೊಂಡಿದ್ದಾರೆ. ಒಬ್ಬ ಒಳ್ಳೆಯ ವ್ಯಕ್ತಿ ತನ್ನ ಬದುಕು ಕಟ್ಟಿಕೊಳ್ಳೋಕೆ ಕಷ್ಟಪಡ್ತಾನೆ. ಜೀವನ ಎಂಬುದು ಮನುಷ್ಯನಿಗೆ ಸಿಕ್ಕ ದೊಡ್ಡ ವರ. ಇಲ್ಲಿ ಎಲ್ಲರೂ ಒಂದಿಲ್ಲೊಂದು ಕಮಿಟ್‌ಮೆಂಟ್‌ಗಳಿಂದಲೇ ಬದುಕು ರೂಪಿಸಿಕೊಳ್ಳುತ್ತಿದ್ದಾರೆ.

ಕಳ್ಳ ಇರಬಹುದು, ವೇಶ್ಯೆ ಇರಬಹುದು, ದಡ್ಡ ಇರಬಹುದು, ಜಾಣ ಹೀಗೆ ಒಬ್ಬೊಬ್ಬ ವ್ಯಕ್ತಿ ಒಂದೊಂದು ರೀತಿ ಬದುಕುತ್ತಿದ್ದಾನೆ. ಆದರೆ, ಒಳ್ಳೆಯ ಕಮಿಟ್‌ಮೆಂಟ್‌ಗಳಿಂದ ಬದುಕಬೇಕು ಎನ್ನುವುದು ಮುಖ್ಯ. ಆ ಎಲ್ಲಾ ಅಂಶಗಳ ಪಾಕವೇ “ಕಿರೀಟ” ಎನ್ನುತ್ತಾರೆ ಕಿರಣ್‌. “ಚಿತ್ರದ ಮಧ್ಯಂತರದಲ್ಲಿ ಉಪೇಂದ್ರ ಅವರ ಡೈಲಾಗ್‌ ಬರುತ್ತೆ. ಅದು ಯಾಕೆ ಎಂಬುದಕ್ಕೆ ಚಿತ್ರ ನೋಡಬೇಕು. ನಾನು ಉಪೇಂದ್ರ ಅವರ ಅಭಿಮಾನಿ. ಅವರು ನನ್ನ ಮಾನಸಿಕ ಗುರು.

ಹಾಗಂತ, ಸಿನಿಮಾದಲ್ಲಿ ಎಲ್ಲೂ ಉಪೇಂದ್ರ ಅವರ ಶೇಡ್‌ ಇಲ್ಲ. ಇನ್ನು, ಚಿತ್ರಕ್ಕೆ ಸಮೀರ್‌ ಕುಲಕರ್ಣಿ ಸಂಗೀತ ನೀಡಿದ್ದಾರೆ. ಚಿತ್ರದ ನಾಲ್ಕು ಹಾಡುಗಳನ್ನು ರಚಿಸಿದ್ದೇನೆ. ಪರಮೇಶ್‌ ಕ್ಯಾಮೆರಾ ಹಿಡಿದಿದ್ದಾರೆ. ಶ್ರೀಕಾಂತ್‌ ಸಂಕಲನ ಮಾಡಿದ್ದಾರೆ. ಉಳಿದಂತೆ ವಿಕ್ರಮ್‌, ವಿನೋದ್‌ ಸ್ಟಂಟ್ಸ್‌ ಮಾಡಿದ್ದಾರೆ ಎಂದು ವಿವರ ಕೊಡುವ ನಿರ್ದೇಶಕರು, ಈ ಚಿತ್ರದಲ್ಲಿ ಇನ್ನೊಂದು ವಿಶೇಷವಿದೆ. ಶ್ರೀಮುರಳಿ ಅವರು ವಾಯ್ಸ ನೀಡಿದ್ದಾರೆ. ಇಡೀ ಚಿತ್ರದ ಕಥೆಯನ್ನು ಹೇಳ್ಳೋದು ಅವರೇ. ಅವರ ಮಾತಿನಲ್ಲೇ ಸಿನಿಮಾ ಸಾಗುತ್ತೆ ಎನ್ನುತ್ತಾರೆ ನಿರ್ದೇಶಕರು.

ಮನರಂಜನೆಯ ಪಾಕ
ನಾಯಕ ಸಮರ್ಥ್ಗೆ ಇದು ಮೊದಲ ಚಿತ್ರವಂತೆ. “ನಿರ್ದೇಶಕರು ಕಥೆ, ಪಾತ್ರ ವಿವರಿಸಿದಾಗ, ಅದೊಂದು ಚಾಲೆಂಜಿಂಗ್‌ ಎನಿಸಿತು. ಸ್ಟ್ರಾಂಗ್‌ ಆಗಿರುವ ನಾಲ್ಕು ಶೇಡ್‌ ಬರುವ ಪಾತ್ರವದು. ಮೆಚೂರ್ಡ್ ಹೀರೋ ಮಾಡುವಂತಹ ಪಾತ್ರವನ್ನು ನಾನು ನಿರ್ವಹಿಸಿದ್ದೇನೆ. ಮೊದಲು ಆ ಪಾತ್ರವನ್ನು ನನ್ನ ಕೈಯಲ್ಲಿ ಮಾಡೋಕೆ ಆಗುತ್ತಾ ಎಂಬ ಪ್ರಶ್ನೆ ಎದುರಾಯಿತು. ಆದರೂ, ತಯಾರಿ ಮಾಡಿಕೊಂಡೇ ಮಾಡಿದ್ದೇನೆ.

ಈಗಿನ ಯೂತ್ಸ್ಗೆ ಲೀಡರ್‌ ಆಗಿರುವಂತಹ ಪವರ್‌ಫ‌ುಲ್‌ ಪಾತ್ರ ಮಾಡಿದ್ದು ಖುಷಿ ಕೊಟ್ಟಿದೆ. ಇಲ್ಲಿ ಎಲ್ಲೂ ಕಷ್ಟ ಎನಿಸಲಿಲ್ಲ. ಯಾಕೆಂದರೆ, ನಾನು ದಿಢೀರನೇ ಬಂದು ಹೀರೋ ಆಗಿಲ್ಲ. ರಂಗಭೂಮಿಯಲ್ಲಿ ಕೆಲಸ ಮಾಡಿದವನು ನಾನು. ಎಂಟು ವರ್ಷಗಳ ಕಾಲ ಎಲ್ಲವನ್ನೂ ಕಲಿತಿದ್ದೇನೆ. ಸ್ಟಂಟ್ಸ್‌ ಗೊತ್ತಿದೆ. ಡ್ಯಾನ್ಸ್‌ ಬಗ್ಗೆಯೂ ತಿಳಿದಿದೆ. ಹಲವಾರು ಕಡೆ ನಾಟಕ ಪ್ರದರ್ಶನ ಕೊಟ್ಟಿದ್ದೇನೆ. ಸಿನಿಮಾಗಾಗಿ ತಯಾರಿ ಮಾಡಿಕೊಂಡೇ ಇಲ್ಲಿಗೆ ಬಂದಿದ್ದೇನೆ.

ಹಾಗಾಗಿ ನನಗೆ ಯಾವುದೇ ಕಷ್ಟ ಆಗಲಿಲ್ಲ. ಚಿತ್ರದಲ್ಲಿ ಡಾ.ರಾಜಕುಮಾರ್‌, ವಿಷ್ಣುವರ್ಧನ್‌, ಶಂಕರ್‌ನಾಗ್‌, ಅಂಬರೀಶ್‌ ಸೇರಿದಂತೆ ಕನ್ನಡದ ನಟರ ಕಟೌಟ್‌ನ ಬ್ಯಾಕ್‌ಡ್ರಾಪ್‌ನಲ್ಲಿ ಬರುವ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದು ಖುಷಿ ಕೊಟ್ಟಿದೆ’ ಎನ್ನುತ್ತಾರೆ ಸಮರ್ಥ್. “ಚಿತ್ರದಲ್ಲಿ ನಾನು ಸ್ವತಃ ಸ್ಟಂಟ್ಸ್‌ ಮಾಡಿದ್ದೇನೆ. ರಿಸ್ಕ್ ಇದ್ದರೂ, ಸಹ ಅದನ್ನು ಲೆಕ್ಕಿಸದೆ ಕೆಲಸ ಮಾಡಿದ್ದೇನೆ.

ಇನ್ನು, ವಿಶೇಷವೆಂದರೆ, ಚಿತ್ರದ ಒಂದು ದೃಶ್ಯದಲ್ಲಿ ಹನ್ನೆರೆಡು ಪೇಜ್‌ ಇರುವ ಡೈಲಾಗ್‌ ಅನ್ನು ಸಿಂಗಲ್‌ ಶಾಟ್‌ನಲ್ಲಿ ಹೇಳಿ ಆ ದೃಶ್ಯವನ್ನು ಓಕೆ ಮಾಡಿದ್ದೇನೆ. ಎರಡುವರೆ ನಿಮಿಷದ ಆ ದೃಶ್ಯ ಚಿತ್ರದ ವಿಶೇಷ. ಇನನು ಚಿತ್ರದಲ್ಲಿ ದೀಪ್ತಿ ತಾಪ್ಸೆ, ರಿಷಿಕಾ ಸಿಂಗ್‌, ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ಮಂಜುನಾಥ್‌ ಗೌಡ್ರು ವಿಲನ್‌ ಆದರೆ, ದಿನೇಶ್‌ ಮಂಗಳೂರು ಪೋಷಕ ನಟರಾಗಿ ನಟಿಸಿದ್ದಾರೆ’ ಎನ್ನುತ್ತಾರೆ.

ಚಿತ್ರದಲ್ಲಿ ದೀಪ್ತಿ ಕಾಪ್ಸೆ, ಲೇಖಾ ಚಂದ್ರ ನಾಯಕಿಯರಾಗಿ ನಟಿಸಿದ್ದಾರೆ. ದೀಪ್ತಿ ಇಲ್ಲಿ ಯಾರೂ ಇಲ್ಲದ ಅನಾಥ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರಂತೆ. ಗೊತ್ತು ಗುರಿ ಇಲ್ಲದೇ ಸಿಟಿಗೆ ಬರುವ ಹುಡುಗಿ ಅನುಭವಿಸುವ ಯಾತನೆಗಳನ್ನು ಅವರ ಪಾತ್ರದ ಮೂಲಕ ತೋರಿಸಲಾಗಿದೆಯಂತೆ.

ಲೇಖಾ ಚಂದ್ರ ಸಿನಿಮಾದಲ್ಲಿ ನಟಿಸಿದ ಖುಷಿಯಷ್ಟೇ ಹಂಚಿಕೊಂಡಿದ್ದಾರೆ. ವಿಲನ್‌ ಆಗಿ ನಟಿಸಿದ “ಉಗ್ರಂ’ ಮಂಜು ಸಿನಿಮಾದುದ್ದಕ್ಕೂ ಕಾಣಿಸಿಕೊಂಡ ಖುಷಿ ಹಂಚಿಕೊಂಡರು. ಚಿತ್ರವನ್ನು ಚಂದ್ರಶೇಖರ್‌ ನಿರ್ಮಿಸಿದ್ದಾರೆ. ಅಂದಹಾಗೆ, ಚಿತ್ರಕ್ಕೆ ಸೆನ್ಸಾರ್‌ ಮಂಡಳಿ “ಎ’ ಪ್ರಮಾಣ ಪತ್ರ ನೀಡಿದೆ.

ಟಾಪ್ ನ್ಯೂಸ್

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

Zammer-yathnal

Meeting: ಸಚಿವ ಜಮೀರ್‌ ಭೇಟಿಯಾದ ಶಾಸಕ ಯತ್ನಾಳ್‌! ಹಿಂದಿನ ಉದ್ದೇಶವೇನು ಗೊತ್ತಾ?

ವಂಚನೆಗೀಡಾಗಿ ಪಾಕ್‌ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ

ವಂಚನೆಗೀಡಾಗಿ ಪಾಕ್‌ ಸೇರಿದ್ದ ಭಾರತದ ಮಹಿಳೆ 22 ವರ್ಷ ಬಳಿಕ ಸ್ವದೇಶಕ್ಕೆ

PM Modi: ಕಾಂಗ್ರೆಸ್‌ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು

PM Modi: ಕಾಂಗ್ರೆಸ್‌ ರೈತರಿಗೆ ತಾನೂ ಒಳಿತು ಮಾಡದು ಬೇರೆ ಅವರಿಗೂ ಬಿಡದು

Coimbatore ಸರಣಿ ಸ್ಫೋಟದ ರೂವಾರಿ ಎಸ್‌.ಎ.ಬಾಷಾ ಸಾವು

Coimbatore ಸರಣಿ ಸ್ಫೋಟದ ರೂವಾರಿ ಎಸ್‌.ಎ.ಬಾಷಾ ಸಾವು

ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?

Supreme Court: ಅಲ್ಲು ಅರ್ಜುನ್‌ಗೆ ಹೊಸ ಸಂಕಷ್ಟ: ಬೇಲ್‌ ಪ್ರಶ್ನಿಸಿ ಸುಪ್ರೀಂಗೆ ಮೇಲ್ಮನವಿ?

Bgv-KCV

Belagavi: ಕಾಂಗ್ರೆಸ್‌ ಅಧಿವೇಶನದಿಂದ ಪಕ್ಷದ ಹೋರಾಟಕ್ಕೆ ಹೊಸ ತಿರುವು: ಕೆ.ಸಿ ವೇಣುಗೋಪಾಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ

Beguru Colony Movie: ಟೀಸರ್‌ನಲ್ಲಿ ಬೇಗೂರು ಕಾಲೋನಿ

Neelavanti Movie: ಹಾರರ್‌ ನೀಲವಂತಿ

Neelavanti Movie: ಹಾರರ್‌ ನೀಲವಂತಿ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Pavithra Gowda: 6 ತಿಂಗಳ ಬಳಿಕ ಜೈಲಿನಿಂದ ಬಿಡುಗಡೆಯಾದ ನಟಿ ಪವಿತ್ರಾ ಗೌಡ

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Max Movie: ಮ್ಯಾಕ್ಸ್‌ ಆಡಿಯೋ ಸದ್ದು ಜೋರು

Kiccha Sudeep: ಬಿಗ್‌ ಬಾಸ್‌ಗೆ ಗುಡ್‌ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ

Kiccha Sudeep: ಬಿಗ್‌ ಬಾಸ್‌ಗೆ ಗುಡ್‌ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

9-uv-fusion

UV Fusion: ಆದದ್ದೆಲ್ಲ ಒಳ್ಳೆಯದಕ್ಕೆ ಆಗಿದೆ

2

Mangaluru: ಮಹಿಳೆ ನಾಪತ್ತೆ; ಪ್ರಕರಣ ದಾಖಲು

8-uv-fusion

UV Fusion: ಗೊಂಬೆ ನಿನಗೂ ಬಂತೇ ಅಳಿಯುವ ಕಾಲ

de

Puttur: ವಿದೇಶದಿಂದ ರಜೆಯಲ್ಲಿ ಬಂದಿದ್ದ ಯುವಕ ಹೃದಯಾಘಾತದಿಂದ ನಿಧನ

7-udupi

Request: ಕರಕುಶಲ ಕರ್ಮಿಗಳಿಗೆ ಸಕಾಲದಲ್ಲಿ ಸಾಲ ನೀಡಲು ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಸೂಚಿಸಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.